ನೆಲಮಂಗಲ: ದಕ್ಷಿಣ ಕಾಶಿ ಎಂದೇ ಪ್ರಸಿದ್ದವಾಗಿರುವ ಕೇರಳದ (Kerala) ಕೊಟ್ಟಿಯೂರು (Kottiyoor) ದೇವಾಲಯದಲ್ಲಿ ಅವ್ಯವಸ್ಥೆ ವೇಳೆ ಕನ್ನಡಿಗರ ಮೇಲಿನ ದುರ್ವರ್ತನೆ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡದಲ್ಲಿ (Kannada) ಮಾತಾಡಿದ್ರೆ ಬೇರೆ ರೀತಿ ವರ್ತನೆ ಮಾಡ್ತಾರೆ ಎಂದು ನೆಲಮಂಗಲದ ಯುವಕನೋರ್ವ ಕೊಟ್ಟಿಯೂರಲ್ಲಿ ಸಿಬ್ಬಂದಿ ವರ್ತನೆ ಬಗ್ಗೆ ಬಿಚ್ಚಿಟ್ಟಿದ್ದಾರೆ.
ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿದ ಅವರು, ಗಲಾಟೆ ವೇಳೆ ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡುತ್ತಾರೆ. ಅಲ್ಲಿನ ಸ್ಥಳೀಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಕನ್ನಡದವರು (Kannada) ಕನ್ನಡದಲ್ಲಿ ಮಾತನಾಡಿದ್ರೆ ಬೇರೆ ರೀತಿಯಲ್ಲಿ ವರ್ತನೆ ಮಾಡುತ್ತಾರೆ. ನಮ್ಮ ಮಹಿಳೆಯರಿಗೆ ಸ್ವಲ್ಪನೂ ಗೌರವ ಕೊಡಲ್ಲ. ಸಾಕಷ್ಟು ಸಮಸ್ಯೆ ಇದೆ. ಸರಿಯಾದ ವ್ಯವಸ್ಥೆ ಮಾಡಿಕೊಂಡಿಲ್ಲ. ಅಲ್ಲಿನ ಸಿಬ್ಬಂದಿ ಪ್ರಶ್ನೆ ಮಾಡಿದ್ರೆ ಹೊಡೆಯಲು ಬರುತ್ತಾರೆ . ಅನ್ನ ಪ್ರಸಾದಕ್ಕೆ 1000 ರೂ. ಪಡೆಯುತ್ತಾರೆ ಅಲ್ಲಿಯೂ ರಿಸ್ಕ್ ಇದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಶಿವಸಾಕ್ಷಾತ್ಕಾರದ ಸನ್ನಿಧಾನ – ಕೊಟ್ಟಿಯೂರಿನ ಮಹಾತ್ಮೆ
ದೇವಾಲಯ ಹಾಗೂ ಅಲ್ಲಿನ ಪರಿಸರ ಚೆನ್ನಾಗಿದೆ ಹಾಗೂ ವಿಷೇಶವಾಗಿದೆ. ಪ್ರತಿನಿತ್ಯ ಲಕ್ಷಾಂತರ ಜನರು ಕನ್ನಡದವರೇ ಇರುತ್ತಾರೆ. ಹೀಗಾಗಿ ಎಲ್ಲವನ್ನ ಸರಿ ಮಾಡಿಕೊಂಡು ದೇವಾಲಯದ ಪ್ರಾಮುಖ್ಯತೆ ಕಾಪಾಡುವಂತೆ ಭಕ್ತರು ಮನವಿ ಮಾಡಿದ್ದಾರೆ.
