ಬೆಂಗಳೂರು: ಮೂರು ಮಕ್ಕಳಿಗೆ ಜನ್ಮ ನೀಡಿದ ತಾಯಿಗೆ 6 ಲಕ್ಷ ರೂ. ಆಸ್ಪತ್ರೆ ಬಿಲ್ ಕಟ್ಟಿಲ್ಲವೆಂದರೆ ಮಕ್ಕಳನ್ನು ಕೊಡಲ್ಲ ಎಂದು ಆಸ್ಪತ್ರೆ ವೈದ್ಯರು ಗೂಂಡಾಗಿರಿ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೋಸಕೋಟೆಯ ನಿವಾಸಿ ರೇಷ್ಮಾ ಮಲ್ಲೇಶ್ವರಂ 9ನೇ ಕ್ರಾಸ್ನಲ್ಲಿರುವ ನಾರಾಯಣ ಹೆಲ್ತ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕಳೆದ ವಾರ ಅವರಿಗೆ ಹೆರಿಗೆಯಾಗಿದ್ದು, ಇಂದಿಗೂ ವೈದ್ಯರು ಮಕ್ಕಳನ್ನು ಪೋಷಕರಿಗೆ ತೋರಿಸಿಲ್ಲ. ಈಗಾಗಲೇ 3 ಲಕ್ಷ ರೂ. ಬಿಲ್ ಕಟ್ಟಿದ್ರೂ ಮತ್ತೆ 3 ಲಕ್ಷ ರೂ. ಹಣ ಕೇಳಿದ್ದಾರೆ. ಮಕ್ಕಳನ್ನ ತೋರಿಸುವುದಾಗಿ ಐಸಿಯುಗೆ ಕರೆದೊಯ್ಯುವ ವೇಳೆಯಲ್ಲಿ ಬಾಕಿ ಮೂರು ಲಕ್ಷ ಕಟ್ಟುವವರೆಗೂ ಮಕ್ಕಳನ್ನು ನೀಡೋದಿಲ್ಲ ಎಂದು ವೈದ್ಯರು ಗೂಂಡಾಗಿರಿ ನಡೆಸಿದ್ದಾರೆ. ಬಾಣಂತಿಗೆ ಊಟ ನೀಡದೆ, ಮಕ್ಕಳನ್ನು ತೋರಿಸಿದೆ ಆಸ್ಪತ್ರೆ ಸಿಬ್ಬಂದಿ ಕಿರುಕುಳ ನೀಡಿದ್ದಾರೆ.
Advertisement
Advertisement
ಈ ಬಗ್ಗೆ ಮಾಧ್ಯಮಗಳಿಗೆ ವಿಷಯ ತಿಳಿಸಿದ್ದಕ್ಕೆ ಬಾಣಂತಿ, ಮಕ್ಕಳನ್ನು ಹೊರಹಾಕಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಮಾಧ್ಯಮಗಳ ಮೇಲೂ ಗೂಂಡಾಗಿರಿ ನಡೆಸಿ ಕ್ಯಾಮೆರಾ ಒಡೆಯಲು ಮುಂದಾಗಿದ್ದರು.
Advertisement
ನಂತರ ಪೋಷಕರು ಬಾಣಂತಿ ಹಾಗೂ ಮಕ್ಕಳನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಡಿಸ್ಜಾರ್ಜ್ ಮಾಡದೆ ಬಂದಿರೋದ್ರಿಂದ ಅಡ್ಮಿಟ್ ಮಾಡಿಕೊಳ್ಳೋಕೆ ಆಗಲ್ಲ ಎಂದು ಕೆಸಿ ಜರ್ನಲ್ ಆಸ್ಪತ್ರೆಯಿಂದ ಕೂಡ ವಾಪಸ್ ಕಳುಹಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಹಿಳೆಯನ್ನು ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ. ಡಿಸ್ಚಾರ್ಜ್ ಆದ ನಂತರ ಬಾಣಂತಿ ಮಕ್ಕಳೊಂದಿಗೆ ಹೊಸಕೋಟೆಗೆ ತೆರಳಿದ್ದಾರೆ.
https://youtu.be/6e7unazDKdI