Connect with us

Cinema

ಡಾರ್ಲಿಂಗ್ ಪ್ರಭಾಸ್‍ರಿಂದ ಸರ್ಪ್ರೈಸ್ ರಿವೀಲ್

Published

on

ಹೈದರಾಬಾದ್: ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ ‘ಸಾಹೋ’ ಚಿತ್ರದ ಅಧಿಕೃತ ಪೋಸ್ಟರ್ ರಿಲೀಸ್ ಆಗಿದೆ. ಪ್ರಭಾಸ್ ಈ ಚಿತ್ರದ ಪೋಸ್ಟರ್ ನನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

ಪ್ರಭಾಸ್ ಚಿತ್ರದ ಪೋಸ್ಟರ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಅದಕ್ಕೆ, “ಎಲ್ಲಾ ಡಾರ್ಲಿಂಗ್ಸ್ ಗೆ ಇಲ್ಲಿದೆ ಸರ್ಪ್ರೈಸ್. ನನ್ನ ಮುಂದಿನ ಸಾಹೋ ಚಿತ್ರದ ಅಧಿಕೃತ ಪೋಸ್ಟರ್. ಅಗಸ್ಟ್ 15ರಂದು ನಿಮ್ಮನ್ನು ಚಿತ್ರದ ಮೂಲಕ ಭೇಟಿ ಮಾಡುತ್ತೇನೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಪ್ರಭಾಸ್, “ಹಾಯ್ ಡಾರ್ಲಿಂಗ್ಸ್. ಹೇಗಿದ್ದೀರಾ? ನಾಳೆ ಅಂದರೆ ಮಂಗಳವಾರ ನಿಮಗೆಲ್ಲರಿಗೂ ಒಂದು ಸರ್ಪ್ರೈಸ್ ಇದೆ. ನಾಳೆ ನನ್ನ ಇನ್‍ಸ್ಟಾಗ್ರಾಂ ಚೆಕ್ ಮಾಡಿ. ಐ ಲವ್ ಯೂ” ಎಂದು ಹೇಳಿದ್ದರು.

ಸಾಹೋ ಆ್ಯಕ್ಷನ್ ಚಿತ್ರವಾಗಿದ್ದು, ನಿರ್ದೇಶಕ ಸುಜೀತ್ ನಿರ್ದೇಶನ ಮಾಡುತ್ತಿದ್ದಾರೆ. ವಂಶಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಚಿತ್ರದಲ್ಲಿ ನೀಲ್ ನಿತಿನ್ ಮುಖೇಶ್, ಮಂದಿರಾ ಬೇಡಿ, ಅರುಣ್ ವಿಜಯ್ ಹಾಗೂ ಜಾಕಿ ಶ್ರಾಫ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಹೈದರಾಬಾದ್, ಮುಂಬೈ, ಅಬುಧಾಬಿ, ದುಬೈ, ರೋಮಾನಿಯಾ ಹಾಗೂ ಯೂರೋಪ್‍ನ ಕೆಲವು ಭಾಗಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಇದೇ ವರ್ಷ ಅಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದು ಸಾಹೋ ಚಿತ್ರ ಬಿಡುಗಡೆ ಆಗಲಿದೆ.

 

View this post on Instagram

 

Hello darlings… A surprise coming your way, tomorrow. Stay tuned… #SaahoSurprise

A post shared by Prabhas (@actorprabhas) on