– ನಿದ್ದೆಗೆ ಜಾರಿದ ನಗರಸಭೆ ಸಿಬ್ಬಂದಿ
ಬೀದರ್: ಒಂದೇ ದಿನ ನಗರದ ವಿವಿಧ ಬಡಾವಣೆಯಲ್ಲಿ ಸುಮಾರು 10ಕ್ಕೂ ಹೆಚ್ಚು ಜನರನ್ನು ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿರುವ ಘಟನೆ ಬೀದರ್ ನಡಲ್ಲಿ ನಡೆದಿದೆ
ಬೀದಿನಾಯಿಗಳು ಏಕಾಏಕಿ ಎಗರಿ ಜನರನ್ನು ಕಚ್ಚಿ ಗಾಯಗೊಳಿಸುತ್ತಿವೆ. ನಗರದ ಪ್ರಮುಖ ಬಡಾವಣೆಗಳಾದ ಹಾರೂಗೆರೆ, ನೌದಗೆರಾ, ಮೈಲೂರ ರಸ್ತೆ, ಓಲ್ಡ್ ಸಿಟಿ, ನಯಾಕಮಾನ ಸೇರಿದಂತೆ ಹಲವೆಡೆ ದಾಳಿ ಮಾಡಿ ಗಂಭೀರವಾಗಿ ಗಾಯಾಳುಗಳನ್ನು ಮಾಡಿವೆ. ರಸ್ತೆಯಲ್ಲಿ ಹೋಗುತ್ತಿದ್ದ 10ಕ್ಕೂ ಹೆಚ್ಚು ಸಾರ್ವಜನಿಕರ ಮೇಲೆ ಬೀದಿನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿವೆ.
ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆ ಸೇರಿದಂತೆ ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ವಾನಗಳ ದಾಳಿಯಿಂದಾಗಿ ನಗರದ ಜನರು ಭಯ ಭೀತರಾಗಿದ್ದು, ಬೀದಿ ನಾಯಿಗಳನ್ನು ಕಂಡರೆ ಹೆದರಿ ಓಡಾಡುವಂತಾಗಿದೆ. ಮಕ್ಕಳು ಕೂಡ ಶಾಲೆಗೆ ಹೋಗುವ ವೇಳೆ ಭಯದಿಂದ ಹೋಗಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೀದಿ ನಾಯಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಬೇಕಿರುವ ನಗರಸಭೆ ಮಾತ್ರ ನಿದ್ದೆಗೆ ಜಾರಿದೆ. ನಿರ್ಲಕ್ಷ್ಯ ಮಾಡುತ್ತಿರುವ ಜಿಲ್ಲಾಡಳಿತ ಹಾಗೂ ನಗರಸಭೆಗೆ ಗಡಿ ಜಿಲ್ಲೆಯ ಜನರು ಮಾತ್ರ ಛೀಮಾರಿ ಹಾಕುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ನಗರಸಭೆಯ ಅಧಿಕಾರಿಗಳು ಕುಂಭ ಕರ್ಣ ನಿದ್ದೆಯಿಂದ ಎದ್ದು ನಗರದ ಜನರನ್ನು ಶ್ವಾನಗಳ ದಾಳಿಯಿಂದ ಕಾಪಾಡುತ್ತಾರಾ ಎಂದು ಕಾದು ನೋಡಬೇಕಾಗಿದೆ.