Connect with us

Latest

ದೆಹಲಿ ಹಿಂಸಾಚಾರದ ಪ್ರಮುಖ ಆರೋಪಿಯ ಬಂಧನ

Published

on

ದೆಹಲಿ: ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೆಂಪುಕೋಟೆಯಲ್ಲಿ ನಡೆದ ಟ್ರಾಕ್ಟರ್ ರ‍್ಯಾಲಿ ಹಿಂಸಾಚಾರ ಪ್ರಕರಣ ಕುರಿತಂತೆ ದೆಹಲಿ ಪೊಲೀಸರು ಪ್ರಮುಖ ಆರೋಪಿಯೋರ್ವನನ್ನು ಬಂಧಿಸಿದ್ದಾರೆ.

ತಾಂತ್ರಿಕ ಕಣ್ಗಾವಲ ಸಹಾಯದಿಂದ ಚಂಡೀಗಢದ ಅಪರಾಧ ವಿಭಾಗವು ಸುಖ್‍ದೇವ್ ಸಿಂಗ್(65) ಎಂಬಾತನನ್ನು ಬಂಧಿಸಿದ್ದಾರೆ. ಈತ ಸುಖ್ ದೇವ್, ಕರ್ನಲ್ ಮೂಲದವರಾಗಿದ್ದು, ಭಾರತೀಯ ಕಿಸಾನ್ ಯೂನಿಯನ್ ಸದಸ್ಯ.

ಈ ಮುನ್ನ ದೆಹಲಿ ಪೊಲೀಸರು ಪ್ರತಿಭಟನೆಯಲ್ಲಿ ಹಿಂಸಾಚಾರ ಕೃತ್ಯ ಎಸಗಿದ ಸಿಂಗ್ ಆರೋಪಿಗಳ ಕುರಿತಂತೆ ಮಾಹಿತಿ ನೀಡಿದವರಿಗೆ 50,000 ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇದೀಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಖ್ ದೇವ್ ಸಿಂಗ್ ಆಪ್ತರೊಬ್ಬರು ಪೊಲೀಸರಿಗೆ ಸಿಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೆಂಪುಕೋಟೆಯಲ್ಲಿ ನಡೆದ ಗಲಭೆಯ ಹಲವು ವೀಡಿಯೋಗಳಲ್ಲಿ ಸುಖ್ ದೇವ್ ಸಿಂಗ್ ಕಾಣಿಸಿಕೊಂಡಿದ್ದು, ಈ ಹಿಂದೆ ಪೊಲೀಸರು ಬಂಧಿಸಿದ್ದ ಗಲಭೆಕೋರರ ಮಧ್ಯೆ ಸುಖ್ ದೇವ್ ಸಿಂಗ್‍ನನ್ನು ಸಹ ಗುರುತಿಸಿದ್ದಾರೆ. ಒಟ್ಟಾರೆ ರಾಜಧಾನಿ ದೆಹಲಿಯಲ್ಲಿ ನಡೆದ ಪ್ರತಿಭಟನೆ ಸಂಬಂಧ ಪೊಲೀಸರು ಈವರೆಗೂ 127 ಜನರನ್ನು ಬಂಧಿಸಿದ್ದಾರೆ.

ಗಣರಾಜ್ಯೋತ್ಸವ ದಿನದ ಗಲಭೆ ನಂತರ ಪರಾರಿಯಾಗಿದ್ದವರನ್ನು ಬಂಧಿಸಲು, ಹರಿಯಾಣ ಮತ್ತು ಪಂಜಾಬ್‍ನಲ್ಲಿ ತಲಾ 5 ಸದ್ಯರನ್ನು ಒಳಗೊಂಡ 20 ತಂಡಗಳು ತನಿಖೆ ನಡೆಸುತ್ತಿದೆ.

Click to comment

Leave a Reply

Your email address will not be published. Required fields are marked *