Connect with us

Districts

ಕಾಂಗ್ರೆಸ್ ಹೋರಾಟದ ಪಕ್ಷ, ಇಲ್ಲಿ ಹೊಂದಾಣಿಕೆ ರಾಜಕಾರಣ ಇಲ್ಲ: ಡಿಕೆ.ಸುರೇಶ್

Published

on

Share this

– ಹೈಕಮಾಂಡ್ ಸೂಚಿಸಿದ ವ್ಯಕ್ತಿ ಮುಖ್ಯಮಂತ್ರಿ ಆಗುತ್ತಾರೆ

ಹಾಸನ: ಶಾಸಕರು ಯಾರು ಮುಖ್ಯಮಂತ್ರಿ ಆಗಬೇಕು ಎಂದು ನಿರ್ಧರಿಸುತ್ತಾರೋ ಅದರಂತೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಇದನ್ನೂ ಓದಿ:  ಅಜ್ಜಿಗಾಗಿ ಆಸ್ಪತ್ರೆಯಲ್ಲಿಯೇ ವಿವಾಹವಾದ ಮೊಮ್ಮಗಳು

ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರೋಧಿಸಿ ಸರ್ಕಾರದ ವಿರುದ್ಧ ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಜನಪ್ರತಿನಿಧಿಯಾಗಿ ಸುಮಲತಾ ಅವರು ಪ್ರಶ್ನೆ ಮಾಡಿದ್ದಾರೆ. ಈಗ ಅದು ಬೇರೆ ಬೇರೆ ಸ್ವರೂಪ ಪಡೀತಿದೆ. ತಕ್ಷಣ ಈ ಬಗ್ಗೆ ಟೆಕ್ನಿಕಲ್ ಟೀಂ ಬಂದು ತನಿಖೆ ಮಾಡಲಿ. ಅಕ್ರಮ ಗಣಿಗಾರಿಕೆ ಬಗ್ಗೆ ಏನೇ ತನಿಖೆ ಮಾಡಿದರೂ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದಿದ್ದಾರೆ.

ಕುಮಾರಸ್ವಾಮಿ, ಸುಮಲತಾ ಇಬ್ಬರೂ ದೊಡ್ಡ ನಾಯಕರಿದ್ದಾರೆ. ಅವರ ಬಗ್ಗೆ ಚರ್ಚೆ ಮಾಡಲ್ಲ. ನನಗೆ ಕುಮಾರಸ್ವಾಮಿ, ಸುಮಲತಾ ಎಲ್ಲರ ಬಗ್ಗೆಯೂ ಸಾಫ್ಟ್ ಕಾರ್ನರ್ ಇದೆ. ಆದರೆ ಕೆಆರ್‍ಎಸ್ ಬಿರುಕು ಬಿಟ್ಟಿದೆ ಎಂಬ ಪ್ರಶ್ನೆ ಆತಂಕ ಉಂಟುಮಾಡುವಂತದ್ದಾಗಿದೆ. ಅದನ್ನು ನಿವಾರಿಸುವ ಹೊಣೆ ರಾಜ್ಯ ಸರ್ಕಾರದ್ದಾಗಿದೆ. ಕೆಆರ್‍ಎಸ್ ನಮ್ಮ ರಾಜ್ಯದ ಆಸ್ತಿಯಾಗಿದೆ. ಎರಡು ರಾಜ್ಯದ ರಾಜಕಾರಣ ಕೆಆರ್‍ಎಸ್ ಮೇಲೆ ನಡೆಯುತ್ತಿದೆ. ಇದು ನಮಗೆ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಕೆಆರ್‍ಎಸ್ ಅಣೆಕಟ್ಟೆ ಬಿರುಕಿನ ಬಗ್ಗೆ ತನಿಖೆ ಮಾಡಿಸಿ ಜನರ ಆತಂಕ ನಿವಾರಿಸಬೇಕಿದೆ ಎಂದು ಡಿಕೆ.ಸುರೇಶ್ ಹೇಳಿದ್ದಾರೆ.

ಇದೇ ವೇಳೆ, ಕಾಂಗ್ರೆಸ್ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ರೇವಣ್ಣ ಆರೋಪಕ್ಕೆ ತಿರುಗೇಟು ನೀಡಿದ ಅವರು, ಯಾರು ಯಾರ ಮನೆಗೆ ಹೋಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ ರೇವಣ್ಣ ಎಲ್ಲರ ಜೊತೆಯೂ ಚೆನ್ನಾಗಿದ್ದಾರೆ. ಎಲ್ಲರ ಮನೆಗೂ ಹೋಗ್ತಾರೆ ಅಂತಾರೆ. ಕಾಂಗ್ರೆಸ್ ಹೋರಾಟದ ಪಕ್ಷ. ಇಲ್ಲಿ ಹೊಂದಾಣಿಕೆ ರಾಜಕಾರಣ ಇಲ್ಲ. ಅಧಿಕಾರ ಇರಲಿ ಇಲ್ಲದಿರಲಿ ಯಾರಿಗೂ ಶರಣಾಗುವುದಿಲ್ಲ ಎಂದರು. ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಡೆಯುತ್ತಿರುವ ಕಿತ್ತಾಟಕ್ಕೆ ಪ್ರತಿಕ್ರಿಯಿಸಿ, ಯಾವುದೇ ಜಿಲ್ಲೆಗೆ ಹೋದರೂ ಅಲ್ಲಿ ಅವರು ತಮಗೆ ಬೇಕಾದವರು ಮುಖ್ಯಮಂತ್ರಿ ಆಗಲಿ ಅಂತಾರೆ. ಎಲ್ಲ ಪಕ್ಷದಲ್ಲೂ ಇದು ಇದ್ದೇ ಇದೆ. ಮುಖ್ಯಮಂತ್ರಿ ಆಗಲು ಹಲವರು ಅರ್ಹರಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಮುಖ್ಯಮಂತ್ರಿ ಪದವಿ ಕೇಳಬಹುದು. ಆದರೆ ನಮ್ಮ ಪಕ್ಷದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಅಂದಿನ ಸಂದರ್ಭದಲ್ಲಿ ಶಾಸಕರು ಯಾರು ಮುಖ್ಯಮಂತ್ರಿ ಆಗಬೇಕು ಎಂದು ನಿರ್ಧರಿಸುತ್ತಾರೋ ಅದರಂತೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ನುಡಿದಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement