Saturday, 25th May 2019

Recent News

ದೇವೇಗೌಡ್ರ ಪರ ಡಿಸಿಎಂ ಕೆಲಸ ಮಾಡಿಲ್ಲ- ಮಾಜಿ ಶಾಸಕನಿಂದ ಹೊಸಬಾಂಬ್

ತುಮಕೂರು: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಪರ ಡಿಸಿಎಂ ಜಿ. ಪರಮೇಶ್ವರ್ ಅವರು ಕೆಲಸ ಮಾಡಿಲ್ಲ. ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನವರೇ ಸೋಲಿಸೋದು ನಿಜ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮಾಂತರ ಕ್ಷೇತ್ರದಲ್ಲೇ ಬಿಜೆಪಿ 10ಸಾವಿರ ಲೀಡ್ ತೆಗೆದುಕೊಳ್ಳುತ್ತದೆ. ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ ಕೂಡ ದೇವೇಗೌಡರನ್ನ ಗೆಲ್ಲಿಸುವುದಕ್ಕೆ ಒಂದು ರೂಪಾಯಿ ಕೆಲಸ ಮಾಡಿಲ್ಲ. ಅಲ್ಲದೆ ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ಎಲ್ಲೂ ಸಭೆ ಮಾಡಿ ಗೆಲ್ಲಿಸೋಕೆ ಶ್ರಮಿಸಿಲ್ಲ ಎಂದು ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರವನ್ನ ಬೀಳಿಸೋಕೆ ಕಾಂಗ್ರೆಸ್ ನವರೇ ಪ್ಲಾನ್ ಮಾಡಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ಸಮ್ಮಿಶ್ರ ಸರ್ಕಾರ ಬೀಳೋದು ನೂರಕ್ಕೆ ನೂರು ಸತ್ಯ. ಫಲಿತಾಂಶ ಬಂದ ಬಳಿಕ ಯಾರು ಏನೇನು ಪ್ಲಾನ್ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. ಜೆಡಿಎಸ್, ಕಾಂಗ್ರೆಸ್ ಕೂಡ ಪ್ಲಾನ್ ಮಾಡಿ ಬಿಜೆಪಿಗೆ ವೋಟ್ ಹಾಕಿದ್ದಾರೆ ಅಂದ್ರು.

ದೇವೇಗೌಡರು ಗೆದ್ದರೇ ಅವರ ಕುಟುಂಬದವರು ಬರುತ್ತಾರೆ ಅನ್ನೋ ಆತಂಕ ಇದೆ. ಹೀಗಾಗಿ ಮಂಡ್ಯ, ರಾಮನಗರದ ರೀತಿ ಆಗುತ್ತದೆ ಎಂದು ದೇವೇಗೌಡರನ್ನ ಸೋಲಿಸೋ ಹುನ್ನಾರ ಮಾಡಿದ್ದಾರೆ. ನೂರಕ್ಕೆ ನೂರರಷ್ಟು ದೇವೇಗೌಡರನ್ನ ದಿಕ್ಕುತಪ್ಪಿಸಿದ್ದಾರೆ. ಮೈಸೂರಿನಲ್ಲಿ ವಿಜಯ ಶಂಕರ್, ಮಂಡ್ಯದಲ್ಲಿ ನಿಖಿಲ್ ಸೋಲ್ತಾರೆ ಎಂದು ಅವರು ಭವಿಷ್ಯ ನುಡಿದರು.

One thought on “ದೇವೇಗೌಡ್ರ ಪರ ಡಿಸಿಎಂ ಕೆಲಸ ಮಾಡಿಲ್ಲ- ಮಾಜಿ ಶಾಸಕನಿಂದ ಹೊಸಬಾಂಬ್

  1. Mind your own business Mr.Suresh gowda Ex MLA.You are thinking that you will become great if you talk (tease) about great people like Our Honorable Ex PM Respected HDD and our respected CM HDK.
    Honest leaders and voters are the power of our JDS party.We never bother like you nonsense people.

Leave a Reply

Your email address will not be published. Required fields are marked *