Connect with us

Cinema

ನಿದ್ದೆಬಾರದೆ ಕಣ್ಣೋಟದಲ್ಲೇ ಮಾತನಾಡ್ಕೊಂಡ ದಿವ್ಯಾ, ಅರವಿಂದ್..!

Published

on

ಬಿಗ್‍ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಮಹಿಳಾ ಸ್ಪರ್ಧಿ ಬಂದಿದ್ದಾರೆ. ಮನೆಯ ಸದಸ್ಯರಿಗೆ ಸಂತೋಷ, ಬೇಸರ ಒಟ್ಟೊಟ್ಟಿಗೆ ಉಂಟಾದಂತಿದೆ. ಆದರೆ ಬಿಗ್‍ಬಾಸ್ ಮನೆಯಲ್ಲಿ ಇಬ್ಬರು ಸ್ಪರ್ಧಿಗಳು ಮಾತ್ರ ನಿದ್ದೆ ಮಾಡದೆ ಕಣ್ಣಂಚಲ್ಲಿ ಪ್ರೀತಿಯನ್ನು ಇಟ್ಟುಕೊಂಡು ಪರಸ್ಪರ ನೋಡಿಕೊಳ್ಳುತ್ತಾ ನಿದ್ದೆ ಬಾರದೇ ರಾತ್ರಿ ಪೂರ್ತಿ ಜಾಗರಣೆ ಮಾಡಿದ್ದಾರೆ.

ದಿವ್ಯಾ ಉರುಡುಗ ಮತ್ತು ಅರವಿಂದ್ ಜೋಡಿ ಟಾಸ್ಕ್ ನಿಂದ ಒಂದಾದ ಈ ಜೋಡಿ ಯಾಕೋ ಬಿಟ್ಟು ಹೋಗುವಂತೆ ಕಾಣುತ್ತಿಲ್ಲ. ಒಬ್ಬರಿಗೊಬ್ಬರು ಅಂಟಿಕೊಂಡು ಒಂದೆ ಕಡೆ ಹೆಚ್ಚು ಸಮಯ ಕಳೆಯುವ ಈ ಜೋಡಿ ರಾತ್ರಿ ನಿದ್ದೆ ಮಾಡದೆ ಕಣ್ಣೋಟದಲ್ಲೇ ಏನೋ ಮಾತನಾಡಿಕೊಂಡಿವೆ. ಬಿಗ್‍ಬಾಸ್ ಕ್ಯಾಮೆರಾಗಳು ಈ ಇಬ್ಬರು ಕಣ್ಣೋಟದ ಸನ್ನೆಯನ್ನು ಸೆರೆ ಹಿಡಿದಿವೆ.

ದಿವ್ಯಾ ಉರುಡುಗ ಮತ್ತು ಅರವಿಂದ್ ಅಕ್ಕಪಕ್ಕದ ಬೆಡ್‍ನಲ್ಲಿಯೇ ಮಲಗಿಕೊಳ್ಳುತ್ತಾರೆ. ಮಧ್ಯರಾತ್ರಿ 1.15 ರ ಸುಮಾರಿಗೆ ಇಬ್ಬರು ಒಬ್ಬರಿಗೊಬ್ಬರು ನೋಡುತ್ತಾ ಮಲಗಿದ್ದಾರೆ. ಇಬ್ಬರೂ ನಿದ್ದೆ ಬಾರದೆ ನಗುತ್ತಾ ಇಬ್ಬರು ನೋಡಿಕೊಳ್ಳುತ್ತಾ ಇದ್ದಾರೆ. ದಿವ್ಯಾ ಕಣ್ಣು ಮುಚ್ಚಿದಂತೆ ಮಾಡಿ ಕಳ್ಳಿಯಂತೆ ಅರವಿಂದ್ ಅವರನ್ನು ನೋಡಿದ್ದಾರೆ. ಇಬ್ಬರು ಕಣ್ಣೋಟದಲ್ಲೇ ಏನೋ ಸಂದೇಶವನ್ನು ಪಾಸ್ ಮಾಡಿಕೊಂಡಿದ್ದಂತು ಸತ್ಯ. ಇದನ್ನು ನೋಡಿದ ವೀಕ್ಷಕರು ಇಲ್ಲಿ ಏನೋ ನಡೆಯುತ್ತಿದೆ. ಇಬ್ಬರು ಲವ್ ಸ್ಟೋರಿ ಸಖತ್ ಕ್ಯೂಟ್ ಆಗಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *