Connect with us

Districts

ನನ್ನ ಗೆಲುವಿಗೆ ದೇವೇಗೌಡರು ವರವಾದ್ರು: ಜಿ.ಎಸ್ ಬಸವರಾಜು

Published

on

ತುಮಕೂರು: ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡರು ವರವಾಗಿ ಬಂದಿದ್ದೇ ನನ್ನ ಗೆಲುವಿಗೆ ಕಾರಣವಾಯ್ತು ಎಂದು ತುಮಕೂರು ಲೋಕಸಭಾ ಬಿಜೆಪಿ ವಿಜೇತ ಅಭ್ಯರ್ಥಿ ಜಿ.ಎಸ್ ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುದ್ದಹನುಮೇಗೌಡರು ಏನಾದರೂ ಸ್ಪರ್ಧೆ ಮಾಡಿದಿದ್ದರೆ ನನಗೆ ಕಷ್ಟವಾಗುತ್ತಿತ್ತು. ದೇವೇಗೌಡರು ಬಂದು ನನ್ನ ಗೆಲುವಿನ ಹಾದಿಯನ್ನು ಸುಲಭಗೊಳಿಸಿದರು ಎಂದು ತಮ್ಮ ವಿಜಯದ ವಿಮರ್ಶೆ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್‍ನ ಮಾಜಿ ಶಾಸಕ ಕೆ.ಎನ್ ರಾಜಣ್ಣ ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ ಎನ್ನುವುದು ಸರಿಯಲ್ಲ. ಎಲ್ಲಾ ಪಕ್ಷದವರು ನನಗೆ ಮತ ಹಾಕಿದ್ದಾರೆ. ಇದೇ ವೇಳೆ ಮೋದಿ ಪ್ರಧಾನಿ ಆದರೆ ರಾಜಕೀಯ ಬಿಡುತ್ತೇನೆ ಎಂದಿದ್ದ ಸಚಿವ ರೇವಣ್ಣರ ಕುರಿತು ಮಾತನಾಡಿದ ಜಿ.ಎಸ್ ಬಸವರಾಜು, ದೇವೇಗೌಡರ ಕುಟುಂಬ ಯಾವತ್ತಾದರೂ ಸತ್ಯ ಹೇಳಿದೆಯಾ ಎಂದು ಪ್ರಶ್ನಿಸಿದ ಅವರು, ದೇವೇಗೌಡರು ದೇಶ ಬಿಡ್ತೀನಿ ಎಂದು ಹೇಳಿದ್ದರು. ಅವರು ದೇಶ ಬಿಟ್ಟಿದ್ದಾರೆ ಎಂದು ಮರುಪ್ರಶ್ನೆ ಹಾಕಿದ್ದರು. ಬಳಿಕ ಈಗ ಮೊಮ್ಮಗ ಪ್ರಜ್ವಲ್ ರೇವಣ್ಣ ಜನರ ಸಿಂಪತಿ ಗಳಿಸಲು ರಾಜೀನಾಮೆ ನಾಟಕ ಆಡುತಿದ್ದಾರೆ ಎಂದು ಕಟುಕಿದ್ದಾರೆ.