Crime
ನಾಯಿಗೆ ಡಿಕ್ಕಿಯಾದ ಬೈಕ್ – ಹಿಂಬದಿ ಕುಳಿತಿದ್ದ ಮಹಿಳೆ ಸಾವು

ಧಾರವಾಡ: ತಾಲೂಕಿನ ಸಲಕಿನಕೊಪ್ಪ ಗ್ರಾಮದ ಬಳಿ ನಾಯಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಬೆನಕಟ್ಟಿ ಗ್ರಾಮದ ದಿಲ್ಶಾದ್ ಚಪ್ಪರಬಂದ್ (43) ಸಾವನ್ನಪ್ಪಿದ ಮಹಿಳೆ. ಮೃತ ದಿಲ್ಶಾದ್ ಧಾರವಾಡದ ಸಂಪಿಗೆನಗರದಲ್ಲಿ ಮನೆ ಕೆಲಸಕ್ಕಾಗಿ ಬೈಕ್ ನಲ್ಲಿ ಹೊರಟಿದ್ದರು. ಈ ವೇಳೆ ಸಲಕಿನಕೊಪ್ಪದ ಬಳಿ ರಸ್ತೆಗೆ ನಾಯಿ ಅಡ್ಡ ಬಂದಿದ್ದರಿಂದ ಬೈಕ್ ನಿಯಂತ್ರಣ ತಪ್ಪಿದೆ. ಹಿಂಬದಿ ಕುಳಿತಿದ್ದ ದಿಲ್ಶಾದ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ರೆ, ಸವಾರ ಗಾಯಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇತ್ತ ನಾಯಿ ಸಹ ಸಾವನ್ನಪ್ಪಿದೆ.
ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆ ಸಂಬಂಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
