Connect with us

ದೆಹಲಿಯಲ್ಲಿ ಮೇ 17ರವರೆಗೆ ಲಾಕ್‍ಡೌನ್ ವಿಸ್ತರಣೆ

ದೆಹಲಿಯಲ್ಲಿ ಮೇ 17ರವರೆಗೆ ಲಾಕ್‍ಡೌನ್ ವಿಸ್ತರಣೆ

ನವದೆಹಲಿ: ಕೊರೊನಾ ನಿಯಂತ್ರಣ ಹಿನ್ನೆಲೆ ದೇಶದ ರಾಜಧಾನಿ ನವದೆಹಲಿಯ ಲಾಕ್‍ಡೌನ್ ಅವಧಿಯನ್ನ ಮೇ 17ರವರೆಗೆ ವಿಸ್ತರಿಸಲಾಗಿದೆ. ಇಂದು ಬೆಳಗ್ಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಲಾಕ್‍ಡೌನ್ ವಿಸ್ತರಿಸೋದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೇ 10ರಂದು ದೆಹಲಿ ಲಾಕ್‍ಡೌನ್ ಅಂತ್ಯವಾಗಲಿತ್ತು. ಆದ್ರೆ ಮಹಾಮಾರಿಯ ರೌದ್ರ ನರ್ತನ ಕಡಿಮೆಯಾಗದ ಹಿನ್ನೆಲೆ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಸಿಎಂ ತಿಳಿಸಿದರು. ಈ ಹಿಂದಿನ ಮಾರ್ಗಸೂಚಿಗಳೇ ಮುಂದುವರಿಯಲಿವೆ. ಸೋಮವಾರದಿಂದ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗುತ್ತಿದೆ.

ಲಾಕ್‍ಡೌನ್ ಘೋಷಣೆಯಿಂದ ಒಳ್ಳೆಯ ಪರಿಣಾಮ ಬಂದಿದ್ದು, ಹಂತ ಹಂತವಾಗಿ ಕೊರೊನಾ ತೀವ್ರತೆ ಇಳಿಕೆಯಾಗ್ತಿದೆ. ಏಪ್ರಿಲ್ 26ರ ನಂತರ ಹೊಸ ಪ್ರಕರಣಗಳ ಸಂಖ್ಯೆಯೂ ಸಹ ಇಳಿಕೆಯಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಸೋಂಕಿನ ತೀವ್ರತೆ ಶೇ.35 ರಿಂದ ಶೇ.23ಕ್ಕೆ ಬಂದಿದೆ. ಕೊರೊನಾ ನಿಯಂತ್ರಣಕ್ಕಾಗಿ ಮತ್ತಷ್ಟು ದಿನ ಲಾಕ್‍ಡೌನ್ ಅನಿವಾರ್ಯವಾಗಲಿದೆ ಎಂದು ಅರವಿಂದ ಕೇಜ್ರಿವಾಲ್ ಸರ್ಕಾರ ಹೇಳಿದೆ.

ಸೋಂಕಿನ ಪಸರಿಸುವ ಪ್ರಮಾಣ ಕಡಿಮೆಯಾಗ್ತಿದೆಯಂತ ನಿಯಮಗಳನ್ನ ಸಡಿಲಗೊಳಿಸಲು ಸಾಧ್ಯವಿಲ್ಲ. ಸಾರ್ವಜನಿಕರು ಕೊರೊನಾ ನಿಯಮಗಳನ್ನ ಪಾಲಿಸೋದರೊಂದಿಗೆ ಸರ್ಕಾರದ ಪ್ರಯತ್ನಕ್ಕೆ ಕೈಜೋಡಿಸಬೇಕು. ಇಲ್ಲವಾದಲ್ಲಿ ಇಷ್ಟು ದಿನದ ಲಾಕ್‍ಡೌನ್ ವ್ಯರ್ಥವಾಗಲಿದೆ. ಎರಡನೇ ಅಲೆ ಭಯಾನಕವಾಗಿದ್ದು, ಜೀವ ಇದ್ದರೆ ಜೀವನದಲ್ಲಿ ಏನಾದ್ರೂ ಮಾಡಿಕೊಳ್ಳಬಹುದು. ಹಾಗಾಗಿ ನಿಮ್ಮ ಜೀವನಕ್ಕಾಗಿ ಮನೆಯಲ್ಲಿಯೇ ಆರೋಗ್ಯದಿಂದಿರಿ ಎಂದು ಸಿಎಂ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement
Advertisement