Cricket

ಪೊಲಾರ್ಡ್ ಚಾಲೆಂಜ್ ಸ್ವೀಕರಿಸಿದ ದಿನೇಶ್ ಕಾರ್ತಿಕ್

Published

on

Share this

ನವದೆಹಲಿ: ಮುಂಬೈ ಇಂಡಿಯನ್ಸ್ ತಂಡದ ದೈತ್ಯ ಆಲ್‍ರೌಂಡರ್ ಕೀರನ್ ಪೊಲಾರ್ಡ್ ಅವರು ನೀಡಿದ ಚಾಲೆಂಜ್ ಅನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ಅವರು ಸ್ವೀಕರಿಸಿದ್ದಾರೆ.

ಕಳೆದ ಮಂಗಳವಾರ ಮುಂಬೈ ಇಂಡಿಯನ್ಸ್ ತಂಡ ಕೀರನ್ ಪೊಲಾರ್ಡ್ ಅವರು ತಮ್ಮ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಂದ ಚಾಲೆಂಜ್ ತೆಗೆದುಕೊಂಡು ತಮ್ಮ ಗಡ್ಡಕ್ಕೆ ಹೊಸ ಲುಕ್ ಕೊಟ್ಟಿದ್ದರು. ನಂತರ ಅವರು ಈ ಚಾಲೆಂಜ್ ಅನ್ನು ಮಾಡುವಂತೆ ದಿನೇಶ್ ಕಾರ್ತಿಕ್ ಅವರನ್ನು ನಾಮಿನೇಟ್ ಮಾಡಿದ್ದರು.

ಗುರುವಾರ ಪೊಲಾರ್ಡ್ ಅವರ ಬ್ರೇಕ್ ದಿ ಬಿಯರ್ಡ್ ಚಾಲೆಂಜ್ ಅನ್ನು ಸ್ವೀಕಾರ ಮಾಡಿದ ದಿನೇಶ್ ಕಾರ್ತಿಕ್ ಅವರು, ತಮ್ಮ ಗಡ್ಡಕ್ಕೆ ಹೊಸ ರೂಪವನ್ನು ಕೊಟ್ಟು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೊಸ ಸೀಸನ್, ಹೊಸ ಲೆವೆಲಿಗೆ ಹೋಗುವ ಸಮಯವಿದು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪೊಲಾರ್ಡ್ ಅವರ ಚಾಲೆಂಜ್ ಅನ್ನು ಪೂರ್ಣಗೊಳಿಸಿದ್ದಾರೆ.

ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್-2020ಯಲ್ಲಿ ಐದು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಮೂರು ಪಂದ್ಯಗಳನ್ನು ಗೆದ್ದು, ಎರಡು ಪಂದ್ಯಗಳನ್ನು ಸೋತು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರ ಜೊತೆಗೆ ಕೆಕೆಆರ್ ತಂಡದ ನಾಯಕತ್ವವನ್ನು ಬದಲಾವಣೆ ಮಾಡಬೇಕು ಎಂಬ ಕೂಗು ಕೂಡ ಕೇಳಿಬಂದಿದೆ. ಐದು ಪಂದ್ಯಗಳಲ್ಲೂ ನಾಯಕ ದಿನೇಶ್ ಕಾರ್ತಿಕ್ ಅವರು ಉತ್ತಮ ಪ್ರದರ್ಶನ ನೀಡುವುದರಲ್ಲಿ ವಿಫಲವಾಗಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತಿದ್ದರೂ ಕೂಡ, ಆಡಿದ ಆರು ಪಂದ್ಯಗಳಲ್ಲಿ ನಾಲ್ಕುರಲ್ಲಿ ಗೆದ್ದು ಎರಡು ಪಂದ್ಯಗಳಲ್ಲಿ ಸೋತು ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಬಾರಿ ಐಪಿಎಲ್‍ನಲ್ಲಿ ಅಬ್ಬರಿಸುತ್ತಿರುವ ಕೀರನ್ ಪೊಲಾರ್ಡ್ ಅವರು, ಮುಂಬೈ ಮಧ್ಯಮ ಕ್ರಮಾಂಕದ ಆಧಾರ ಸ್ಥಂಭವಾಗಿದ್ದಾರೆ. ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್ ಮೂರಲ್ಲೂ ಪೊಲಾರ್ಡ್ ಮಿಂಚುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

Advertisement
Advertisement