Connect with us

Cricket

38 ಬಾಲ್‍ಗೆ 88 ರನ್, ಶ್ರೇಯಸ್ ಮಿಂಚಿನಾಟ- ಕೋಲ್ಕತ್ತಾಗೆ 229 ರನ್‍ಗಳ ಭರ್ಜರಿ ಟಾರ್ಗೆಟ್

Published

on

ಶಾರ್ಜಾ: ಮಿಂಚಿನ ಆಟವಾಡುವ ಮೂಲಕ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ಬೌಲರ್ ಗಳ ಬೆವರಿಳಿಸಿದ್ದು, 38 ಬಾಲ್‍ಗೆ ಬರೋಬ್ಬರಿ 88 ರನ್ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಕೋಲ್ಕತ್ತಾ ನೈಟ್ ರೈಡರ್ಸ್‍ಗೆ 229 ರನ್‍ಗಳ ಭರ್ಜರಿ ಟಾರ್ಗೆಟ್ ನೀಡಿತು.

ಶಿರ್ಜಾದಲ್ಲಿ ನಡೆಯುತ್ತಿರುವ ಐಪಿಎಲ್-2020ಯ 16ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಸಿಕ್ಸ್, ಫೋರ್ ಗಳ ಸುರಿಮಳೆಯೊಂದಿಗೆ ಕೋಲ್ಕತ್ತಾಗೆ ಸ್ಪರ್ಧಾತ್ಮಕ ಮೊತ್ತವನ್ನು ಟಾರ್ಗೆಟ್ ನೀಡಿದೆ. ಈ ಇನ್ನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಹಾಗೂ ಪೃಥ್ವಿ ಶಾ ಕೋಲ್ಕತ್ತಾಗೆ ಭರ್ಜರಿ ಮೊತ್ತದ ಟಾರ್ಗೆಟ್ ನೀಡಿದರು.

ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್, ಸಿಕ್ಸ್ ಫೋರ್ ಸಿಡಿಸುವ ಮೂಲಕ ಕೋಲ್ಕತ್ತಾ ಬೌಲರ್ ಗಳ ಬೆವರಿಳಿಸಿದರು. ಔಟಾಗದೆ 38 ಬಾಲ್‍ಗೆ ಬರೋಬ್ಬರಿ 88 ರನ್ ಸಿಡಿಸುವ ಮೂಲಕ ತಂಡದ ದಿಕ್ಕನ್ನೇ ಬದಲಿಸಿದರು. ಈ ಮೂಲಕ ಆರಂಭದಿಂದಲೂ ಉತ್ತಮವಾಗಿ ಆಟವಾಡಿಕೊಂಡು ಬಂದಿದ್ದ ತಂಡದ ಮೊತ್ತವನ್ನು ಇನ್ನೂ ಹೆಚ್ಚಿಸಿದರು. ಒಟ್ಟು 88 ರನ್‍ಗಳಲ್ಲಿ ಶ್ರೇಯಸ್ 6 ಸಿಕ್ಸ್ ಹಾಗೂ 7 ಬೌಂಡರಿ ಚೆಚ್ಚುವ ಮೂಲಕ ಮಿಂಚಿನ ಆಟವಾಡಿದರು.

ಆರಂಭದಲ್ಲಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಹಾಗೂ ಪೃಥ್ವಿ ಉತ್ತಮ ಜೊತೆಯಾಟವಾಡಿದರೂ ಪೃಥ್ವಿ 66 ರನ್ ಗಳಿಸಿ ಔಟಾದರು. ಇದರಲ್ಲಿ 4 ಸಿಕ್ಸ್ ಹಾಗೂ 4 ಫೋರ್ ಚಚ್ಚಿ ಮಿಂಚಿದರು.

ಪೃಥ್ವಿ, ಶ್ರೇಯಸ್ ಜೊತೆಯಾಟ:
ಶಿಖರ್ ಧವನ್ ಆರಂಭದಲ್ಲಿ ಉತ್ತಮವಾಗಿ ಆಟವಾಡಿದರು ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. 5ನೇ ಓವರ್ ನ ಅಂತ್ಯದ ವೇಳೆ ಔಟಾದರು. ಧವನ್ 16 ಬಾಲ್‍ಗೆ 26ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಪೃಥ್ವಿ ಹಾಗೂ ಶ್ರೇಯಸ್ ಜೊತೆಯಾಟದಲ್ಲಿ 73 ರನ್ ಕಲೆ ಹಾಕಿದರು. ಪೃಥ್ವಿ ಹಾಗೂ ಶ್ರೇಯಸ್ ತಮ್ಮ ಮಿಂಚಿನಾದಿಂದಾಗಿ ಸಿಕ್ಸರ್, ಫೋರ್ ಗಳನ್ನು ಚಚ್ಚಿದರು. 41 ಬಾಲ್‍ಗೆ 73 ರನ್ ಕಲೆ ಹಾಕಿದರು. ನಂತರ ಪಂದ್ಯ ಒಂದು ಹಂತಕ್ಕೆ ತಲುಪಿತು. ಆಕ್ರಮಣಕಾರಿ ಆಟವಾಡಿದ್ದ ಪೃಥ್ವಿ 41 ಬಾಲ್‍ಗೆ 66 ರನ್ ಬಾರಿಸಿದ್ದರು. ವಿಕೆಟ್ ಕಾಯ್ದುಕೊಂಡಿದ್ದ ಪೃಥ್ವಿ, 12ನೇ ಓವರ್ ನಲ್ಲಿ ಸಿಕ್ಸರ್ ಬಾರಿಸಲು ಹೋಗಿ ಕ್ಯಾಚ್ ನೀಡಿದರು.

ಶ್ರೇಯಸ್, ರಿಷಬ್ ಪಂತ್ ಜೊತೆಯಾಟ:
ಪೃಥ್ವಿ ಅವರು ಔಟಾದ ಬಳಿಕ ಶ್ರೇಯಸ್ ಅವರಿಗೆ ಜೊತೆಯಾದ ರಿಷಬ್ ಪಂತ್, ಉತ್ತಮ ಪ್ರದರ್ಶನ ನೀಡಿದರು. ಇಬ್ಬರ ಜೊತೆಯಾಟದಲ್ಲಿ 31 ಬಾಲ್‍ಗೆ 72 ರನ್ ಸಿಡಿಸಿದರು. ನಂತರ 17ನೇ ಓವರ್ ಮುಗಿಯುವಷ್ಟರಲ್ಲಿ ಪಂತ್ 17 ಬಾಲ್‍ಗೆ 38 ರನ್ ಸಿಡಿಸಿ ಔಟಾದರು.

ಆರಂಭದಲ್ಲಿ ಉತ್ತಮ ಆಟವಾಡಿದ್ದ ಧವನ್ ಅವರನ್ನು ವರುಣ್ ಚಕ್ರವರ್ತಿ ಔಟ್ ಮಾಡಿದರು. ಧವನ್ 5ನೇ ಓವರ್ ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಪೃಥ್ವಿ ಹಾಗೂ ಶ್ರೇಯಸ್ ಅಬ್ಬರದ ಆಟವಾಡಿ, ಪವರ್ ಪ್ಲೇ ಮುಕ್ತಾಯದ ವೇಳೆಗೆ 61ರನ್ ಗಳಿಸಿದರು. ಈ ಮೂಲಕ ಪಂದ್ಯವನ್ನು ಗೆಲುವಿನ ಹಂತಕ್ಕೆ ತಂದರು. ಇದೇ ಸಂದರ್ಭದಲ್ಲಿ 12ನೇ ಓವರ್ ವೇಳೆಗೆ ಕಮಲೇಶ್ ನಾಗರಕೋಟಿ ಪೃಥ್ವಿಯರನ್ನು ಔಟ್ ಮಾಡಿದರು. ಈ ಮೂಲಕ 41 ಬಾಲ್‍ಗೆ 66 ರನ್ ಗಳಿಸಿ ಪೃಥ್ವಿ ಶಾ ಔಟಾದರು. ನಂತರ ಜೊತೆಯಾಟವಾಡಿದ ರಿಷಭ್ ಪಂತ್ ಹಾಗೂ ಶ್ರೇಯಸ್ ಐಯ್ಯರ್ 16 ಓವರ್ ಮುಕ್ತಾಯದ ವೇಳೆಗೆ ತಂಡದ ಮೊತ್ತವನ್ನು 169ಕ್ಕೆ ಏರಿಸಿದ್ದರು.

ವಿಕೆಟ್ ಕಾಯ್ದುಕೊಂಡು ಶ್ರೇಯಸ್ ಜೊತೆ ಉತ್ತಮ ಆಟವಾಡುತ್ತಿದ್ದ ರಿಷಬ್ ಪಂತ್ 17ನೇ ಓವರ್ ಮುಕ್ತಾಯದ ವೇಳೆಗೆ 17 ಬಾಲ್‍ಗೆ 38 ರನ್ ಸಿಡಿಸಿ ಔಟಾದರು. ಸಿಕ್ಸರ್ ಹಾಗೂ 5 ಬೌಂಡರಿ ಚೆಚ್ಚುವ ಮೂಲಕ ಶ್ರೇಯಸ್ ಅವರಿಗೆ ಸಾಥ್ ನೀಡಿದ್ದರು. ಆದರೆ 17ನೇ ಓವರ್ ಮುಕ್ತಾಯದ ವೇಳೆಗೆ ಆಂಡ್ರೆ ರಸಲ್ ಔಟ್ ಮಾಡಿದರು. ಈ ಮೂಲಕ ಕ್ಯಾಚ್ ನೀಡಿ ಪಂತ್ ಪೆವಿಲಿಯನ್ ಕಡೆ ನಡೆದರು. ನಂತರ ಆಗಮಿಸಿದ ಮಾರ್ಕಸ್ ಸ್ಟೊಯ್ನಿಸ್, 3 ಬಾಲ್‍ಗೆ 1 ರನ್ ಗಳಿಸಿ ಔಟಾದರು.

ಆಂಡ್ರೆ ರಸಲ್ ಎಷ್ಟೇ ಪ್ರಯತ್ನಿಸಿದರೂ ಡೆಲ್ಲಿ ಆಟವನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಆದರೂ ಎರಡು ವಿಕೆಟ್ ಪಡೆದು ಸಮಾಧಾನ ಪಟ್ಟುಕೊಳ್ಳುವಂತೆ ಮಾಡಿದರು. ವರುಣ್ ಚಕ್ರವರ್ತಿ ಹಾಗೂ ಕಮಲೇಶ್ ನಾಗರಕೋಟಿ ತಲಾ ಒಂದು ವಿಕೆಟ್ ಪಡೆದರು.

Click to comment

Leave a Reply

Your email address will not be published. Required fields are marked *