Davanagere
ನನ್ನ ಸಿನಿಮಾ ನೋಡದಿದ್ದರೂ ಪರವಾಗಿಲ್ಲ, ಅಣ್ಣನ ಸಿನಿಮಾ ನೋಡಿ – ಧ್ರುವ ಭಾವುಕ ನುಡಿ

ದಾವಣಗೆರೆ: ನನ್ನ ಸಿನಿಮಾ ನೋಡದಿದ್ದರೂ ಪರವಾಗಿಲ್ಲ. ನನ್ನ ಅಣ್ಣನ ಸಿನಿಮಾ ನೋಡಿ ಎಂದು ಧ್ರುವ ಸರ್ಜಾ ಭಾವುಕ ನುಡಿಯನ್ನು ಹೇಳಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದ ಆಡಿಯೋ ಭಾನುವಾರ ರಾತ್ರಿ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಬಿಡುಗಡೆ ಆಯಿತು. ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಬೈರತಿ ಬಸವರಾಜ್, ಶಾಸಕ ರೇಣುಕಾಚಾರ್ಯ, ನಟ ಅರ್ಜುನ್ ಸರ್ಜಾ ಪಾಲ್ಗೊಂಡಿದ್ದರು.
ಪೊಗರು ಆಡಿಯೋ ಬಿಡುಗಡೆ ಸಂದರ್ಭದಲ್ಲೇ ರಾಜಾಮಾರ್ತಾಡ ಸಿನಿಮಾದ ಸಾಂಗ್ ರಿಲೀಸ್ ಆಯ್ತು.ಆಡಿಯೋ ಲಾಂಚ್ ವೇಳೆ ಧ್ರುವ ಸರ್ಜಾ ಅಗಲಿದ ಅಣ್ಣ ಚಿರಂಜೀವಿ ಸರ್ಜಾರನ್ನು ನೆನೆದರು. ಪೊಗರು ರಿಲೀಸ್ ದಿನ ರಾಜಾಮಾರ್ತಾಡ ಟ್ರೈಲರ್ ರಿಲೀಸ್ ಆಗಲಿದೆ. ಇಂಟರ್ವಲ್ ವೇಳೆ ಟ್ರೈಲರ್ ಲಾಂಚ್ ಆಗಲಿದೆ. ನನ್ನ ಸಿನಿಮಾ ನೋಡದಿದ್ರೂ ಪರವಾಗಿಲ್ಲ. ನನ್ನ ಅಣ್ಣನ ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು.
ಜೂನಿಯರ್ ಚಿರುಗೆ ನಿಮ್ಮ ಆಶೀರ್ವಾದ ಕೊಡಿ. ನನ್ನ ಮಾವ ಅರ್ಜುನ್ ಸರ್ಜಾ ಗಾಢ್ ಫಾದರ್ ಆಗಿ ಬೆನ್ನ ಹಿಂದೆ ನಿಂತಿದ್ದಾರೆ. ನನ್ನ ಅಣ್ಣನ ಸ್ಥಾನವನ್ನು ತುಂಬಲು ಯಾರ ಕೈಯಿಂದಲೂ ಸಾಧ್ಯವಿಲ್ಲ ಎಂದು ಹೇಳಿದ ಧ್ರುವ ಜೂನಿಯರ್ ಚಿರಂಜೀವಿ ಸರ್ಜಾಗೂ ಇದೇ ರೀತಿಯ ಪ್ರೀತಿ ತೋರಿಸುವಂತೆ ಮನವಿ ಮಾಡಿದರು.
ಅರ್ಜುನ್ ಸರ್ಜಾ ಮಾತನಾಡಿ, ಜನರ ನಂಬಿಕೆ ಮೇಲೆ ಬರೆ ಎಳೆಯಬೇಡ ಎಂದು ಧ್ರುವನಿಗೆ ಹೇಳುತ್ತಿದ್ದೆ. ನಾನು 40 ವರ್ಷದಿಂದ ನಟಿಸುತ್ತಿದ್ದರೂ ಧ್ರುವ ಮತ್ತು ತಂಡದಿಂದ ಸಾಕಷ್ಟು ಕಲಿಯಲು ಇಷ್ಟ ಪಡುತ್ತೇನೆ. ಧ್ರುವ ಸಣ್ಣ ವಯಸ್ಸಿನಿಂದಲೂ ಚುರುಕು.ಅದರಂತೆ ಅವನು ಸಿನಿಮಾವನ್ನು ಡೆಡಿಕೇಟ್ ಮಾಡುತ್ತಿದ್ದಾನೆ ಎಂದು ಹೇಳಿ ಹೊಗಳಿದರು. ರ್ಯಾಪರ್ ಚಂದನ್ ಶೆಟ್ಟಿ ತಂಡದ ಹಾಡು ಮತ್ತು ಕುಣಿತ ಪ್ರೇಕ್ಷಕರನ್ನು ಮನರಂಜಿಸಿತು.
