Connect with us

Cinema

ದೀಪಿಕಾಗೆ ಏನಾಯ್ತು? ದಿಢೀರ್‌ ಎಲ್ಲ ಪೋಸ್ಟ್‌ ಡಿಲೀಟ್‌

Published

on

ಮುಂಬೈ: “ದೀಪಿಕಾ ಪಡುಕೋಣೆಗೆ ಏನಾಯ್ತು?” ಅಭಿಮಾನಿಗಳು ಈ ಪ್ರಶ್ನೆಯನ್ನು ಈಗ ಸಾಮಾಜಿಕ ಜಾಲತಾಣಲ್ಲಿ ಕೇಳುತ್ತಿದ್ದಾರೆ.

ಅಭಿಮಾನಿಗಳು ಈ ಪ್ರಶ್ನೆಯನ್ನು ಕೇಳಲು ಕಾರಣವಾವಿದೆ. ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಪಡುಕೋಣೆ ಸಕ್ರಿಯವಾಗಿದ್ದಾರೆ. ಆದರೆ ದಿಢೀರ್‌ ಎಂಬಂತೆ ದಿಪೀಕಾ ಪಡುಕೋಣೆ ಟ್ವಿಟ್ಟರ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿದ್ದ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ.

ಹೊಸ ವರ್ಷದ ಮೊದಲ ದಿನವೇ ದಿನವೇ ದೀಪಿಕಾ ಎಲ್ಲ ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಟ್ಟಿಟ್ಟರ್‌ನಲ್ಲಿ ದೀಪಿಕಾ ಪಡುಕೋಣೆ 68 ಜನರನ್ನು ಫಾಲೋ ಮಾಡುತ್ತಿದ್ದರೆ ದೀಪಿಕಾರನ್ನು 2.77 ಕೋಟಿ ಜನ ಫಾಲೋ ಮಾಡುತ್ತಿದ್ದರು.

ಇನ್‌ಸ್ಟಾಗ್ರಾಮ್‌ನಲ್ಲಿ ದೀಪಿಕಾ 128 ಜನರನ್ನು ಫಾಲೋ ಮಾಡುತ್ತಿದ್ದರೆ ಅವರನ್ನು 5.25 ಕೋಟಿ ಮಂದಿ ಫಾಲೋ ಮಾಡುತ್ತಿದ್ದಾರೆ. ದೀಪಿಕಾ ತಮ್ಮ ಸಿನಿಮಾ ಪ್ರಚಾರದ ಸಮಯದಲ್ಲಿ ತಮ್ಮ ಪಾತ್ರದ ಫೋಟೋವನ್ನು ಅಪ್ಲೋಡ್‌ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಪ್ರೊಫೈಲ್‌ ಫೋಟೋ ಬದಲಾಯಿಸುತ್ತಿದ್ದರು.

ಇಂದು ಟ್ವಿಟ್ಟರ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಧ್ವನಿ ಇರುವ ಆಡಿಯೋ ಪೋಸ್ಟ್‌ ಮಾಡಿ ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in