Connect with us

Chikkaballapur

ದುಡ್ಡಿಲ್ಲ ಅಂದ್ರೆ ಫೈಲ್ ಮುಟ್ಟಲ್ಲ – ಬೆಸ್ಕಾಂ ಅಧಿಕಾರಿಯ ಲಂಚಾವತಾರ ವೀಡಿಯೋ ವೈರಲ್

Published

on

Share this

– ಪ್ರತಿ ಕೆಲಸಕ್ಕೂ ಒಂದೊಂದು ಅಮೌಂಟ್ ಫಿಕ್ಸ್!

ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ದೇವನಹಳ್ಳಿಯ ಬೆಸ್ಕಾಂ ಸಹಾಯಕ ಕಾರ್ಯನಿರ್ವಾರ್ಹಕ ಅಧಿಕಾರಿ ಶ್ರೀನಿವಾಸ್ ಮಂತ್ರೋಡಿ ಲಂಚಾವತಾರ ಇದೀಗ ಬಟ ಬಯಲಾಗಿದೆ.

ಎಇಇ ಶ್ರೀನಿವಾಸ್ ಮಂತ್ರೋಡಿಗೆ ಪ್ರತಿ ಫೈಲ್ ಗೆ ಸಹಿ ಹಾಕಬೇಕಂದ್ರೆ ಲಂಚ ನೀಡಬೇಕು. ಲಂಚ ನೀಡದಿದ್ದರೆ ಕೆಲಸವೇ ಆಗಲ್ಲವಂತೆ. ಇನ್ನೂ ಬಹುಮಟ್ಟಡಿ ಕಟ್ಟಡಕ್ಕೆ ವಿದ್ಯುತ್ ಪಡೆಯಬೇಕಾದರೇ ಕೆಲಸವೇ ಇಲ್ಲಿ ಆಗೋದಿಲ್ಲ. ಎಇಇ ಖಾಸಗಿಯಾಗಿ ನೇಮಕಗೊಂಡಿರೋ ಗುತ್ತಿಗೆದಾರರು ಹೋದರೆ ಮಾತ್ರ ಕೆಲಸ ಆಗುತ್ತಂತೆ. ಮುಖ್ಯವಾಗಿ ಪ್ರತಿಯೊಂದು ಫೈಲ್ ಗೂ ಸಹಿಗೆ ಈತ ಇಂತಿಷ್ಟು ಅಂತ ಲಂಚವನ್ನ ನಿಗದಿಪಡಿಸಿರುವ ಆರೋಪ ಕೇಳಿ ಬಂದಿದೆ.

ಅಧಿಕಾರಿಯ ಲಂಚದ ಮೆನು
* 1 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 300 ರೂ.
* 2 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 600 ರೂ.
* 3-4 ವ್ಯಾಟ್ ವಿದ್ಯುತ್ ಸಂಪರ್ಕಕ್ಕೆ 1200 ರೂ.
* ರೈತರ ತೋಟದಲ್ಲಿ ಒಂದು ಕಂಬ ಹಾಕಲು 1,000 ರೂ.
* ಮೂರು ಕಂಬ ಹಾಕಿದ್ರೆ 3 ಸಾವಿರ ರೂ
* 25 ವ್ಯಾಟ್ ಟ್ರಾನ್ಸಫಾರ್ಮಾಗೆ 5 ಸಾವಿರ ರೂ.
* 100 ವ್ಯಾಟ್ ಟ್ರಾನ್ಸಫಾರ್ಮಾಗೆ 15 ಸಾವಿರ ರೂ.

ಹೀಗೆ ಒಂದೊಂದು ಕೆಲಸಕ್ಕೂ ಲಂಚವನ್ನ ನಿಗದಿ ಮಾಡಿದ್ದು, ಹಣ ಕೊಟ್ಟರೆ ಮಾತ್ರ ಆ ಫೈಲ್ ಗಳಿಗೆ ಸೈನ್ ಮಾಡ್ತಾರೆ. 11 ತಿಂಗಳ ಹಿಂದೆ ದೇವನಹಳ್ಳಿ ಎಇಇ ಆಗಿ ನೇಮಕಗೊಂಡ ಶ್ರೀನಿವಾಸ್, ಯಾರೇ ಮನೆಗೆ ಮೀಟರ್ ಸೇರಿದಂತೆ ಟ್ರಾನ್ಸ್ ಪಾರ್ಮ್ ಪಡೆಯಬೇಕಂದ್ರು ಪರಿಶೀಲನೆಗೆ ಅವರ ಹಿಂಬಾಲಕರನ್ನ ಕಳಿಸೋದು. ಮನೆಗಳ ಬಳಿ ಹೋಗುವ ಖಾಸಗಿ ಗುತ್ತಿಗೆದಾರರು ಅದು ಸರಿ ಇಲ್ಲ, ಇದು ಸರಿಯಲ್ಲ ಅಂತಾ ಹೇಳಿ ವಾಪಸ್ ಬರುತ್ತಾರೆ. ಆಗ ಎಇಇ ಬಳಿ ಬಂದು ಹಣವನ್ನ ಕೊಟ್ಟು ಫೈಲ್‍ಗೆ ಸಹಿ ಮಾಡಸಬೇಕು ಎಂಬ ಆರೋಪಗಳಿವೆ.

ವೀಡಿಯೋದಲ್ಲಿ ಏನಿದೆ?:
ಅಧಿಕಾರಿ ಸರ್ಕಾರಿ ಕೆಲಸ ಮಾಡೋದು ಬಿಟ್ಟು, ಗುತ್ತಿಗೆ ಕೆಲಸ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿರೋದನ್ನು ರೈತರು ಹಾಗೂ ಕೆಲವರು ವೀಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಫೈಲ್ ಅಧಿಕಾರಿ ಮುಂದೆ ಇಟ್ಟು, ಲಂಚದ ಹಣ ಪಕ್ಕದ ಡ್ರಾಯರ್ ನಲ್ಲಿ ಹಾಕಬೇಕು. ನಂತರ ಡ್ರಾಯರ್ ನಲ್ಲಿ ಹಣ ಎತ್ತಿಕೊಂಡು ಎಣಿಸಿ, ಜೇಬಿನಲ್ಲಿ ಇಟ್ಟುಕೊಂಡು ಎಇಇ ಸಹಿ ಮಾಡುತ್ತಿರೋ ದೃಶ್ಯಗಳು ಸೆರೆಯಾಗಿದೆ. ಇದನ್ನೂ ಓದಿ: ದುಬಾರಿಯಾದ ಪೆಟ್ರೋಲ್ – ಕಳ್ಳತನಕ್ಕಿಳಿದ ಯುವಕರು

ಹೀಗಾಗಿ ಇಂತಹ ಅಧಿಕಾರಿಯನ್ನ ಕೂಡಲೇ ಅಮಾನತು ಮಾಡುವಂತೆ ರೈತರು ಆಗ್ರಹಿಸಿದ್ದಾರೆ. ದೇವನಹಳ್ಳಿ ಬೆಸ್ಕಾಂನಲ್ಲಿರೋ ಎಇಇ ಶ್ರೀನಿವಾಸ್ ಮಂತ್ರೋಡಿಯ ಲಂಚವತಾರ ಎಲ್ಲೆಡೆ ವೈರಲ್ ಆಗಿದ್ದು, ಭ್ರಷ್ಟ ಅಧಿಕಾರಿಯ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಇದನ್ನೂ ಓದಿ: ಪುಲ್ವಾಮಾದಲ್ಲಿ ವಿಜಯಪುರದ ಯೋಧ ಹುತಾತ್ಮ

Click to comment

Leave a Reply

Your email address will not be published. Required fields are marked *

Advertisement