Thursday, 20th June 2019

Recent News

ಸೆಕ್ಸ್ ವಿಡಿಯೋ ತೋರಿಸಿ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪಾಪಿ ತಂದೆ

ಧಾರವಾಡ: ಸ್ವತಃ ಮಗಳ ಮೇಲೆಯೇ ಕಾಮುಕ ತಂದೆಯೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಕಳೆದ 6 ತಿಂಗಳಿಂದ ಧಾರವಾಡದ ಶಮಶುದ್ದಿನ ಲಾಲಮಿಯಾ ಎಂಬಾತ ತನ್ನ 17 ವರ್ಷದ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿದ್ದಾನೆ ಎಂದು ಪತ್ನಿಯೇ ಪತಿಯ ವಿರುದ್ಧ ದೂರು ಕೊಟ್ಟಿದ್ದಾರೆ.

ಮನೆಯಲ್ಲಿ ಮಗಳು ಒಬ್ಬಳೇ ಇರುವ ಸಂದರ್ಭದಲ್ಲಿ ಶಮಶುದ್ದಿನ ಮಗಳಿಗೆ ಸೆಕ್ಸ್ ವಿಡಿಯೋ ತೊರಿಸುತ್ತಿದ್ದ. ಅಲ್ಲದೇ ರೂಮ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನ ನಡೆಸಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ಮಗಳ ಮೇಲಿನ ನಿಚಾ ಕೃತ್ಯ ನಡೆಸಿದ್ದ ಬಗ್ಗೆ ತಿಳಿದು ಪತಿಯನ್ನು ಪ್ರಶ್ನಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದ. ಅಲ್ಲದೇ ಇಡೀ ಕುಟುಂಬವನ್ನು ಕೊಲೆ ಮಾಡಿ ಹಣ ನೀಡಿ ಪ್ರಕರಣದಿಂದ ಹೊರಬರುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ತಿಳಿಸಿದ್ದಾರೆ.

ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪತ್ನಿ, ಪತಿ ಶಮಶುದ್ದಿನ ವಿರುದ್ಧ ದೂರು ನೀಡಿದ್ದು, ಮಗಳ ಮೇಲೆ ತಂದೆಯೇ ಅತ್ಯಾಚಾರಕ್ಕೆ ಯತ್ನ ನಡೆಸಿದಕ್ಕೆ ಆರೋಪಿಯನ್ನು ಬಂಧಿಸಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *