Connect with us

Bengaluru City

ಕೆಜಿಎಫ್ ಚಾಪ್ಟರ್-2: ರಾಕಿ ಭಾಯ್ & ಅಧೀರನ ಯುದ್ಧಕ್ಕೆ ಫೈಟ್ ಮಾಸ್ಟರ್ಸ್ ರೆಡಿ!

Published

on

ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿರುವ ಕೆಜಿಎಫ್ ಚಾಪ್ಟರ್-2 ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಈ ನಡುವೆ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರದ ಕುರಿತ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.

ಚಿತ್ರದ ಕುರಿತು ಟ್ವಿಟ್ ಮಾಡಿರುವ ಪ್ರಶಾಂತ್ ನೀಲ್, ರಾಕಿ – ಅಧಿರಾ ಎಂದು ಬರೆದು ನಡುವೆ ಜಗಳ ಸಿಂಬಲ್ ಹಾಕಿದ್ದಾರೆ. ಅಂದರೆ ಕ್ಲೈಮ್ಯಾಕ್ಸ್ ನಲ್ಲಿ ಯಶ್ ಹಾಗೂ ಸಂಜಯ್ ದತ್ ನಡುವೆ ಕದನ ನಡೆಯಲಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಖ್ಯಾತ ಆ್ಯಕ್ಷನ್ ಡೈರೆಕ್ಟರ್‍ಗಳಾದ ಅನ್ಬರಿವ್ ಬ್ರದರ್ಸ್ ಫೋಟೋಗಳನ್ನು ಕೂಡ ಅಪ್ಲೋಡ್ ಮಾಡಿದ್ದಾರೆ.

ಈ ಮೂಲಕ ಕೆಜಿಎಫ್ ಚಾಪ್ಟರ್ 2 ಕ್ಲೈಮ್ಯಾಕ್ಸ್ ಶೂಟಿಂಗ್ ಅಡ್ಡಾಗೆ ಡೆಡ್ಲಿ ಬ್ರದರ್ಸ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಅನ್ಬರಿವ್ ಎಂದೇ ಖ್ಯಾತರಾಗಿರುವ ಅನ್ಬುಮಣಿ ಹಾಗೂ ಅರಿವುಮಣಿ ನಿರ್ದೇಶಕ ಪ್ರಶಾಂತ್ ನೀಲ್‍ಗೆ ಜೊತೆಯಾಗಿದ್ದಾರೆ. ಈ ಜೋಡಿ ಮೊದಲು ಕಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿತ್ತು. ಕ್ರಮೇಣ ಕನ್ನಡ, ತೆಲುಗು, ತಮಿಳು, ಹಿಂದಿ ಹೀಗೆ ಹಲವಾರು ಭಾಷೆಯ ಚಿತ್ರಗಳಲ್ಲಿ ತಮ್ಮ ಕರಾಮತ್ತು ತೋರಿದೆ.

ಹೈದರಾಬಾದಿನಲ್ಲಿ ಆರಂಭವಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಕೆಜಿಎಫ್ ಚಾಪ್ಟರ್ 2 ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಲಾಕ್‍ಡೌನ್ ತೆರವುಗೊಂಡ ಬಳಿಕ ಸಿನಿಮಾದ ಚಿತ್ರೀಕರಣ ಮಂಗಳೂರು, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ನಡೆಯಿತು. ಈಗ ಮತ್ತೆ ಕೆಜಿಎಫ್ ಚಾಪ್ಟರ್ 2 ಕ್ಲೈಮ್ಯಾಕ್ಸ್ ಚಿತ್ರೀಕರಣ ಹೈದರಾಬಾದಿನಲ್ಲಿ ನಡೆಯುತ್ತಿದೆ. ಈ ನಡುವೆ ನಿರ್ದೇಶಕರು ಕ್ಲೈಮ್ಯಾಕ್ಸ್ ವಿಚಾರವೊಂದನ್ನು ಹಂಚಿಕೊಂಡು ಸಿನಿರಸಿಕರಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in