Sunday, 18th November 2018

Recent News

ವಿಧಾನಸಭಾ ಚುನಾವಣೆ ಮುನ್ನಾದಿನವೇ ಛತ್ತೀಸ್‍ಗಡನಲ್ಲಿ ಗುಂಡಿನ ಚಕಮಕಿ

ರಾಯಪುರ್: ಛತ್ತೀಸ್‍ಗಡ ವಿಧಾಸಸಭಾ ಚುನಾವಣೆಗೆ ಒಂದು ದಿನ ಬಾಕಿ ಇರುವಾಗಲೇ ಮಾವೋವಾದಿಗಳು ಮತ್ತು ಭದ್ರತಾ ಸಿಬ್ಬಂದಿ ಮಧ್ಯೆ ಗುಂಡಿನ ಚಕಮಕಿ ಆರಂಭವಾಗಿದ್ದು, ಓರ್ವ ಮಾವೋವಾದಿ ಬಲಿಯಾಗಿದ್ದಾನೆ.

ಭದ್ರತಾ ಸಿಬ್ಬಂದಿ ಇರುವ ಸ್ಥಳಗಳ ಮೇಲೆ ಹಂತ ಹಂತವಾಗಿ ಆರು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಮಾವೋವಾದಿಗಳು ಸಿಡಿಸಿದ್ದಾರೆ. ಇದರಿಂದಾಗಿ ಗಡಿಭಾಗಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಒಬ್ಬ ಮಾವೋವಾದಿಯ ದೇಹ ಪತ್ತೆಯಾಗಿದೆ. ಅಷ್ಟೇ ಅಲ್ಲದೆ ಕೆಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾವೋವಾದಿಗಳು ಹಾಗೂ ಭದ್ರತಾ ಸಿಬ್ಬಂದಿ ಸಂಘರ್ಷದಿಂದಾಗಿ ಬಸ್ರತರ್, ಕಂಕೇರ್, ಸುಕ್ಮಾ, ಬಿಜಾಪುರ್, ದಾಂತೇವಾಡ್, ನಾರಾಯಣ್‍ಪುರ್, ಕೊಂಡಾಗೊನ್ ಮತ್ತು ರಾಜನಂದ್‍ಗಾವ್ ಪ್ರದೇಶಗಳ ಜನರಿಗೆ ಆತಂಕ ಎದುರಾಗಿದೆ.

ವಿಧಾನಸಭಾ ಚುನಾವಣೆ ಮೊದಲ ಹಂತದ ಮತದಾ ಸೋಮವಾರ ಆರಂಭವಾಗಲಿದೆ. ಇದಕ್ಕೆ ಯಾವುದೇ ರೀತಿಯ ಅಡ್ಡಿಯಾಗದಂತೆ ಎಚ್ಚರವಹಿಸಲು ಸರ್ಕಾರವು, ಒಟ್ಟು ಒಂದು ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಆದರೂ ಮಾವೋವಾದಿಗಳು ತಮ್ಮ ಕೃತ್ಯ ಮುಂದುವರಿಸಿದ್ದಾರೆ.

ದಾಂತೇವಾಡ ಜಿಲ್ಲೆಯ ಬಚೇಲಿ ಗುಡ್ಡಗಾಡು ಪ್ರದೇಶದಲ್ಲಿ ಮಾವೋವಾದಿಗಳು ಬಸ್‍ನಲ್ಲಿ ಬಾಂಬ್ ಇಟ್ಟು ಗುರುವಾರ ಸ್ಫೋಟಿಸಿದ್ದರು. ಪರಿಣಾಮ ಓರ್ವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಸಿಎಫ್) ಸಿಬ್ಬಂದಿ ಹಾಗೂ ನಾಲ್ವರು ಸ್ಥಳೀಯರು ಮೃತಪಟ್ಟಿದ್ದರು. ಇದಕ್ಕೂ ಮುನ್ನ ಇಬ್ಬರು ಪೊಲೀಸರು ಹಾಗೂ ದೂರದರ್ಶನದ ಕ್ಯಾಮೆರಾಮನ್ ಮಾವೋವಾದಿಗಳ ಗುಂಡಿಗೆ ಬಲಿಯಾಗಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *