Connect with us

Bengaluru City

‘ಏನಯ್ಯಾ ದರ್ಶನ್‍ಗೆ ತಲೆ ಇಲ್ವೇನಯ್ಯಾ, ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ’

Published

on

Share this

– ಇನ್ನು ಒಂದೆರಡು ಸೇರಿಸಿಕೊಂಡು ಹೇಳಲಿ
– ಇಂದ್ರಜಿತ್ ಆರೋಪಗಳಿಗೆ ದರ್ಶನ್ ತಿರುಗೇಟು

ಬೆಂಗಳೂರು: ದಾರಿಯಲ್ಲಿ ನಾಯಿ ಬಂದು ನಂಗೆ ಕಚ್ಚಿದರೆ ಸ್ಕ್ರೋಲಿಂಗ್ ನ್ಯೂಸ್. ಅದೇ ದರ್ಶನ್ ನಾಯಿಗೆ ಕಚ್ಚಿದರೆ, ಏನಯ್ಯಾ ದರ್ಶನ್‍ಗೆ ತಲೆ ಇಲ್ವೆನಯ್ಯಾ. ಹೋಗಿ ಹೋಗಿ ನಾಯಿಗೆ ಕಚ್ಚಿದ್ದಾನೆ ಎನ್ನುತ್ತಾರೆ ಎಂದು ಚಾಲೆಂಜಿಂಗ್ ಸ್ಟಾರ್ ಹೇಳಿದ್ದಾರೆ.

25 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿದಂತೆ ದರ್ಶನ್ ಮೊದಲು ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಈ ಪ್ರಕರಣಕ್ಕೆ ಹಲವು ರೆಕ್ಕೆಪುಕ್ಕಗಳು ಬರುತ್ತಿದೆ. ಈ ಪ್ರಕರಣದ ಹಿಂದೆ ಯಾರಿದ್ದಾರೆ ಎಂದು ಮಾಧ್ಯಮಗಳು ಕೇಳಿದ್ದಕ್ಕೆ, ಯಾರಿದ್ದಾರೋ ಗೊತ್ತಿಲ್ಲ. ನಾನು ರೆಕ್ಕೆ ಪುಕ್ಕ ಅಲ್ಲ ತಲೆಯನ್ನೇ ತೆಗೆಯುವವನು ಎಂದು ದರ್ಶನ್ ಡೈಲಾಗ್ ಹೊಡೆದಿದ್ದರು. ಇದನ್ನೂ ಓದಿ:ಸಣ್ಣ ಗಲಾಟೆ ನಡೆದಿದ್ದು ನಿಜ, ಆದ್ರೆ ದರ್ಶನ್ ಹೊಡೆದಿಲ್ಲ: ಸಂದೇಶ್ ನಾಗರಾಜ್ ಪುತ್ರ

ದರ್ಶನ್ ಅವರ ಈ ಹೇಳಿಕೆಗೆ ಇಂದ್ರಜಿತ್ ಲಂಕೇಶ್ ಆಕ್ಷೇಪ ವ್ಯಕ್ತಪಡಿಸಿ, ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ. ಕತ್ತರಿಸುತ್ತೇನೆ, ತುಂಡರಿಸುತ್ತೇನೆ ಎಂದು ಹೇಳುತ್ತಾರೆ. ನಟನಾಗಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದರು.

ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದರ್ಶನ್ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಹೋಟೆಲ್‍ನಲ್ಲಿ ಊಟ ಲೇಟಾಗಿ ಬಂದಾಗ ಕೇಳಿದ್ದೇವೆ. ಒಬ್ಬ ಹೋಟೆಲ್ ಕೆಲಸಗಾರನಿಗೆ ಬೈದರೆ ಹೋಟೆಲ್ ಮಾಲೀಕ ಕೇಳುತ್ತಾನೆ. ಆದರೆ ಹೊಡೆದಿರುವ ಆರೋಪ ಅವರು ಮಾಡಿದ್ದಾರೆ ಹೀಗಾಗಿ ಅವರನ್ನೇ ಕೇಳಿಕೊಳ್ಳಿ. ಇದನ್ನೇ ರೆಕ್ಕೆ ಪುಕ್ಕದ ಮಾತುಗಳು ಎಂದು ಹೇಳುವುದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನೀವೆಲ್ಲಾ ಸೇರಿದ್ದೀರಿ, ನಿಮ್ಮ ಜಾತಿಯನ್ನು ನಾವು ಕೇಳ್ತೀವಾ – ಇಂದ್ರಜಿತ್‍ಗೆ ದರ್ಶನ್ ತಿರುಗೇಟು

ಅರುಣಾ ಕುಮಾರಿ ವಿಚಾರದ ಜೊತೆಗೆ ಇನ್ನು ಒಂದೆರಡು ಸೇರಿಸಿಕೊಂಡು ಹೇಳಲಿ ನನಗೆ ಯಾವುದೇ ತೊಂದರೆ ಇಲ್ಲ. ಈ ವಿಚಾರವಾಗಿ ಪೊಲೀಸರು ತನಿಖೆ ನಡೆಸುತ್ತಾರೆ ನಂತರ ಮಾತನಾಡೋಣ ಎಂದರು.

ಸೆಲೆಬ್ರಿಟಿ ಎಂಬ ಪದವನ್ನು ಪಕ್ಕದಲ್ಲಿ ಇಡೀ ನಾನೊಬ್ಬ ಮನುಷ್ಯ. ನಾನು ಸೆಲೆಬ್ರೆಟಿಯಾಗಿದ್ದರೆ, ಈಗಲೂ ಮೇಕಪ್ ಹಾಕಿಕೊಂಡು ನಾಟಕ ಆಡಬೇಕಾಗುತ್ತದೆ. ಆರೋಪಗಳು ಮಾಡುವವರು ಮಾಡಲಿ. ನಾವು ಒಂದು ಏನಾದರೂ ಮಾತನಾಡಿದರೆ ಇನ್ನೊಂದು ತಪ್ಪಾಗುತ್ತದೆ. ಯಾರೋ ಬುದ್ಧಿವಂತರು ನಿನ್ನೆ ಒಂದು ಮಾತು ಹೇಳಿದರು. ದಾರಿಯಲ್ಲಿ ನಾಯಿ ಬಂದು ಕಚ್ಚಿದರೆ ಸ್ಕ್ರೋಲಿಂಗ್. ಅದೇ ದರ್ಶನ್ ನಾಯಿಗೆ ಕಚ್ಚಿದರೆ, ಏನಯ್ಯಾ ದರ್ಶನ್ ತಲೆ ಇಲ್ವೆನಯ್ಯಾ ಹೋಗಿ ನಾಯಿಗೆ ಕಚ್ಚಿದ್ದಾನೆ ಎಂದು ಹೇಳಿ ಟಾಂಗ್ ನೀಡಿದರು. ಇದನ್ನೂ ಓದಿ:ನನಗೇನು ಗೊತ್ತಿಲ್ಲ, ಈಗಲೇ ಗೊತ್ತಾಗಿದ್ದು: ಸಂದೇಶ್ ನಾಗರಾಜ್

ಅರುಣ್ ಕುಮಾರಿಯ ವಿಚಾರದೊಂದಿಗೆ ಇನ್ನೊಂದನ್ನು ತೆಗೆದಿರುವ ಊಹಾಪೋಹಗಳನ್ನು ಬಿಟ್ಟು ಬಿಡಿ. ಈ ವಿಚಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿದೆ. ಅಲ್ಲದೇ ಈ ವಿಚಾರವನ್ನು ಇಲ್ಲಿಯೇ ಮುಚ್ಚಿ ಹಾಕುತ್ತಿದ್ದೇನೆ ಎಂದು ಹೇಳುತ್ತಿದ್ದರು. ಇದನ್ನು ಇಲ್ಲಿಯೇ ಮುಚ್ಚಿ ಹಾಕುತ್ತಿಲ್ಲ. ಪೊಲೀಸರಿಗೆ ತನಿಖೆಗೆ ನೀಡಲು ಸಮಯ ಬೇಕು. ಬಳಿಕ ಮಾತನಾಡುತ್ತೇನೆ ಎಂದರು.

Click to comment

Leave a Reply

Your email address will not be published. Required fields are marked *

Advertisement