Dharwad
ಮಾತಾ-ಪಿತಾ ಪೂಜೆ ಮಾಡಿ ಪ್ರೇಮಿಗಳ ದಿನಾಚರಣೆ

– ವ್ಯಾಲಂಟೈನ್ಸ್ ಡೇ ವಿರೋಧಿಸಿ ಪಾರ್ಕ್ನಲ್ಲಿ ಘೋಷಣೆ
ಧಾರವಾಡ: ಪ್ರೇಮಿಗಳ ದಿನಾಚರಣೆ ವಿರೋಧಿಸಿ ಧಾರವಾಡದಲ್ಲಿ ಶ್ರೀರಾಮ ಸೇನೆ ಸಂಘಟನೆಯ ಕಾರ್ಯಕರ್ತರು ಮಾತಾ-ಪಿತಾ ಪೂಜೆ ಮಾಡಿ, ಪಾರ್ಕ್ನಲ್ಲಿ ಘೋಷಣೆ ಕೂಗಿರುವ ಘಟನೆ ನಡೆದಿದೆ.
ನಗರದ ದುರ್ಗಾದೇವಿ ದೇವಸ್ಥಾನದಲ್ಲಿ ತಾಯಂದಿರ ಕಾಲು ತೊಳದು, ಕಾಲಿಗೆ ಹೂವು ಇಟ್ಟು ಪೂಜೆ ಸಲ್ಲಿಸಿದ ಕಾರ್ಯಕರ್ತರು, ಈ ದಿನವನ್ನು ಜನರು ವ್ಯಾಲಂಟೈನಸ್ ಡೇ ಆಚರಣೆ ಮಾಡದೇ, ಮಾತಾ ಪಿತಾ ದಿನಾಚರಣೆ ಮಾಡಬೇಕು. ಪ್ರೇಮಿಗಳ ದಿನಾಚರಣೆಯ ವಿರುದ್ಧ ಕಾರ್ಯಕ್ರಮ ಹೊರತು ಪ್ರೇಮಿಗಳ ವಿರುದ್ಧ ಅಲ್ಲ ಎಂದ ಕಾರ್ಯಕರ್ತರು, ಪ್ರೇಮ ದಿನಾಚರಣೆ ವರ್ಷದ 12 ತಿಂಗಳು ಇರಲಿ ಎಂದು ಆಗ್ರಹಿಸಿದ್ದಾರೆ.
ಚನ್ನಮ್ಮ ಪಾರ್ಕ ಹಾಗೂ ಬೇಂದ್ರೆ ಪಾರ್ಕಗೆ ಆಗಮಿಸಿದ ಸಂಘಟನೆ ಕಾರ್ಯಕರ್ತರು, ವ್ಯಾಲಂಟೈನ್ ಡೇ ವಿರುದ್ಧ ಘೋಷಣೆ ಕೂಗಿದ್ದಾರೆ. ಎಲ್ಲ ಕಡೆ ಪೊಲೀಸ್ ಇಲಾಖೆ ಮೊದಲೇ ಬಂದೋಬಸ್ತ್ ಮಾಡಿ ಪ್ರೇಮಿಗಳು ಬರದಂತೆ ಕ್ರಮ ಕೈಗೊಂಡಿದ್ದರು.
