ನವದೆಹಲಿ: ಎಂಟು ವರ್ಷಗಳು ಹಿಂದೆ ಮೃತಪಟ್ಟಿದ್ದಾಳೆ ಎಂದು ಬಿಂಬಿಸಲಾಗಿದ್ದ ಯುವತಿ ಈಗಲೂ ಬದುಕಿರುವ ವಿಚಾರ ವಾಟ್ಸಪ್ ಮೂಲಕ ಗೊತ್ತಾಗಿದೆ.
ಜಾರ್ಖಾಂಡಿನ ಗುಮ್ಲಾ ಗ್ರಾಮದ ಯವತಿ ಸರಿತಾ(ಹೆಸರು ಬದಲಾಯಿಸಲಾಗಿದೆ) ಎಂಟು ವರ್ಷಗಳ ಹಿಂದೆ ಮೃತಪಟ್ಟಿದ್ದಾಳೆ ಎಂದು ವ್ಯಾಪಾರಿಯೊಬ್ಬ ಹೇಳಿದ್ದನು. ಆದರೆ ಕೆಲ ದಿನಗಳ ಹಿಂದೆ ವಾಟ್ಸಪ್ ಫೋಟೋ ಮೂಲಕ ಸರಿತಾ ಇನ್ನೂ ಬದುಕಿದ್ದಾಳೆ ಎನ್ನುವ ವಿಚಾರ ಎಂದು ತಿಳಿದು ಬಂದಿದೆ. ಇಷ್ಟು ವರ್ಷ ಸರಿತಾಳನ್ನು ದೆಹಲಿಯಲ್ಲಿ ಸಂಬಳ ಕೊಡದೆ ಗುಲಾಮಳಾಗಿ ಬಲವಂತವಾಗಿ ಮನೆಯ ಕೆಲಸ ಮಾಡಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಏನಿದು ಪ್ರಕರಣ?
ಸರಿತಾಳ ಸಹೋದರ ಗುಮ್ಲಾದಲ್ಲಿ ಮಾನವ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂದು ದೂರು ನೀಡಿದ್ದು, ಜೊತೆಗೆ ದೆಹಲಿಯ ರಾಕಿ ಸಿಂಗ್ ಈ ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನವ ಕಳ್ಳಸಾಗಣಿಕೆ ವಿಭಾಗಕ್ಕೆ ದೂರು ನೀಡಿದ್ದರು. ಶಂಕಿತ ಸಾಗಾಣಿಕೆದಾರ ಸುರಾಜ್ ಮಹ್ಲಿ, ಈಗ ಜಾರ್ಖಾಂಡಿನ ಪಾಲ್ಕಾಟ್ ಬ್ಲಾಕ್ ನಿವಾಸಿಯಾಗಿದ್ದು, ಈತ ನಾನು ಉದ್ಯೊಗ ಸಂಸ್ಥೆಗೆ ಮಾರಾಟ ಮಾಡಿದ್ದೆ. ಆದರೆ ಎಂಟು ವರ್ಷಗಳ ಹಿಂದೆ ಸರಿತಾ ಮೃತಪಟ್ಟಿದ್ದಾಳೆ ಎಂದು ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದನು.
Advertisement
ಉದ್ಯೋಗಾವಕಾಶ ಸಂಸ್ಥೆ ದೆಹಲಿಯಲ್ಲಿದ್ದು, ಗುಮ್ಲಾದ ಇನ್ನೊಬ್ಬ ಹುಡುಗಿ ಸರಿತಾ ಫೋಟೋವೊಂದನ್ನು ತೆಗೆದಿದ್ದು, ಕೆಲವು ದಿನಗಳ ಹಿಂದೆ ಬಸಿಯದಿಂದ ಹುಡುಗನಿಗೆ ಕಳುಹಿಸಿದ್ದಳು. ಬಳಿಕ ಸರಿತಾ ಫೋಟೋವನ್ನು ಆಕೆಯ ಕುಟುಂಬವರು ಗುರುತಿಸಿದ್ದಾರೆ. ಆಗ ತಮ್ಮ ಮಗಳು ಬದುಕಿರುವ ಬಗ್ಗೆ ತಿಳಿದಿದೆ.
Advertisement
ಯುವತಿ ಸತ್ತಿದ್ದಾಳೆ ಎಂದು ಸುಳ್ಳು ಮಾಹಿತಿ ನೀಡಲಾಗಿದೆ. ಆದ್ದರಿಂದ ಈ ಕುರಿತು ಮತ್ತೆ ಮಹ್ಲಿ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮಾನವ ಕಳ್ಳಸಾಗಣೆ ವಿಭಾಗದ ಮುಖ್ಯಸ್ಥ ಆರ್.ಎನ್. ಝಾ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv