Connect with us

Cinema

ಒಂಟಿ ಮನೆಯಿಂದ ಹೊರ ಬಂದ ಧನುಶ್ರೀ

Published

on

ಬೆಂಗಳೂರು: ಬಿಗ್‍ಬಾಸ್ ಸೀಸನ್-8 ಆರಂಭಗೊಂಡು ವಾರ ಕಳೆದಿದೆ. ಒಂಟಿ ಮನೆಯ 17 ಮಂದಿ ಪೈಕಿ ಟಿಕ್‍ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರ ಬಂದಿದ್ದಾರೆ. ಮೊದಲ ವಾರ ಮನೆಯಿಂದ ಹೊರ ಹೋಗಲು ವಿಶ್ವನಾಥ್, ನಿರ್ಮಲಾ, ಶುಭಾ ಪೂಂಜಾ, ಧನುಶ್ರೀ ಮತ್ತು ರಘು ಗೌಡ ನಾಮಿನೇಟ್ ಆಗಿದ್ದರು.

ಮೊದಲ ವಾರವೇ ಮನೆಯಿಂದ ಹೋದ್ರೆ ಹೇಗೆ ಅಂತ ಶುಕ್ರವಾರ ಎಪಿಸೋಡ್ ನಲ್ಲಿ ಧನುಶ್ರೀ ಸಪ್ಪೆ ಮೋರೆ ಹಾಕಿಕೊಂಡಿದ್ರು. ಇದೀಗ ಬಿಗ್‍ಬಾಸ್ ಮನೆಯಿಂದ ಧನುಶ್ರೀ ಹೊರ ಬಂದಿದ್ದಾರೆ.

ಮೊದಲೆರಡು ದಿನ ಪರಿಚಯಗಳಲ್ಲಿ ಮುಳುಗಿದ್ದ ಸ್ಪರ್ಧಿಗಳಿಗೆ ಬಿಗ್‍ಬಾಸ್ ಟಾಸ್ಕ್ ನೀಡಿ ಹುರುಪುಗೊಳಿಸಿದರು. ಇತ್ತ ಲ್ಯಾಗ್ ಮಂಜು, ಶಮಂತ್ ಗೌಡ ಮತ್ತು ದಿವ್ಯಾ ಸುರೇಶ್ ತ್ರಿಕೋನ ಪ್ರೇಮಕಥೆ, ಪ್ರಶಾಂತ್ ಸಂಬರಗಿ ನೇರಾನೇರ ಆರೋಪಗಳು, ನಿರ್ಮಲಾ ರಾ ರಾ ಸ್ಟೈಲ್, ಈ ಮಧ್ಯೆ ಮೊಗ್ಗಿನ ಚೆಲುವೆಯ ಮುದ್ದಾದ ಮಾತು, ಅಶ್ವಥ್ ಉಪದೇಶ, ಚಂದ್ರಕಲಾ ಮೋಹನ್ ಅಡುಗೆ ಮನೆ ಕಿರಿಕ್ ಈ ವಾರ ನೋಡಗರನ್ನ ರಂಜಿಸಿದ್ದು ನಿಜ.

Click to comment

Leave a Reply

Your email address will not be published. Required fields are marked *