Connect with us

Crime

ಮಾರುಕಟ್ಟೆಯಲ್ಲಿ ಕೇಳಿ ಬಂತು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ

Published

on

– ಮಧ್ಯರಾತ್ರಿ ತಬ್ಬಿಬ್ಬಾದ ಜನರು

ನವದೆಹಲಿ: ಖಾನ್ ಮಾರ್ಕೆಟ್ ಬಳಿ ರಾತ್ರಿ ವೇಳೆ ದೇಶದ್ರೋಹಿಗಳು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿ ಪರಾರಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಖಾನ್ ಮಾರ್ಕೆಟ್ ಮೆಟ್ರೋ ನಿಲ್ದಾಣ ಬಳಿ ಬೈಕ್ ರೇಸಿಂಗ್‍ನಲ್ಲಿ ತೊಡಗಿದ್ದ ಗುಂಪು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆಯನ್ನು ಕೂಗಿದ್ದಾರೆ. ಈ ವೇಳೆ ಘೋಷಣೆಯನ್ನು ಕೇಳಿದ ಜನರು ಬೆದರಿಕೆ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ.

ಸರಿಸುಮಾರು ಮುಂಜಾನೆ 1 ಗಂಟೆಯ ಹೊತ್ತಿಗೆ ಜನರು ಇಂಥಹ ಒಂದು ಘೋಷಣೆಯನ್ನು ಕೇಳಿ ಭಯಭೀತರಾಗಿದ್ದಾರೆ. ತುಘಲಕ್ ರಸ್ತೆ ಪೊಲೀಸ್ ಸ್ಟೇಷನ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮಾರುಕಟ್ಟೆ ಸುತ್ತಾಮುತ್ತಾ ಬೈಕ್‍ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮಧ್ಯರಾತ್ರಿ ಇಂಥಹ ಘೋಷಣೆಯನ್ನು ಕೂಗಿರುವ ಹಿಂದಿನ ಉದ್ದೇಶವನ್ನು ತಿಳಿಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *