Connect with us

ಬಿಗ್‍ಬಾಸ್ ನಗದು ಬಹುಮಾನಕ್ಕಿಂತಲೂ ಹೆಚ್ಚಿನದ್ದನ್ನು ಸಂಪಾದಿಸಿದ್ದಾರೆ ದಿವ್ಯಾ

ಬಿಗ್‍ಬಾಸ್ ನಗದು ಬಹುಮಾನಕ್ಕಿಂತಲೂ ಹೆಚ್ಚಿನದ್ದನ್ನು ಸಂಪಾದಿಸಿದ್ದಾರೆ ದಿವ್ಯಾ

ಬಿಗ್‍ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಅತಿಹೆಚ್ಚು ಅಭಿಮಾನಿಗಳನ್ನು, ವೀಕ್ಷಕರನ್ನು ಪಡೆದುಕೊಂಡಿದ್ದವರು ದಿವ್ಯಾ ಉರುಡುಗ ಮತ್ತು ಅರವಿಂದ್ ಆಗಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳಿಗಿಂತ ದಿವ್ಯಾ ಉರುಡುಗ ಅವರು ಹೆಚ್ಚಿನದ್ದನ್ನೇ ಸಂಪಾದಿಸಿದ್ದಾರೆ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಬಿಗ್‍ಬಾಸ್ ವಿಜೇತರಿಗೆ 50 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ನೀಡಲಾಗುತ್ತದೆ. ಇದಕ್ಕಿಂತಲೂ ಹೆಚ್ಚಿನದ್ದನ್ನೇ ದಿವ್ಯಾ ಬಿಗ್‍ಬಾಸ್ ಮನೆಯಲ್ಲಿ ಸಂಪಾದಿಸಿದ್ದಾರೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ದಿವ್ಯಾ ಉರುಡುಗ ಸ್ಮಾಲ್ ಸ್ಕ್ರೀನ್‍ನಲ್ಲೇ ಹೆಚ್ಚು ಹೈಲೆಟ್ ಆಗಿರಲಿಲ್ಲ. ಆದರೆ ಈಗ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ.ಪಿ. ಬಿಗ್‍ಬಾಸ್ ಮನೆಯಲ್ಲಿ ತುಂಬಾನೇ ಆಪ್ತವಾಗಿದ್ದರು. ಇಬ್ಬರ ಮಧ್ಯೆ ಪ್ರೀತಿ ಮೊಳೆತಿದ್ದು ವೀಕ್ಷಕರಿಗೆ ಸ್ಪಷ್ಟವಾಗಿತ್ತಾದರೂ ಅವರು ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ನಮ್ಮ ಮಧ್ಯೆ ಇದ್ದಿದ್ದು ಕೇವಲ ಉತ್ತಮ ಗೆಳೆತನ ಎಂದಿದ್ದರು. ಬಿಗ್‍ಬಾಸ್ ಮನೆಯಿಂದ ಹೊರ ಬಂದ ನಂತರದಲ್ಲಿ ಉಳಿದ ವಿಚಾರಗಳ ಬಗ್ಗೆ ಯೋಚಿಸುತ್ತೇವೆ ಎಂದು ಇಬ್ಬರೂ ಆಗಾಗ ಹೇಳಿಕೊಳ್ಳುತ್ತಿದ್ದರು.

ಅನಾರೋಗ್ಯ ಕಾರಣದಿಂದ ದಿವ್ಯಾ ಉರುಡುಗ ಬಿಗ್‍ಬಾಸ್ ಮನೆಯಿಂದ ಹೊರ ನಡೆದಿದ್ದರು. 10 ವಾರಗಳ ಕಾಲ ಅವರು ವೀಕ್ಷಕರನ್ನು ರಂಜಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ಬೇಗ ಗುಣಮುಖರಾಗಲಿ ಎನ್ನುವ ಹಾರೈಕೆಗಳು ಬರುತ್ತಿವೆ. ಈ ಮಧ್ಯೆ ನೆಟ್ಟಿಗರು ಅವರ ಬಗ್ಗೆ ತಮಗನಿಸಿದ್ದನ್ನು ಗೀಚುತ್ತಿದ್ದಾರೆ. ಬಗ್‍ಬಾಸ್ ಮನೆಗೆ ಹೋದ ದಿನದಿಂದ ದಿವ್ಯಾ ಅವರಿಗೆ ಸಾಕಷ್ಟು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿದ್ದಾರೆ ಎನ್ನುವುದು ಗೊತ್ತಿರುವ ವಿಷಯವಾಗಿದೆ. ಆದರೆ ದಿವ್ಯಾ ಮನೆಯಿಂದ ಆಚೆ ಹೋಗುತ್ತಿದ್ದಂತೆ ಬಿಗ್‍ಬಾಸ್‍ನ ಹಲವು ವೀಕ್ಷಕರು ದಿವ್ಯಾ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಅರವಿಂದ್ ಕೆ.ಪಿ.ಹಾಗೂ ದಿವ್ಯಾ ಉರುಡುಗ ಜೋಡಿ ವೀಕ್ಷಕರಿಗೆ ಇಷ್ಟವಾಗಿದೆ. ಹೀಗಾಗಿ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನರು ಅರವಿಂದ್-ದಿವ್ಯಾ ವಿಲ್ ಮಿಸ್ ಯು ಎಂದು ಬರೆದುಕೊಂಡಿದ್ದಾರೆ. ಕೆಲವರು, ದಿವ್ಯಾಗೆ ಸೋಲ್ ಮೇಟ್ ಸಿಕ್ಕಿದ್ದಾರೆ. ಬಿಗ್‍ಬಾಸ್ ಮನೆಯಲ್ಲಿ ನೀಡುವ ಕ್ಯಾಶ್ ಪ್ರೈಸ್‍ಗಿಂತ ಇದು ದೊಡ್ಡದು ಎನ್ನುವ ಅಭಿಪ್ರಾಯ ಹೊರ ಹಾಕಿದ್ದಾರೆ. ದಿವ್ಯಾ ಅವರಿಗೆ ದೊಡ್ಡ್ ಅಭಿಮಾನಿಗಳ ಬಳಗವೇ ಹುಟ್ಟುಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ದಿವ್ಯಾ ಅವರ ಕ್ಯೂಟ್ ಆಗಿರುವ ಸಾಕಷ್ಟು ವೀಡಿಯೋಗಳು ಹರಿದಾಡುತ್ತಿದೆ.

ಕೊರೊನಾ ವೈರಸ್ ಎರಡನೇ ಅಲೆ ನಿಯಂತ್ರಿಸಲು ಕರ್ನಾಟಕ ಸರ್ಕಾರ ಲಾಕ್‍ಡೌನ್ ಘೋಷಣೆ ಮಾಡಿದೆ. ಹೀಗಾಗಿ ಬಿಗ್‍ಬಾಸ್ ಸೀಸನ್ 8 ಅರ್ಧಕ್ಕೆ ನಿಂತಿದೆ. ಎಲ್ಲಾ ಸ್ಪರ್ಧಿಗಳು ತಮ್ಮ ಮನೆ ಸೇರಿದ್ದಾರೆ. ಬಿಗ್‍ಬಾಸ್ ಮನೆಯ ಕೊನೆಯ ಕ್ಷಣಗಳನ್ನು ಮಂಗಳವಾರ ಹಾಗೂ ಬುಧವಾರ ಪ್ರಸಾರ ಮಾಡಲಾಗುತ್ತಿದೆ.

Advertisement
Advertisement