Connect with us

Cinema

ಮೂರು ಭಾಷೆಗಳಲ್ಲಿ ಸಾವಿರ ಬೆಳ್ಳಿ ಪರದೆ ಮೇಲೆ ಪೊಗರು ಅಬ್ಬರ

Published

on

– ಸುದ್ದಿಗೋಷ್ಠಿಯಲ್ಲಿ ಚಿತ್ರ ತಂಡ ಸ್ಪಷ್ಟನೆ

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಪೊಗರು ಸಿನಿಮಾ ಫೆಬ್ರವರಿ 19ರಂದು ಬಿಡುಗಡೆಯಾಗುತ್ತಿದ್ದು, ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲಾಗುತ್ತಿದೆ ಎಂದು ಚಿತ್ರ ತಂಡ ತಿಳಿಸಿದೆ.

ಚಿತ್ರ ಬಿಡುಗಡೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿ ಚಿತ್ರ ತಂಡ, ಅನ್‍ಲಾಕ್ ಬಳಿಕ ಬಿಡುಗಡೆ ಆಗುತ್ತಿರುವ ಮೊದಲ ಕನ್ನಡದ ಸ್ಟಾರ್ ಸಿನಿಮಾ ಆಗಿದೆ. ಫೆಬ್ರವರಿ 19ರಂದು ತೆರೆಗೆ ಬರಲು ಸಿದ್ಧವಾಗಿದ್ದು, ಮೂರು ಭಾಷೆಯಲ್ಲಿ ತೆರೆಗೆ ಬರುತ್ತಿದೆ ಎಂದು ಚಿತ್ರ ತಂಡ ತಿಳಿಸಿದೆ.

ಒಟ್ಟು 1 ಸಾವಿರ ಚಿತ್ರಮಂದಿರಗಳಲ್ಲಿ ಪೊಗರು ಸಿನಿಮಾ ಬಿಡುಗಡೆಯಾಗುತ್ತಿದ್ದು, ಮೂರು ಭಾಷೆಯಲ್ಲಿ ತೆರೆ ಕಾಣುತ್ತಿದೆ. ಧ್ರುವ ಸರ್ಜಾ ಅಭಿಮಾನಿಗಳು ಚಿತ್ರ ಬಿಡುಗಡೆಗೆ ಕಾತರದಿಂದ ಕಾಯುತ್ತಿದ್ದು, ಇಷ್ಟು ದಿನ ಸಿನಿಮಾದ ಹಾಡು, ಟೀಸರ್ ಕಣ್ತುಂಬಿಕೊಂಡಿದ್ದ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. ಹೀಗಾಗಿ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ನಟ ರಾಘವೇಂದ್ರ ರಾಜ್‍ಕುಮಾರ್, ಧ್ರುವ ಸರ್ಜಾ, ಚಂದನ್ ಶೆಟ್ಟಿ ಸೇರಿದಂತೆ ಇತರರು ಭಾಗಿಯಾಗಿದ್ದರು. ಅಲ್ಲದೆ ಪೊಗರು ಸಿನಿಮಾಗೆ ಸಾಥ್ ನೀಡಲು ಬಿಗ್ ಸ್ಟಾರ್ ಸಿನಿಮಾ ನಿರ್ಮಾಪಕರು ಆಗಮಿಸಿದ್ದು, ನಿರ್ಮಾಪಕರಾದ ಸಲಗ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಕೆಜಿಎಫ್ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಫ್ಯಾಂಟಮ್ ನಿರ್ಮಾಪಕ ಜಾಕ್ ಮಂಜು, ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ಪುಷ್ಕರ್ ಮಲ್ಲಿಕಾರ್ಜುನ್ ಅವರು ಭಾಗವಹಸಿದ್ದರು.

ಪೊಗರು ಸಿನಿಮಾದಲ್ಲಿ ಧ್ರುವ ಜೊತೆ ರಶ್ಮಿಕಾ ತೆರೆ ಹಂಚಿಕೊಂಡಿದ್ದು, ನಂದಕಿಶೋರ್ ನಿರ್ದೇಶನ, ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಗಂಗಾಧರ್ ಅವರು ಪೊಗರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

Click to comment

Leave a Reply

Your email address will not be published. Required fields are marked *