Connect with us

Bengaluru City

ಅಪ್ಪಾಜಿಯವ್ರ ಪ್ರೀತಿ-ಆದರ್ಶ ಕುಟುಂಬ, ಅಭಿಮಾನಿಗಳನ್ನು ಕಾಯ್ತಿರುತ್ತದೆ- ದರ್ಶನ್

Published

on

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ದರ್ಶನ್, ಇಂದು ಅಂಬರೀಶ್ ಅವರ 67ನೇ ಹುಟ್ಟುಹಬ್ಬ. ದರ್ಶನ್ ಅವರು ಕಾರಿನಲ್ಲಿ ಅಂಬರೀಶ್ ಅವರ ಜೊತೆ ಕುಳಿತುಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿ ಹುಟ್ಟುಹಬ್ಬದ ದಿನವಾದ ಇಂದು ತಮ್ಮ ಅಪ್ಪಾಜಿಯನ್ನು ನೆನಪಿಸಿಕೊಂಡಿದ್ದಾರೆ.

ಪೋಸ್ಟ್ ನಲ್ಲಿ ಏನಿದೆ?
ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ಅವರ ಹುಟ್ಟುಹಬ್ಬ. ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ. ಅವರ ಪ್ರೀತಿ-ಆದರ್ಶಗಳು ಸದಾ ಅವರ ಕುಟುಂಬ ಹಾಗೂ ಅಭಿಮಾನಿಗಳನ್ನು ಕಾಯುತ್ತಿರುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.

ದರ್ಶನ್ ಹಾಗೂ ಅಂಬರೀಶ್ ಅವರ ಸಂಬಂಧ ತಂದೆ-ಮಗನ ರೀತಿ ಇತ್ತು. ಅಂಬರೀಶ್ ಅವರ ಪ್ರತಿಯೊಂದು ಹುಟ್ಟುಹಬ್ಬಕ್ಕೆ ದರ್ಶನ್ ಮೊದಲ ಕೇಕ್ ತರುತ್ತಿದ್ದರು. ಅಲ್ಲದೇ ದರ್ಶನ್, ಅಂಬರೀಶ್ ಅವರ ಮಾತನ್ನು ಪಾಲಿಸುತ್ತಿದ್ದರು.

ಅಂಬರೀಶ್ ಅವರು ನಿಧನರಾದಾಗ ದರ್ಶನ್ ಸ್ವೀಡನ್‍ನಲ್ಲಿ ಯಜಮಾನ ಶೂಟಿಂಗ್‍ನಲ್ಲಿ ಬ್ಯುಸಿ ಇದ್ದರು. ಈ ವಿಷಯ ತಿಳಿದು ದರ್ಶನ್ ಶೂಟಿಂಗ್ ರದ್ದುಗೊಳಿಸಿ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಿಂತ ಸಂದರ್ಭದಲ್ಲಿಯೂ ಅವರಿಗೆ ಬೆಂಬಲ ನೀಡಿದ್ದರು.