Connect with us

ನಾಯಿ ಕಚ್ಚಿ ಕಾರ್ಮಿಕ ಸಾವು- ಒಡತಿ ವಿರುದ್ಧ ಕೇಸ್

ನಾಯಿ ಕಚ್ಚಿ ಕಾರ್ಮಿಕ ಸಾವು- ಒಡತಿ ವಿರುದ್ಧ ಕೇಸ್

ಬೆಂಗಳೂರು: ನಾಯಿ ಕಾರ್ಮಿಕನ ಮೇಲೆ ದಾಳಿ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ಕಾರ್ಮಿಕ ಸಾವನ್ನಪ್ಪಿದ್ದಾನೆ. ನಾಯಿಯ ಒಡತಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ನಗರದ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನಾಯಿ ದಾಳಿಗೆ ಒಳಗಾಗಿ 36 ವರ್ಷದ ಕಾರ್ಮಿಕ ನರಸಿಂಹ ಸಾವನ್ನಪ್ಪಿದ್ದಾರೆ. ಹೀಗಾಗಿ ಪಿಟ್‍ಬುಲ್ ನಾಯಿಯ ಒಡತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಟ್ಟೂರು ಲೇಔಟ್‍ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ನಾಯಿ ದಾಳಿ ಮಾಡಿದ್ದು, ಕಾರ್ಮಿಕ ಸಾವನ್ನಪ್ಪಿದ್ದಾನೆ. ನಿರ್ಮಾಣ ಹಂತದ ಕಟ್ಟದ ಮೆಟ್ಟಿಲುಗಳ ಕೆಳಗೆ ಕಾರ್ಮಿಕ ಮಲಗಿದ್ದ. ನಾಯಿ ತನ್ನ ಮನೆಯೊಡತಿಯಿಂದ ತಪ್ಪಿಸಿಕೊಂಡು ಬಂದು ಕಾರ್ಮಿಕನ ಮೇಲೆ ದಾಳಿ ನಡೆಸಿದೆ.

ನಾಯಿ ಕಾರ್ಮಿಕನ ಮೇಲೆ ಹಾರಿ ಕುತ್ತಿಗೆಗೆ ಬಾಯಿ ಹಾಕಿದ್ದು, ಬಳಿಕ ಅಪಾರ ಪ್ರಮಾಣದ ರಕ್ತಸ್ರಾವವಾಗಿದೆ. ಈ ವೇಲೆ ಒಡತಿ ನಾಯಿಯನ್ನು ಹಿಡಿಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.

ಗಾಯಗೊಂಡ ಕಾರ್ಮಿಕ ನರಳಾಡುತ್ತಿರುವುದನ್ನು ಕಂಡು ಸ್ಥಳೀಯರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದು, ರಕ್ತಸ್ರಾವವಾಗುತ್ತಿರುವುದನ್ನು ಕಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ವೈದ್ಯರು ಸಾವನ್ನಪ್ಪಿರುವ ಕುರಿತು ಖಚಿತಪಡಿಸಿದ್ದಾರೆ. ನಿರ್ಲಕ್ಷದಿಂದಾಗಿ ಸಾವಿಗೆ ಕಾರಣರಾಗಿದ್ದಾರೆ ಎಂದು ಸಂಬಂಧಿಸಿದ ಐಪಿಸಿ ಸೆಕ್ಷನ್ ಅಡಿಯಲ್ಲಿ ನಾಯಿಯ ಒಡತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Advertisement
Advertisement