Connect with us

Crime

ಸೆಕ್ಸ್​ಗೆ ಒತ್ತಾಯಿಸುತ್ತಿದ್ದ ಗೆಳೆಯನ ತಲೆ ಮೇಲೆ ಕಲ್ಲು ಎತ್ತಾಕಿ ಕೊಂದ

Published

on

– ಅಸಹಜ ಸೆಕ್ಸ್​ಗೆ ಗೆಳೆಯನಿಂದ ಬಲವಂತ

ನವದೆಹಲಿ: ಲೈಂಗಿಕ ಕ್ರಿಯೆಗೆ ಪೀಡಿಸುತ್ತಿದ್ದ ಗೆಳೆಯನನ್ನ ಕೊಲೆ ಮಾಡಿದ ಯುವಕ ಜೈಲು ಸೇರಿದ್ದಾನೆ. ರಾಜಧಾನಿ ದೆಹಲಿಯ ಮಯೂರ ವಿಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ.

ಭರತ್ ಗೆಳೆಯನಿಂದ ಕೊಲೆಯಾದ ಯುವಕ. ಮಯೂರ ವಿಹಾರ ಠಾಣಾ ವ್ಯಾಪ್ತಿಯ ತ್ರಿಲೋಕಪುರಿಯ ನಿವಾಸಿ ಮೋನು ಹಾಗೂ ಭರತ್ ನಡುವೆ ಸ್ನೇಹವಿತ್ತು. ಮೃತ ಭರತ್ ಗೆಳೆಯ ಮೋನುಗೆ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದನು. ಇದರಿಂದ ಕೋಪಗೊಂಡ ಮೋನು ಗೆಳೆಯನನ್ನು ಕೊಂದು ಪೊಲೀಸರ ಮುಂದೆ ಶರಣಾಗಿದ್ದಾನೆ.

ಇಂದು ಸಂಜೆ ಸುಮಾರು 4.30ಕ್ಕೆ ಪ್ಯಾಟ್ರೋಲಿಂಗ್ ವೇಳೆ ತ್ರಿಲೋಕಪುರಿ ಬಳಿ ಪೊಲೀಸರ ಕಣ್ಣಿಗೆ ಮೋನು ಕಂಡಿದ್ದಾನೆ. ಮೋನು ಬಟ್ಟೆ, ಕೈ ರಕ್ತಮಯವಾಗಿದ್ದರಿಂದ ಅನುಮಾನಗೊಂಡ ಪೊಲೀಸರು ತಡೆದು ಆತನನ್ನು ವಿಚಾರಿಸಿದ್ದಾರೆ. ಆಗ ಮೋನು ಗೆಳೆಯ ಭರತ್ ನನ್ನು ಕೊಲೆ ಮಾಡಿ ಬಂದಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೂಡಲೇ ಮೋನುನನ್ನ ವಶಕ್ಕೆ ಪಡೆದುಕೊಂಡು ಠಾಣೆಗೆ ವಿಷಯ ತಿಳಿಸಿ ಘಟನಾ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಯುವಕರೊಂದಿಗೆ ಸೆಕ್ಸ್ ಮಾಡುವಾಗ ಪತ್ನಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ!

ಪೊಲೀಸರ ತನಿಖೆಗೆ ಸಹಕರಿಸಿದ ಮೋನು, ಕೊಲೆ ನಡೆದ ಸ್ಥಳ ಮತ್ತು ಮೃತದೇಹ ಇರೋ ಜಾಗದ ಬಗ್ಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಸ್ಥಳದ ಪರಿಶೀಲನೆ ನಡೆಸಿ, ಮೃತದೇಹವನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕಿ ಜೊತೆ ಸೆಕ್ಸ್ ರಿಲೇಶನ್ ಶಿಪ್-ಪ್ರಶ್ನಿಸಿದ ತಾಯಿಯನ್ನ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಂದ ಸಲಿಂಗಿ ಮಗಳು

ಭರತ್ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸುತಿದ್ದನು. ಇಬ್ಬರ ನಡುವೆ ಹಣಕಾಸಿನ ವ್ಯವಹಾರದ ಮನಸ್ತಾಪ ಉಂಟಾಗಿತ್ತು. ಸದ್ಯ ಕೊಲೆ ಮಾಡಿರೋದನ್ನ ಆರೋಪಿ ಮೋನು ಒಪ್ಪಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ದೀಪಕ್ ಯಾದವ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಿಪಿಇ ಕಿಟ್ ಕಳಚಿ ಆಸ್ಪತ್ರೆಯ ಶೌಚಾಲಯದಲ್ಲೇ ಸೋಂಕಿತನೊಂದಿಗೆ ಸಲಿಂಗಿ ನರ್ಸ್ ಸೆಕ್ಸ್!

Click to comment

Leave a Reply

Your email address will not be published. Required fields are marked *