Connect with us

Cricket

ದೀಪಕ್ ಚಹರ್ ಮಾರಕ ಬೌಲಿಂಗ್‍ಗೆ ಪಂಜಾಬ್ ಬಲಿ – ಚೆನ್ನೈಗೆ 6 ವಿಕೆಟ್‍ಗಳ ಭರ್ಜರಿ ಜಯ

Published

on

ಮುಂಬೈ: ಪಂಜಾಬ್ ಕಿಂಗ್ಸ್ ವಿರದ್ಧ 6 ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಐಪಿಎಲ್‍ನಲ್ಲಿ ಶುಭಾರಂಭ ಮಾಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ದೀಪಕರ್ ಚಹರ್ ಅವರ ಮಾರಕ ಬೌಲಿಂಗ್‍ಗೆ ತತ್ತರಿಸಿ 8 ವಿಕೆಟ್ ನಷ್ಟಕ್ಕೆ 106 ರನ್‍ಗಳಿಸಿತು. ಸುಲಭದ ಸವಾಲನ್ನು ಬೆನ್ನಟ್ಟಿದ ಚೈನ್ನೈ 15.4 ಓವರ್‍ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 107 ರನ್ ಹೊಡೆದು ಜಯ ಸಾಧಿಸಿತು.

ಚೆನ್ನೈ ಪರ ಆರಂಭಿಕ ಆಟಗಾರ ಫಾ ಡುಪ್ಲೆಸಿಸ್ ಔಟಾಗದೇ 36 ರನ್(33 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದರೆ, ಮೊಯಿನ್ ಆಲಿ 46 ರನ್(31 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತ್ತು. ಆರಂಭಿಕ ಬ್ಯಾಟ್ಸ್ ಮ್ಯಾನ್ ಕನ್ನಡಿಗ ಮಯಾಂಕ್ ಅಗರ್‍ ವಾಲ್ ಶೂನ್ಯಕ್ಕೆ ಔಟಾದರೆ ಇನ್ನೂರ್ವ ಕನ್ನಡಿಗ ಕೆ.ಎಲ್ ರಾಹುಲ್ 5 ರನ್ ಗಳಿಸಿದ್ದಾಗ ರನೌಟ್ ಆದರು. ಕಳೆದ ಪಂದ್ಯದ ಹೀರೋಗಳಾದ ಕ್ರೀಸ್ ಗೇಲ್ 10 ರನ್(10 ಎಸೆತ, 2 ಬೌಂಡರಿ) ಬಾರಿಸಿ ಔಟ್ ಆದರೆ ಅವರ ಹಿಂದೆಯೇ ದೀಪಕ್ ಹೂಡ 10 ರನ್ (15 ಎಸೆತ,1 ಬೌಂಡರಿ) ಬಾರಿಸಿ ಡಗೌಟ್ ಸೇರಿಕೊಂಡರು. ಇಷ್ಟುತ್ತಿಗಾಗಲೇ ಪಂಜಾಬ್ ತಂಡ 19 ರನ್‍ಗಳಿಗೆ 4 ವಿಕೆಟ್ ಕಳೆದು ಕೊಂಡು ಸಂಕಷ್ಟಕ್ಕೆ ಸಿಲುಕಿತು. ಕೆಳಕ್ರಮಾಂಕದಲ್ಲಿ ಬಂದ ಯಾವೊಬ್ಬ ಬ್ಯಾಟ್ಸ್ ಮ್ಯಾನ್ ಕೂಡ ಪಂಜಾಬ್ ಸ್ಕೋರ್ ಹೆಚ್ಚಿಸಲು ಮುಂದಾಗಲಿಲ್ಲ.

ಶಾರೂಕ್ ಖಾನ್ ಅವರು 47 ರನ್( 36 ಎಸೆತ, 4 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಮೊತ್ತ 100 ರನ್‍ಗಳ ಗಡಿ ದಾಟುವಂತೆ ಮಾಡಿದರು.

ದೀಪಕ್ ಚಹರ್ 4 ಓವರ್ ಎಸೆದು 13 ರನ್ ನೀಡಿ 4 ವಿಕೆಟ್ ಪಡೆದಿದ್ದು ಚೆನ್ನೈ ತಂಡಕ್ಕೆ ನೆರವಾಗಿತ್ತು. ಮಯಾಂಕ್ ಅಗರ್‍ ವಾಲ್, ಕ್ರೀಸ್ ಗೇಲ್, ದೀಪಕ್ ಹೂಡಾ, ನಿಕೊಲಸ್ ಪೂರನ್ ಅವರನ್ನು ಔಟ್ ಮಾಡಿದ್ದು ಮಾತ್ರವಲ್ಲೇ ಒಂದು ಓವರ್ ಮೇಡನ್ ಎಸೆದು ಪಂಜಾಬ್ ತಂಡವನ್ನು ಯಶಸ್ವಿಯಾಗಿ ನಿಯಂತ್ರಿಸಿದರು.

Click to comment

Leave a Reply

Your email address will not be published. Required fields are marked *