Connect with us

Bengaluru City

‘ಸಾಹೇಬ’ರ ಆದೇಶದಂತೆ ನನ್ನ ಬಂಧನವಾಯ್ತು- ಸಿದ್ದು ಬಳಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಕೆಶಿ

Published

on

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಡಿಸಿಎಂ ಪರಮೇಶ್ವರ್ ಇಂದು ಭೇಟಿ ಮಾಡಿದ್ದಾರೆ. ಈ ವೇಳೆ ಡಿಕೆಶಿ, ಸಿದ್ದರಾಮಯ್ಯ ಅವರ ಬಳಿಕ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಸಿದ್ದು ಬಳಿ ಮಾತನಾಡಿದ ಡಿಕೆಶಿ, ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ನನ್ನ ಏಕೆ ಅರೆಸ್ಟ್ ಮಾಡಿದ್ದರು ಎಂಬುದು ನನಗೆ ಗೊತ್ತಿಲ್ಲ. ಅಧಿಕಾರಿಗಳು ನನಗೆ ವಿಚಾರಣೆಗೆ ಹಾಜುರಾಗುವಂತೆ ಹೇಳಿದ್ದರು. ನಾನು ವಿಚಾರಣೆಗೆ ಹಾಜರಾಗಿದ್ದೆ. ನಾಲ್ಕು ದಿನಗಳ ಕಾಲ ಅಧಿಕಾರಿಗಳು ನನ್ನನ್ನು ವಿಚಾರಣೆ ನಡೆಸಿದ್ದರು. ಆದರೆ ಇದ್ದಕ್ಕಿದ್ದಂತೆ ಅವರು ನನ್ನನ್ನು ಅರೆಸ್ಟ್ ಮಾಡಿದ್ದರು. ಏಕೆ ಅರೆಸ್ಟ್ ಮಾಡಿದರು ಎಂಬುದು ನನಗೂ ಗೊತ್ತಾಗಲಿಲ್ಲ. ನನ್ನನ್ನು ಬಂಧಿಸಿರುವುದನ್ನು ನೋಡಿದ ನನ್ನ ವಕೀಲರಿಗು ಕೂಡ ಶಾಕ್ ಆಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಡಿಕೆಶಿ ಮನೆಗೆ ಸಿದ್ದರಾಮಯ್ಯ, ಪರಮೇಶ್ವರ್, ಮುನಿಯಪ್ಪ ಭೇಟಿ – ‘ಬಂಡೆ’ ಆಲಂಗಿಸಿ ಭಾವುಕರಾದ ಪರಂ

ನನ್ನನ್ನು ಈಗಲೇ ಅರೆಸ್ಟ್ ಮಾಡಿ ಎಂದು ಇಡಿ ಅಧಿಕಾರಿಗಳಿಗೆ ಸಾಹೇಬ್ ಆದೇಶಿಸಿದ್ದರು. ಆ ಸಾಹೇಬರ ಆದೇಶದಂತೆ ಅಧಿಕಾರಿಗಳು ನನ್ನನ್ನು ಬಂಧಿಸಿದ್ದಾರೆ. ಈ ವೇಳೆ ನಾನು ಏಕೆ ನನ್ನನ್ನು ಅರೆಸ್ಟ್ ಮಾಡಿದ್ದೀರಿ ಎಂದು ಪ್ರಶ್ನಿಸಿದಾಗ ಅವರು ‘ಮೇಲಿನ ಸಾಹೇಬರು ಹೇಳಿದಂತೆ ನಾವು ಮಾಡುತ್ತಿದ್ದೇವೆ. ಅವರು ಹೇಳಿದ್ದನ್ನು ಮಾಡುವುದು ನಮ್ಮ ಕೆಲಸ ಎಂದು ಇಡಿ ಅಧಿಕಾರಿಗಳು ಉತ್ತರಿಸಿದ್ದರು ಎಂದು ಡಿಕೆಶಿ ತಿಳಿಸಿದ್ದಾರೆ.

ನನ್ನನ್ನು ಬಂಧಿಸಿದ್ದಕ್ಕೆ ಇಡಿ ಅಧಿಕಾರಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಅರೆಸ್ಟ್ ಮಾಡುವ ಕೇಸಲ್ಲ ಸಾರ್ ಎಂದು ಹೇಳಿದರೂ ಯಾಕೆ ಅರೆಸ್ಟ್ ಮಾಡಿ ಎಂದು ಹೇಳುತ್ತಿದ್ದಾರೆ ಎಂಬುದು ನಮಗೆ ತಿಳಿಯುತ್ತಿಲ್ಲ. ಆದರೆ ನಾವು ಮೇಲಿನವರ ಆದೇಶವನ್ನು ಪಾಲಿಸದೇ ವಿಧಿಯಿಲ್ಲ ಎಂದು ಕೆಲ ಇಡಿ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.