13 ವಿಲ್ಲಾಗಳಿಗೆ ಕಂದಾಯ ಇಲಾಖೆ ನೋಟಿಸ್- ಕುಬೇರರ ಬಂಗಲೆಗಳಿಗೆ ನುಗ್ಗುತ್ತಾ ಬುಲ್ಡೋಜರ್?

Advertisements

ಬೆಂಗಳೂರು: ಕೋಟಿ ಕುಬೇರರ ಬಂಗಲೆಗಳಿಗೆ ಬುಲ್ಡೋಜರ್ (Bulldozer) ನುಗ್ಗುತ್ತಾ ಎಂಬ ಪ್ರಶ್ನೆಯೊಂದು ಇದೀಗ ಎದ್ದಿದೆ. ರಾಜಕಾಲುವೆ (Rajakaluve) ಒತ್ತುವರಿ ಮಾಡಿದ್ದ 13 ವಿಲ್ಲಾಗಳಿಗೆ ಕಂದಾಯ ಇಲಾಖೆ ನೋಟಿಸ್ ನೀಡಿದ್ದು, ಒತ್ತುವರಿದಾರರಿಗೆ ಟೆನ್ಶನ್ ಶುರುವಾಗಿದೆ.

Advertisements

ಬೆಂಗಳೂರು ಮಳೆಯಿಂದಾಗಿ ರೈನ್ ಬೋ ಡ್ರೈವ್ (Rainbow Drive)ಬಡಾವಣೆಯಲ್ಲಿ ನೀರು ತುಂಬಿ ಅವಾಂತರ ಸೃಷ್ಟಿಯಾದ ಬೆನ್ನಲ್ಲೇ ಜಲಾವೃತವಾಗಲು ಕಾರಣವಾಗಿದ್ದ ಮೂಲವನ್ನು ಕಂದಾಯ ಇಲಾಖೆ (Department of Revenue) ಇದೀಗ ಕಂಡುಹಿಡಿದಿದೆ. ಇದನ್ನೂ ಓದಿ: 10 ಕೋಟಿಗೆ ಒಂದು ವಿಲ್ಲಾ – ಮಳೆಗೆ ನಿವಾಸಿಗಳು ವಿಲವಿಲ

Advertisements

ರೈನ್ ಬೋ ಬಡಾವಣೆ ಜುನ್ನಸಂದ್ರ ಹಾಗೂ ಹಾಲನಾಯಕನಹಳ್ಳಿ ಸರ್ವೆ ನಂಬರ್ ನಲ್ಲಿ ವಿಲ್ಲಾಗಳನ್ನು ನಿರ್ಮಾಣ ಮಾಡಲಾಗಿದೆ. ಈ ಹಿನ್ನೆಲೆ 13 ವಿಲ್ಲಾ (Villa) ಗಳಿಗೆ ನೋಟೀಸ್ ನೀಡಲಾಗಿದೆ. ಈ ಹಿಂದೆಯೇ ವಿಲ್ಲಾ ತೆರವು ಮಾಡಲು ಹೊರಟಾಗ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದರು. ಈಗ ಮತ್ತೊಮ್ಮೆ ತೆರವಿಗೆ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜೀತ್ ರೈ ನೋಟಿಸ್ (Notice) ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಎಕೋಸ್ಪೇಸ್‍ನಲ್ಲಿ ಮುಳುಗಿದ 40 ಐಷಾರಾಮಿ ಕಾರುಗಳು!

Advertisements

ಒಂದೆಡೆ ಮಳೆ ಹಾಗೂ ಮತ್ತೊಂದೆಡೆ ತೆರವಿನ ಆತಂಕ ಎದುರಾಗಿದೆ. ಜುನ್ನಸಂದ್ರದಿಂದ ಸರ್ಜಾಪುರ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ಒತ್ತುವರಿ ಹಿನ್ನೆಲೆ ಕಂದಾಯ ಇಲಾಖೆ ತೆರವು ಕಾರ್ಯಕ್ಕೆ ಮುಂದಾಗಿದೆ. ಮಹದೇವಪುರ ಕ್ಷೇತ್ರದ ಜುನ್ನಸುಂದ್ರ, ಹಾಲನಾಯಕನಹಳ್ಳಿಯಲ್ಲಿ ಸರ್ಕಾರಿ ಜಾಗಕ್ಕೆ ಕೋಟಿ ಕುಬೇರರು ಕನ್ನ ಹಾಕಿದ್ದಾರೆ. ಜುನ್ನಾಸಂದ್ರ, ಹಾಲನಾಯಕನಹಳ್ಳಿಯಲ್ಲಿ 50 ಕ್ಕೂ ಹೆಚ್ಚು ಕಡೆ ನಾಲಾ ಮಾದರಿಯ ಕಾಲುವೆಯನ್ನ ವಿಲ್ಲಾ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಪೈಕಿ 13 ಜನರಿಗೆ ನೋಟಿಸ್ ನೀಡಲಾಗಿದೆ.

ನಾಳೆ ಬಿಬಿಎಂಪಿ (BBMP) ಅಧಿಕಾರಿಗಳ ಜೊತೆ ಕಂದಾಯ ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಒತ್ತುವರಿ ಮಾಡಿಕೊಂಡಿರುವ ವಿಲ್ಲಾ ಮಾಲೀಕರಿಗೆ ಒತ್ತುವರಿ ಜಾಗ ಬಿಡಲು ಸಮಯ ನೀಡಬೇಕಾ..? ಅಥವಾ ನೆಲಸಮ ಮಾಡಬೇಕಾ ಎಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೆ ನೋಟಿಸ್ ನೀಡಿ ಸಮಯವಕಾಶ ನೀಡಿದ್ರೆ, ವಿಲ್ಲಾ ಮಾಲೀಕರು ಕೋರ್ಟ್ ಗೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ಮುನ್ಸೂಚನೆ ಹಾಗೂ ನೋಟಿಸ್ ನೀಡದೇ ಕಾರ್ಯಾಚರಣೆ ಮಾಡುವ ಬಗ್ಗೆಯೂ ಚಿಂತನೆ ನಡೆಸಲಾಗುತ್ತದೆ. ಇದನ್ನೂ ಓದಿ: ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಪಬ್ಲಿಕ್ ಟಿವಿ ಗಣೇಶ- ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

Live Tv

Advertisements
Exit mobile version