Connect with us

Dharwad

ಸಚಿವ ಶಿವಳ್ಳಿ ಸಾವಿನ ದಿನವೇ ಮಗಳ ಪರೀಕ್ಷೆ – ಸಿಬಿಎಸ್‍ಇಯಲ್ಲಿ ರೂಪಾ ಉತ್ತಮ ಸಾಧನೆ

Published

on

ಹುಬ್ಬಳ್ಳಿ: ತಂದೆ ಶಿವಳ್ಳಿ ಸಾವಿನ ದುಃಖದ ಮಧ್ಯೆಯೂ ಅವರ ಎರಡನೇ ಮಗಳು ಕಣ್ಣೀರು ಹಾಕುತ್ತಲೇ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದಳು. ಇಂದು ಸಿಬಿಎಸ್‍ಸಿ 10ನೇ ತರಗತಿಯ ಫಲಿತಾಂಶ ಹೊರಬಂದಿದ್ದು, ಶಿವಳ್ಳಿ ಪುತ್ರಿ ರೂಪಾ ಪರೀಕ್ಷೆಯಲ್ಲಿ ಶೇ.76ರಷ್ಟು ಅಂಕಗಳನ್ನು ಪಡೆದಿದ್ದಾಳೆ.

ರೂಪಾ ತನ್ನ ತಂದೆ ಸಿ.ಎಸ್ ಶಿವಳ್ಳಿ ನಿಧನರಾದ ದಿನ ಇಂಗ್ಲಿಷ್ ಪರೀಕ್ಷೆ ಬರೆದಿದ್ದಳು. ಈಗ ಆಕೆ ಶೇ.76ರಷ್ಟು ಅಂಕ ಪಡೆದಿದ್ದಾಳೆ. ರೂಪಾ ಕಣ್ಣೀರು ಹಾಕುತ್ತಲೇ ಪರೀಕ್ಷೆ ಬರೆದು ನಂತರ ತನ್ನ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದಳು.

ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರೂಪಾ, “ನಾನು ಶೇ. 76ರಷ್ಟು ಅಂಕ ಗಳಿಸಿದ್ದೇನೆ. ಸಮಾಜ ವಿಜ್ಞಾನದಲ್ಲಿ 91, ಕನ್ನಡ 87, ವಿಜ್ಞಾನ 82, ಗಣಿತ 55, ಇಂಗ್ಲಿಷ್ 65 ಅಂಕಗಳು ಬಂದಿದೆ. ನಮ್ಮ ತಂದೆಗೆ ನಾನು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿರಬೇಕು ಎಂದು ಆಸೆ ಇತ್ತು. ಈಗ ಅವರ ಕನಸು ನನಸು ಮಾಡಿ ಶೃದ್ಧಾಂಜಲಿ ಸಲ್ಲಿಸುತ್ತೇನೆ. ನಮ್ಮ ತಾಯಿಗೆ ಎಲ್ಲರೂ ಸಪೋರ್ಟ್ ಮಾಡುತ್ತಿದ್ದೇವೆ, ಅವರು ಗೆದ್ದು ಬರಲಿ. ಬಡವರು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂಬುದು ನನ್ನ ಗುರಿ. ತಂದೆ ಇದ್ದರೆ ಖುಷಿಪಡುತ್ತಿದ್ದರು” ಎಂದು ಹೇಳುತ್ತಾ ರೂಪಾ ಶಿವಳ್ಳಿ ಭಾವುಕಳಾದಳು.

ಸಿಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಮಾರ್ಚ್ 22ರಂದು ಮೃತಪಟ್ಟಿದ್ದರು. ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಕಾರ್ಯಾಚರಣೆ ನಡೆದ ಸ್ಥಳದಲ್ಲೇ ಹಾಜರಿದ್ದು, ಎಲ್ಲಾ ಕಾರ್ಯದ ಉಸ್ತುವಾರಿ ವಹಿಸಿದ್ದರು. ಈ ವೇಳೆಯೇ ಅವರು ಬಳಲಿದ್ದರು ಎಂಬ ಮಾಹಿತಿ ಲಭಿಸಿತು.

https://www.youtube.com/watch?v=AH1OxAUo0qQ