Connect with us

Latest

ದೆಹಲಿಯಲ್ಲಿ ಮೈ ಕೊರೆಯುವ ಚಳಿ – ದಾಖಲಾಯ್ತು ಕನಿಷ್ಠ ಉಷ್ಣಾಂಶ

Published

on

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕನಿಷ್ಠ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. ಇಂದು ಬೆಳಗ್ಗೆ 6:10ಕ್ಕೆ 2.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ಮುಂದಿನ ಎರಡು ದಿನಗಳ ಕಾಲ ಕಡಿಮೆ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ದೆಹಲಿಯ ಲೋದಿ ರೋಡ್‍ನಲ್ಲಿ 1.7 ಡಿಗ್ರಿ ಸೆಲ್ಸಿಯಸ್, ಆಯಾ ನಗರ 1.9 ಡಿಗ್ರಿ ಸೆಲ್ಸಿಯಸ್, ಸಬ್ದರ್‍ಜಂಗ್ ಎನಕ್ಲೇವ್ 2.7 ಡಿಗ್ರಿ ಸೆಲ್ಸಿಯಸ್, ಪಾಲಂ ಏರ್‍ಪೋರ್ಟ್ 3.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು, ತಲೆ ಸುಡುವ ಬಿಸಿಲು, ಮಾರಕ ಮಾಲಿನ್ಯ ಕಂಡಿದ್ದ ದೆಹಲಿ ಜನರು ಮೈ ಕೊರತೆಯುವ ಚಳಿಗೆ ಬೆಚ್ಚಿ ಬಿದ್ದಿದ್ದಾರೆ.

ಬೆಳಗ್ಗೆ ಮಂಜು ಮುಸುಕಿದ ವಾತವರಣ ಕೂಡಿದ್ದು, ಸ್ಪಷ್ಟತೆ ಇಲ್ಲದ ಕಾರಣ ನಾಲ್ಕು ವಿಮಾನಗಳ ಹಾರಾಟದ ಮಾರ್ಗ ಬದಲಾವಣೆ ಮಾಡಲಾಗಿದೆ. ಅಲ್ಲದೆ ದೆಹಲಿಯಿಂದ ಹೊರಡುವ, ಆಗಮಿಸುವ 24 ರೈಲುಗಳು ತಡವಾಗಿ ಸಂಚರಿಸುತ್ತಿವೆ.

ಬೆಳಗ್ಗಿನ ವೇಳೆ ಗರಿಷ್ಠ 6.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದ್ರೆ, ರಾತ್ರಿ ಕನಿಷ್ಠ 4.5 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಗಾಳಿಯ ದಿಕ್ಕು ಬದಲಾವಣೆ ಆಗಿರುವ ಕಾರಣ ಈ ಪ್ರಮಾಣದಲ್ಲಿ ಉಷ್ಣಾಂಶ ಇಳಿಕೆ ಆಗಿದೆ. ಡಿ.31ರಂದು ದೆಹಲಿಯಲ್ಲಿ 4.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದ್ದು, ಇದು 1919ರಲ್ಲಿ ದಾಖಲಾಗಿದ್ದ ಚಳಿ ಮತ್ತೆ ಪುನರಾವರ್ತನೆಯಾಗಲಿದೆ. ಜೊತೆಗೆ 118 ವರ್ಷಗಳ ಬಳಿಕ ದಾಖಲೆಯ ಚಳಿ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.