Connect with us

ಸ್ವಪಕ್ಷಿಯರ ವಿರುದ್ಧವೇ ಗುಡುಗಿದ ರೇಣುಕಾಚಾರ್ಯ

ಸ್ವಪಕ್ಷಿಯರ ವಿರುದ್ಧವೇ ಗುಡುಗಿದ ರೇಣುಕಾಚಾರ್ಯ

ದಾವಣಗೆರೆ: ನೀವು ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ ಯಾಕೆ ನಿಮ್ಮ ಜವಾಬ್ದಾರಿಗಳನ್ನು ಬೇರೆಯವರಿಗೆ ಹಂಚಿಕೆ ಮಾಡುತ್ತಾ ಇದ್ವಿ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಸಚಿವ ಸುಧಾಕರ್‍ಗೆ ಪರೋಕ್ಷ ಟಾಂಗ್ ನೀಡಿದ್ದಾರೆ.

ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಸ್ಬಪಕ್ಷದವರ ವಿರುದ್ಧವೇ ಗುಡುಗಿದರು. ಸಚಿವರುಗಳು ಆತ್ಮವಲೋಕನ ಮಾಡಿಕೊಳ್ಳಬೇಕು ಕೆಲಸ ಮಾಡ್ತಾ ಇದ್ದೀವಾ ಇಲ್ವಾ ಅಂತ. ಯಾರಿಗೆ ಯಾವ ಜವಾಬ್ದಾರಿ ಇದೆ ಅಂತ ನಾವಾಗಲಿ, ಮುಖ್ಯಮಂತ್ರಿ ಹೇಳೋದಲ್ಲ ಅವರೆ ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

ಮುಖ್ಯಮಂತ್ರಿಗಳು ಇಳಿವಯಸ್ಸಿನಲ್ಲಿ ಕೆಲಸ ಮಾಡ್ತಾ ಇದ್ದಾರೆ ಸಚಿವರಿಗೆ ಏನಾಗಿದೆ. ಸಚಿವರುಗಳು ಸರ್ಕಾರಕ್ಕೆ ಪಕ್ಷಕ್ಕೆ ಮುಖ್ಯಮಂತ್ರಿಗಳಿಗೆ ವರ್ಚಸ್ಸು ತರೋ ಕೆಲಸ ಮಾಡಬೇಕು ಎಂದು ಪರೋಕ್ಷವಾಗಿ ಸುಧಾಕರ್ ಗೆ ಟಾಂಗ್ ಕೊಟ್ಟರು.

ನೀವು ಒಳ್ಳೆಯ ಕೆಲಸ ಮಾಡಿದ್ದರೆ ಯಾಕೆ ನಿಮ್ಮ ಜವಾಬ್ದಾರಿಗಳನ್ನ ಬೇರೆಯವರಿಗೆ ಹಂಚಿಕೆ ಮಾಡ್ತಾ ಇದ್ವಿ. ನಿಮ್ಮ ಕೆಲಸದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ ನಿಮಗೆ ನೀವೆ ಮಾಕ್ರ್ಸ್ ಕೊಟ್ಕೊಳ್ಳಿ ಎಂದು ರೇಣುಕಾಚಾರ್ಯ ತಿಳಿಸಿದರು.

Advertisement
Advertisement