Connect with us

Bollywood

ನಿಮ್ಮ ಪ್ರಶ್ನೆಗೆ ಉತ್ತರಿಸಿದ್ರೆ ರಣ್‍ವೀರ್ ಮನೆಗೆ ಬರಲ್ಲ: ದೀಪಿಕಾ

Published

on

ಮುಂಬೈ: ಗುಳಿಕೆನ್ನೆ ಬೆಡಗಿ, ರಣ್‍ವೀರ್ ಮಡದಿ ದೀಪಿಕಾ ಪಡುಕೋಣೆ ತಮ್ಮ ಸರಳ ನಟನೆಯ ಮೂಲಕವೇ ಗುರುತಿಸಿಕೊಂಡ ನಟಿ. ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಭಿಮಾನಿಯ ಪ್ರಶ್ನೆಗೆ ದೀಪಿಕಾ ನೀಡಿದ ಉತ್ತರ ಎಲ್ಲರನ್ನು ನಗೆಗಡಲಿನಲ್ಲಿ ತೇಲುವಂತೆ ಮಾಡಿದೆ. ಸದ್ಯ ದೀಪಿಕಾ ಜಾಣ ಉತ್ತರದ ವಿಡಿಯೋ ಬಾಲಿವುಡ್ ಗಲ್ಲಿಗಳಲ್ಲಿ ಸದ್ದು ಮಾಡುತ್ತಿದೆ.

ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿರುವ ದೀಪಿಕಾ ಆಟದಲ್ಲಿಯೂ ಗುರುತಿಸಿಕೊಂಡಿದ್ದರು. ಈ ಹಿಂದಿನ ಹಲವು ಸಂದರ್ಶನಗಳಲ್ಲಿ ತಮ್ಮ ಆಟದ ಬಗ್ಗೆ ದೀಪಿಕಾ ಹೇಳಿಕೊಂಡಿದ್ದರು. ಈ ಹಿಂದೆ ರಣ್‍ವೀರ್ ಜೊತೆ ಒಂದು ಬಾರಿ ಬ್ಯಾಡ್ಮಿಂಟನ್ ಆಡಿದ್ದೇನೆ ಎಂದು ತಿಳಿಸಿದ್ದರು. ಗುರುವಾರದ ಸುದ್ದಿಗೋಷ್ಠಿಯಲ್ಲಿ ರಣ್‍ವೀರ್ ಬ್ಯಾಡ್ಮಿಂಟನ್ ಅಂಗಳದಲ್ಲಿ ನಿಮ್ಮನ್ನು ಎದುರಿಸುವ ಧೈರ್ಯ ಮಾಡಿದ್ದಾರಾ? ಪಂದ್ಯ ಆಡಿದ್ದರೆ ಇಬ್ಬರಲ್ಲಿ ಗೆದ್ದಿದ್ಯಾರು ಎಂದು ಪ್ರಶ್ನೆ ಮಾಡಿದ್ದರು.

ದೀಪಿಕಾ ಉತ್ತರ ಹೀಗಿತ್ತು: ರಣ್‍ವೀರ್ ವಿರುದ್ಧ ಆಡಿರುವ ಪಂದ್ಯದಲ್ಲಿ ನಾನೇ ಗೆದ್ದಿರುತ್ತೇನೆ. ನಿಮಗೆ ನಾನು ಪಂದ್ಯದ ಸ್ಕೋರ್ ಹೇಳಬಹುದು. ಸ್ಕೋರ್ ಹೇಳಿದ್ರೆ ಹೈದರಾಬಾದ್ ನಲ್ಲಿರುವ ಪತಿ ರಣ್‍ವೀರ್ ವಾಪಾಸ್ ಮನೆಗೆ ಬರಲ್ಲ. ಹಾಗಾಗಿ ಪಂದ್ಯದ ಸ್ಕೋರ್ ರಹಸ್ಯ ಹೇಳಲ್ಲ ಎಂದು ನಕ್ಕರು.

2018ರ ನವೆಂಬರ್ 14 ಮತ್ತು 15ರಂದು ಇಟಲಿಯಲ್ಲಿ ರಣ್‍ವೀರ್ ಮತ್ತು ದೀಪಿಕಾ ಸಾಂಸರಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದಾದ ಬಳಿಕ ಬೆಂಗಳೂರು ಮತ್ತು ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಜೋಡಿ ಆಯೋಜಿಸಿತ್ತು. ಮದುವೆ ಬಳಿಕ ರಣ್‍ವೀರ್ ನಟನೆಯ ಸಾಲು ಸಾಲು ಸಿನಿಮಾಗಳು ತೆರೆಕಂಡು ಗಲ್ಲಾ ಪೆಟ್ಟಿಗೆಯನ್ನು ದೋಚಿಕೊಂಡಿವೆ. ಸದ್ಯ ರಣ್‍ವೀರ್ ನಟನೆಯ ಟೀಂ ಇಂಡಿಯಾದ ಮಾಜಿ ನಾಯಕ ಕಪಿಲ್ ದೇವ್ ಜೀವನಾಧರಿತ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಫೋಟೋಗಳು ಸದ್ದು ಮಾಡುತ್ತಿವೆ. ಇತ್ತ ದೀಪಿಕಾ ನಟನೆಯ ‘ಚಾಪಕ್’ ಬಿಡುಗಡೆಗೆ ಸಿದ್ಧಗೊಂಡಿದೆ.