Connect with us

ನಮ್ಮಿಬ್ಬರ ಮಧ್ಯೆ ವೈಬ್, ಸ್ಪಾರ್ಕ್ ಇದೆ: ದಿವ್ಯ ಉರುಡುಗ

ನಮ್ಮಿಬ್ಬರ ಮಧ್ಯೆ ವೈಬ್, ಸ್ಪಾರ್ಕ್ ಇದೆ: ದಿವ್ಯ ಉರುಡುಗ

ಮೂರನೇ ವಾರದಲ್ಲಿ ಹೆಚ್ಚು ಅಟ್ರ್ಯಾಕ್ಷನ್ ಆಗಿದ್ದು ಅರವಿಂದ್ ಮತ್ತು ದಿವ್ಯಾ ಉರುಡುಗ. ಜೋಡಿ ಟಾಸ್ಕ್ ನಲ್ಲಿ ಜೊತೆಯಾದ ದಿವ್ಯಾ ಮತ್ತು ಅರವಿಂದ್ ಹೆಚ್ಚು ಸಮಯವನ್ನ ಸ್ಪೆಂಡ್ ಮಾಡಿದ್ದರಿಂದ ಲವ್ ಬಡ್ರ್ಸ್ ರೀತಿ ಬಿಂಬಿತವಾಗಿರೋದು ಮಾತ್ರ ಸತ್ಯ. ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಸಹ ಈ ಜೋಡಿಯನ್ನ ಪದೇ ಪದೇ ಕಾಲೆಳೆದಿದ್ದುಂಟು. ಸೋಮವಾರದ ಎಪಿಸೋಡ್ ನಲ್ಲಿ ರಾಜೀವ್ ಜೊತೆ ಮಾತನಾಡುತ್ತಿದ್ದ ದಿವ್ಯಾ, ತಮ್ಮ ಮತ್ತು ಅರವಿಂದ್ ನಡುವೆ ಇರೋ ರಿಲೇಶನ್ ಏನು ಅನ್ನೋದನ್ನ ಹೇಳಿದ್ರು.

ಗಾರ್ಡನ್ ಏರಿಯಾದಲ್ಲಿ ಮನೆ ಮಂದಿಯೆಲ್ಲ ಹರಠೆ ಹೊಡಿತಿದ್ರು. ಮಂಜು, ಶಮಂತ್, ಅರವಿಂದ್ ಸೇರಿದಂತೆ ಕೆಲವರು ಈಜಾಡುತ್ತಿದ್ರೆ ಮಹಿಳಾ ಸ್ಪರ್ಧಿಗಳು ಮಾತಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಅಕ್ಕಪಕ್ಕ ಕುಳಿತಿದ್ದ ರಾಜೀವ್ ಮತ್ತು ದಿವ್ಯಾ ಉರುಡುಗ ಮಾತನಾಡುತ್ತಾ ಅರವಿಂದ್ ವಿಷಯವನ್ನ ಎಳೆದು ತಂದರು. ಅರವಿಂದ್ ನನ್ನ ನಡುವೆ ಒಂದು ವೈಬ್, ಒಂದು ಸ್ಪಾರ್ಕ್ ಇದೆಯೇ ಹೊರತು ಅದಕ್ಕಿಂತ ಹೆಚ್ಚಿನದು ಏನೂ ಇಲ್ಲ ಎಂದರು.

ಜೋಡಿ ಟಾಸ್ಕ್ ನಲ್ಲಿ ಜೊತೆಯಾದಗಲೂ ಟಾಸ್ಕ್ ಬಗ್ಗೆ ಹೆಚ್ಚು ಮಾತನಾಡಿದ್ದೇವೆಯೇ ಹೊರತು ಬೇರೆ ಏನೂ ಇಲ್ಲ ಎಂದು ರಾಜೀವ್‍ಗೆ ದಿವ್ಯಾ ಹೇಳಿದರು. ಇಲ್ಲದೇ ಇರೋದನ್ನ ಇದೆ ಅನ್ನೋ ರೀತಿ ಬಿಂಬಿಸೋಕೆ ಹೋಗಬೇಡಿ ಎಂದು ರಾಜೀವ್ ದಿವ್ಯಾಗೆ ಸಲಹೆ ನೀಡಿದರು.

ಇದಕ್ಕೂ ಮೊದಲು ಲಿವಿಂಗ್ ಏರಿಯಾದಲ್ಲಿದ್ದಾಗ ಕಿಚ್ಚನ ಚಪ್ಪಾಳೆ ಪಡೆದ ಅರವಿಂದ್ ಬಗ್ಗೆ ಶಮಂತ್, ವಿಶ್ವನಾಥ್ ಮತ್ತು ದಿವ್ಯಾ ಡಿಸ್ಕಸ್ ಮಾಡುತ್ತಿದ್ದರು. ಮೂರನೇ ವಾರದಲ್ಲಿ ನಾನು ಸಂಪೂರ್ಣವಾಗಿ ಅರವಿಂದ್ ಜೊತೆ ಆಡಿದ್ದೇನೆ. ಹಾಗಾಗಿ ಸುದೀಪ್ ಚಪ್ಪಾಳೆ ಸಿಕ್ಕಿರೋದರಲ್ಲಿ ನನ್ನ ಪಾತ್ರವೂ ಇದೆ ಅಂತ ದಿವ್ಯಾ ಹೇಳಿಕೊಂಡಿದ್ದರು. ಟಾಸ್ಕ್ ಮುಗಿದ ಬಳಿಕವೂ ಈ ಜೋಡಿ ಮಾತ್ರ ಜೊತೆಯಾಗಿ ಹೆಚ್ಚು ಟೈಮ್ ಸ್ಪೆಂಡ್ ಮಾಡುತ್ತಿದೆ.

Advertisement
Advertisement
Advertisement