Wednesday, 16th October 2019

Recent News

ರಿಯಲ್ ಸ್ಟಾರ್ ಉಪೇಂದ್ರರನ್ನು ಹಾಡಿ ಹೊಗಳಿದ ಡೈರೆಕ್ಟರ್ ಶಂಕರ್

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ 2.0 ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ರಿಲೀಸ್ ವೇಳೆ ನಿರ್ದೇಶಕ ಎಸ್. ಶಂಕರ್, ಸ್ಯಾಂಡಲ್‍ವುಡ್ ನಟ ರಿಯಲ್ ಸ್ಟಾರ್ ಉಪೇಂದ್ರರನ್ನು ಹಾಡಿ ಹೊಗಳಿದ್ದಾರೆ.

ಟ್ರೇಲರ್ ಬಿಡುಗಡೆ ವೇಳೆ ನಟ ಉಪೇಂದ್ರ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಿರ್ದೇಶಕ ಶಂಕರ್ ಹಾಗೂ ನಟರಾದ ರಜನಿಕಾಂತ್ ಹಾಗೂ ಅಕ್ಷಯ್ ಅವರಿಗೆ ಶುಭಕೋರಿ ವಿಡಿಯೋ ಸಂದೇಶ ರವಾನಿಸಿದ್ದರು. ಈ ವೇಳೆ ನಟ ಉಪೇಂದ್ರ ಅವರು ಶಂಕರ್ ಸರ್ ಹಾಗೂ ರಜನಿ ಸರ್ ಅವರು ನನಗೆ ಒಂದು ಸಲಹೆ ನೀಡಿ ಕೇಳಿದ್ದರು. ಆ ಬಳಿಕ ಮಾತನಾಡಿದ ನಿರ್ದೇಶಕ ಶಂಕರ್, ಉಪೇಂದ್ರ ಅವರಿಗೆ ನಾನೇನು ಟಿಪ್ಸ್ ಕೊಡಲಿ. ಅವರು ಕೂಡ ಒಬ್ಬ ಒಳ್ಳೇ ನಿರ್ದೇಶಕ. ಅವರ ಪಾತ್ರಗಳು ನನಗೆ ತುಂಬಾ ಇಷ್ಟ. ಅವರ ಸಿನಿಮಾಗಳು ನನಗೆ ಸ್ಫೂರ್ತಿ ನೀಡುತ್ತವೆ. ಉಪೇಂದ್ರ ಅವರ ಎ ಸಿನಿಮಾ ನನಗೆ ದೊಡ್ಡ ಸ್ಫೂರ್ತಿ. ನಾನು ಈ ಚಿತ್ರದ ಬಗ್ಗೆ ಚರ್ಚೆ ಮಾಡುವಾಗ ಅಸಿಸ್ಟೆಂಟ್‍ಗಳಿಗೆ ಹೇಳುತ್ತಿದೆ. `ಎ’ ಸಿನಿಮಾ ರೀತಿ ಸಿನಿಮಾ ಸ್ಪೀಡ್ ಆಗಿರಬೇಕು ಎಂದು ಹಾಡಿ ಹೊಗಳಿದ್ದಾರೆ.

ಅಂದಹಾಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಸಖತ್ ಸದ್ದು ಮಾಡುತ್ತಿದ್ದು, ಇದೂವರೆಗೂ ರಜಿನಿ ಸಿನಿಮಾದ ಹಿಂದಿ ಭಾಷೆಯ ಟ್ರೇಲರ್ ಅನ್ನು 44 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಪ್ರಪ್ರಥಮ ಬಾರಿಗೆ ಎಸ್‍ಎಲ್‍ಆರ್ 4ಡಿ ಸೌಂಡಿಂಗ್ ಹೊಂದಿರುವ ಏಕೈಕ ಚಿತ್ರವೆಂಬ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲದೇ ಎರಡು ನಿಮಿಷ 29 ಸೆಕೆಂಡ್ ಗಳ 2.0 ಟ್ರೈಲರ್ ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಎರಡು ಶೇಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *