Connect with us

Cinema

ದಿವ್ಯಾ ರಿಂಗ್ ಈಗ ಅರವಿಂದ್ ಬೆರಳಲ್ಲಿ!

Published

on

ದಿವ್ಯಾ, ಅರವಿಂದ್ ಜೋಡಿ ಬಿಗ್‍ಬಾಸ್ ನೀಡಿದ ಜೋಡಿ ಟಾಸ್ಕ್ ನಿಂದ ಜೊತೆಯಾಗಿರುವ ಈ ಜೋಡಿ ಬಿಟ್ಟು ಹೋಗುವಂತೆ ಕಾಣುತ್ತಿಲ್ಲ. ಪ್ರತಿ ನಿತ್ಯ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಇದೀಗ ಇಬ್ಬರು ಕಣ್ಣೀರು ಹಾಕಿರುವ ದೃಶ್ಯವನ್ನು ಖಾಸಗಿ ವಾಹಿನಿ ತನ್ನ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.

ಮನೆಯ ಸ್ಪರ್ಧಿಗಳಿಗೆ ಬಿಗ್‍ಬಾಸ್ ಒಂದು ಟಾಸ್ಕ್ ನೀಡಿದ್ದರು. ಹುಡುಗರು ತಮ್ಮ ಮನಸ್ಸು ಖದ್ದಿರುವ ಹುಡುಗಿಗೆ ಬಲೂನ್ ನೀಡಬೇಕು. ಹೆಣ್ಣು ಮಕ್ಕಳು ಅವರ ಸ್ವಂತದ ವಸ್ತುವನ್ನು ಹುಡುಗರಿಗೆ ನೀಡಬೇಕು ಎಂದು ಹೇಳಿದ್ದರು. ಈ ವೇಳೆ ದಿವ್ಯಾ ಉರುಡುಗ, ಅರವಿಂದ್ ಅವರಿಗೆ ನೀಡಿರಖೌ ಆ ಒಂದು ವಸ್ತು ತುಂಬಾ ಸ್ಪೆಷಲ್ ಆಗಿ ಕಂಡು ಬಂದಿದೆ.

ನಾನು ತುಂಬಾ ಮಾತನಾಡಲ್ಲ. ಮಾತಿಲ್ಲದೇ ಅವಳಿಗೆ ಅರ್ಥ ಮಾಡಿಕೊಳ್ಳುತ್ತಾಳೆ ಎಂದು ಪ್ರೀತಿಯಿಂದ ಅರವಿಂದ್ ಅವರು ದಿವ್ಯಾಗೆ ಬಲೂನ್ ಕೊಟ್ಟಿದ್ದಾರೆ. ಅರವಿಂದ್ ಜೀವ ಪರ್ಯಂತ ನನ್ನ ಜೊತೆಗೆ ಇರಬೇಕು. ನಾನು ನನ್ನ ಅಪ್ಪಾಜಿ ಕೊಟ್ಟಿರುವ ರಿಂಗ್ ಅನ್ನು ಅರವಿಂದ್‍ಗೆ ಕೊಡುತ್ತೇನೆ ಎಂದು ದಿವ್ಯಾ ಹೇಳುತ್ತಿರುವಾಗ ಅರವಿಂದ್ ಕಣ್ಣೀರು ಹಾಕಿದ್ದಾರೆ. ದಿವ್ಯಾ ತನ್ನ ಕೈಯಲ್ಲಿರುವ ಉಂಗುರವನ್ನು ತೆಗೆದು ಅರವಿಂದ್ ಅವರಿಗೆ ಹಾಕಿ ಪ್ರೀತಿಯಿಂದ ಇಬ್ಬರು ತಬ್ಬಿಕೊಂಡಿದ್ದಾರೆ.

ದಿವ್ಯಾ ಸುರೇಶ್ ನನಗೆ ಮಂಜು ಕಾಣಿಸಲಿಲ್ಲವೆಂದರೆ ನನ್ನ ಸ್ವಂತದ್ದು ಹತ್ತಿರ ಇಲ್ಲ ಎನಿಸುತ್ತದೆ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಚಕ್ರವರ್ತಿ ನನಗೆ ದಿವ್ಯಾ ನೋಡಿದಾಗ ನನ್ನ ಮಗಳು ನೆನಪಾಗುತ್ತಾಳೆ ಎಂದು ಹೇಳಿದ್ದಾರೆ. ಹೀಗೆ ಸ್ಪರ್ಧಿಗಳು ಮನೆಯಲ್ಲಿರುವ ತಮ್ಮ ಪ್ರೀತಿಪಾತ್ರರರಿಗೆ ಉಡುಗೊರೆ ನೀಡಿದ್ದಾರೆ.

ಉಂಗುರ ಕಳೆದುಕೊಂಡ ಅರವಿಂದ್
ಪ್ರೀತಿಯಿಂದ ದಿವ್ಯಾ ಕೊಟ್ಟ ಉಂಗುರವನ್ನು ಅರವಿಂದ್ ಖುಷಿಯಿಂದ ಹಾಕ್ಕೋತಾರೆ. ಸ್ವಲ್ಪ ಹೊತ್ತಾದ ಮೇಲೆ ನೋಡಿದರೆ ಕೈಬೆರಳಲ್ಲಿರೋ ಉಂಗುರ ಕಾಣ್ತಾ ಇಲ್ಲ. ಅರವಿಂದ್ ಇಡೀ ಮನೆ ಹುಡುಕಾಡಿದ್ದಾರೆ. ಸಿಕ್ಕಿದ್ದನ್ನೆಲ್ಲಾ ಜಾಲಾಡ್ತಾರೆ. ಇದು ಗೊತ್ತಾಗಿ ಮನೆಯವರೆಲ್ಲಾ ರಿಂಗ್ ಹುಡುಕುವುದಕ್ಕೆ ಅರವಿಂದ್‍ಗೆ ಸಹಾಯ ಮಾಡ್ತಾರೆ. ಪ್ರತಿಯೊಬ್ಬರು ಉಂಗುರವನ್ನು ಹುಡುಕುತ್ತಿದ್ದಾರೆ.

ಅಲ್ಲೇ ಕೂತಿರೋ ದಿವ್ಯಾಗೆ ಏನಾಗ್ತಿದೆ ಅಂತ ಯಾರೂ ಹೇಳ್ತಿಲ್ಲ. ಹುಡುಕ್ತಾ ಇರುವಷ್ಟೂ ಹೊತ್ತು ಅರವಿಂದ್ ಕಣ್ಣು ಒದ್ದೆಯಾಗಿದೆ. ದಿವ್ಯಾಗೆ ನಾನು ಹೇಳುತ್ತೇನೆ. ಬಿಗ್‍ಬಾಸ್ ಉಂಗುರ ಕಾಣುತ್ತಿಲ್ಲ ಎಂದು ಹೇಳುವಾಗ ಅರವಿಂದ್ ಕಣ್ಣಂಚಲಿ ನೀರು ತುಂಬಿಕೊಂಡಿತ್ತು.

ಅರವಿಂದ್‍ಗೆ ಕಳೆದುಹೋಗಿರೋ ರಿಂಗ್ ಸಿಗುತ್ತಾ? ಕಳ್ಕೊಂಡಿದ್ದು ಬರೀ ಉಂಗುರಾನ ಅಥವಾ ರಿಂಗ್ ಕಳ್ಕೊಂಡಿದ್ರಿಂದ ಸಿಕ್ಕಿರುವ ಇನ್ನೇನೋ ಅವರಿಗೆ ಗೊತ್ತಾಗೋದಕ್ಕಿದೆಯಾ ಎನ್ನುವುದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

Click to comment

Leave a Reply

Your email address will not be published. Required fields are marked *