
ಉದಯ್ಪುರ: ಬಾಲಿವುಡ್ ಕ್ಯೂಟ್ ಕಪಲ್ಸ್ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಭಾರತದ ನಂಬರ್ 1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯ ಮಗಳ ಮದುವೆ ಪೂರ್ವ ಸಮಾರಂಭದಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿ ಸಂಭ್ರಮಿಸಿದ್ದಾರೆ.
ಬಿಟೌನ್ ತಾರೆಯರೆಲ್ಲ ಇಶಾ ಅಂಬಾನಿಯವರ ಮದುವೆ ಪೂರ್ವ ಪಾರ್ಟಿಯನ್ನು ಸಖತ್ ಆಗಿ ಎಂಜಾಯ್ ಮಾಡುವ ಮೂಲಕ ಸಂಭ್ರಮಕ್ಕೆ ಇನ್ನಷ್ಟು ಮೆರಗು ತಂದರು. ಉದಯ್ಪುರದಲ್ಲಿ ನಡೆಯುತ್ತಿರುವ ಈ ಅದ್ದೂರಿ ಮದುವೆ ಸಂಭ್ರಮದಲ್ಲಿ ಸಿನಿ ತಾರೆಯರು ಹೆಜ್ಜೆ ಹಾಕಿ ಮಿಂಚಿದ್ದಾರೆ. ಅದರಲ್ಲೂ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಅವರ ಕಪಲ್ ಡ್ಯಾನ್ಸ್ ನೋಡಿ ಸಂತೋಷಪಟ್ಟರು.
ಇಶಾ ಅಂಬಾನಿ ಮದುವೆ ಕಾರ್ಯಕ್ರಮದಲ್ಲಿ ದೀಪ್ವೀರ್ ಬಾಲಿವುಡ್ನ ಹಿಟ್ ಹಾಡುಗಳಿಗೆ ಜೊತೆಯಾಗಿ ಹೆಜ್ಜೆ ಹಾಕಿದರು. ಅಷ್ಟೇ ಅಲ್ಲದೆ `ದಿಲ್ ಧಡಕನೆ ದೋ’ ಚಿತ್ರದ ಗಾಲಾ ಗುಡಿಯಾ ಹಾಡಿಗೆ ಕ್ಯೂಟ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನ ಗೆದ್ದಿದೆ.
ಒಂದೆಡೆ ದೀಪಿಕಾ ಹಾಗೂ ರಣ್ವೀರ್ ಇನ್ನೊದೆಡೆ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಕೂಲ್ ಆಗಿ ಹೆಜ್ಜೆ ಹಾಕಿದ್ದಾರೆ. ನಾವ್ಯಾರಿಗೂ ಕಮ್ಮಿ ಇಲ್ಲ ಅನ್ನೋ ರೀತಿ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಬಹಳ ವರ್ಷಗಳ ನಂತರ ಜೋಡಿಯಾಗಿ `ಗುರು’ ಸಿನಿಮಾದ `ತೇರೆ ಬಿನಾ’ ಹಾಡಿಗೆ ಹೆಜ್ಜೆಹಾಕಿ ಎಲ್ಲರ ಗಮನ ಸೆಳೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv