Advertisements

ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಚಿತ್ರಕ್ಕೆ ಕಂಟಕ

ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ. ಈ ಸಿನಿಮಾವನ್ನು ರಿಲೀಸ್ ಮಾಡದಂತೆ ಬೆಂಗಳೂರು ಭೂಗತ ಲೋಕದ ಮೊದಲ ಡಾನ್ ಎಂದು ಕರೆಯಲ್ಪಡುವ ಜಯರಾಜ್ ಪುತ್ರ ಅಜಿತ್ ಜಯರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

Advertisements

ಹೆಡ್ ಬುಷ್ ಸಿನಿಮಾ ಡಾನ್ ಜಯರಾಜ್ ಜೀವನವನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗಿತ್ತು. ಈ ಸಿನಿಮಾದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಅವರೇ ಈ ಹಿಂದೆ ಹೇಳಿದಂತೆ 1970ರ ಕಾಲದಲ್ಲಿ ಬೆಂಗಳೂರಿನಲ್ಲಿ ನಡೆದ ಭೂಗತ ಲೋಕದ ಕಥೆಯಿದೆ ಮತ್ತು ಅಲ್ಲಿ ಜಯರಾಜ್ ಇದ್ದಾರೆ ಎಂದು ಹೇಳಲಾಗಿತ್ತು. ಹಾಗಾಗಿ ತಮ್ಮ ತಂದೆಯ ಸಿನಿಮಾವನ್ನು ಯಾರೂ ಮಾಡದಂತೆ ಫಿಲ್ಮ್ ಚೇಂಬರ್ ಗೆ ಅಜಿತ್ ಜಯರಾಜ್ ಪತ್ರವೊಂದನ್ನು ಕೊಟ್ಟಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

Advertisements

ಫಿಲ್ಮ್ ಚೇಂಬರ್ ಗೆ ಕೊಟ್ಟ ಪತ್ರದಲ್ಲಿ ‘ನನ್ನ ತಂದೆ ಜಯರಾಜ್ ಕುರಿತಾಗಿ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ, ನಟ ಡಾಲಿ ಧನಂಜಯ್ ಅವರು ನನ್ನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾಗಿ ನನ್ನ ತಂದೆಯ ಕುರಿತಾಗಿ ಯಾರೂ ಸಿನಿಮಾ ಮಾಡಬಾರದು. ಒಂದು ವೇಳೆ ಮಾಡಿದರೆ, ಕಾನೂನು ರೀತಿಯಲ್ಲಿ ಕ್ರಮ ತಗೆದುಕೊಳ್ಳುವುದಾಗಿ’ ಅವರು ಬರೆದಿದ್ದಾರೆ. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

Advertisements

ಇತ್ತೀಚೆಗಷ್ಟೇ ಹೆಡ್ ಬುಷ್ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಧನಂಜಯ್ ನಾಯಕನಾದರೆ, ಪಾಯಲ್ ರಜಪೂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್, ಶ್ರುತ ಹರಿಹರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ ಸೇರಿದಂತೆ ಹೆಸರಾಂತ ಕಲಾವಿದೇ ಈ ಸಿನಿಮಾದಲ್ಲಿ ಇದ್ದಾರೆ.

Advertisements
Exit mobile version