Connect with us

Davanagere

59ರ ಹುಟ್ಟುಹಬ್ಬದ ಸಂಭ್ರಮದಲ್ಲಿ ಭರ್ಜರಿ ಡ್ಯಾನ್ಸ್ ಮಾಡಿದ ಶಾಸಕ ರೇಣುಕಾಚಾರ್ಯ

Published

on

– ಅಭಿಮಾನಿಗಳಿಂದ ದಂಪತಿಗೆ ಹಾಲಿನ ಅಭಿಷೇಕ

ದಾವಣಗೆರೆ: ಶಾಸಕ ಎಂಪಿ ರೇಣುಕಾಚಾರ್ಯ ಭರ್ಜರಿ ಡ್ಯಾನ್ಸ್ ಮಾಡಿ ಇದೀಗ ಸುದ್ದಿಯಾಗಿದ್ದಾರೆ. ಹೊನ್ನಾಳಿಯ ಅಗಳ ಮೈದಾನದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಶಾಸಕರು ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ನಿನ್ನೆ ರೇಣುಕಾಚಾರ್ಯ ಅವರ 59ನೇ ಹುಟ್ಟುಹಬ್ಬ. ಈ ಪ್ರಯುಕ್ತ ಅವರ ಅಭಿಮಾನಿಗಳು ಮಧ್ಯಾಹ್ನ ಅಭಿನಂದನಾ ಸಮಾರಂಭ, ರಾತ್ರಿ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಗಾಯಕರು ಹೇಳಿದ ಸಾಂಗ್ ಗೆ ಶಾಸಕರು ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಕುಟುಂಬ ಸದಸ್ಯರ ಜೊತೆ ಹಾಗೂ ಅಭಿಮಾನಿಗಳ ಜೊತೆ ರೇಣುಕಾಚಾರ್ಯ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಪತ್ನಿ ಮಕ್ಕಳ ಜೊತೆ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ದಾರೆ. ಶಾಸಕರ ಡ್ಯಾನ್ಸ್ ಗೆ ಹೊನ್ನಾಳಿ ಜನತೆ ಫಿದಾ ಆಗಿದ್ದಾರೆ.

ಇದಕ್ಕೂ ಮುನ್ನ ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದ ಸಂತೆ ಮೈದಾನದಲ್ಲಿ ಹಾಲಿನಭಿಷೇಕ ಕಾರ್ಯಕ್ರಮವಿತ್ತು. ಅಭಿಮಾನಿಗಳು ರೇಣುಕಾಚಾರ್ಯ ಮತ್ತು ಪತ್ನಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಹಾಲಿನಾಭಿಷೇಕ ಮಾಡಿ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ನಂತರ ಶಾಸಕರು ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿದರು.

Click to comment

Leave a Reply

Your email address will not be published. Required fields are marked *