CinemaDistrictsKarnatakaLatestSandalwood

ಚಂದನಾ ಕೆನ್ನೆಗೆ ಮುತ್ತು ಕೊಟ್ಟ ಕಿಶನ್

ಬೆಂಗಳೂರು: ಬಿಗ್ ಬಾಸ್ ಸೀಸನ್-7 ಕಾರ್ಯಕ್ರಮದಲ್ಲಿ ಸ್ಪರ್ಧಿ ಡ್ಯಾನ್ಸರ್ ಕಿಶನ್ ಅವರು ಚಂದನಾ ಅವರನ್ನು ಅಪ್ಪಿಕೊಂಡು ಮುತ್ತು ನೀಡಿದ್ದಾರೆ.

ಮಂಗಳವಾರ ಬಿಗ್‌ಬಾಸ್ ಸ್ಪರ್ಧಿಗಳಿಗೆ ಟಾಸ್ಕ್‌ವೊಂದನ್ನು ನೀಡಿದ್ದು, ಇದರಲ್ಲಿ ಸ್ಪರ್ಧಿಗಳು ಸ್ಪರ್ಧಿಗಳು ಎರಡು ಗುಂಪುಗಳಾಗಿ, ಗಾಳಿಯಲ್ಲಿ ಗೋಪುರ ಕಟ್ಟಬೇಕಿತ್ತು. ಈ ಟಾಸ್ಕ್ ಮಾಡುವಾಗ ಎರಡು ಗುಂಪುಗಳ ನಡುವೆ ಜೋರಾಗಿ ಜಗಳ ನಡೆದಿದೆ.

ಸ್ಪರ್ಧಿಗಳು ಜಗಳವಾಡುತ್ತಿರುವುದನ್ನು ನೋಡಿದ ಬಿಗ್‌ಬಾಸ್ ಕೊನೆಗೆ ಮನೆ ಮಂದಿಗೆ ಈ ಟಾಸ್ಕ್ ನಿಂದ ಸ್ಪಲ್ಪ ಬ್ರೇಕ್ ಕೊಟ್ಟಿದ್ದರು. ಈ ವೇಳೆ ಮನೆಯ ಮಂದಿ ಅಡುಗೆ ಮನೆಯಲ್ಲಿ ಕುಳಿತು ಟಾಸ್ಕ್ ವೇಳೆ ನಡೆದ ಜಗಳದ ಬಗ್ಗೆ ಮಾತನಾಡುತ್ತಿದ್ದರು.

ಈ ಟಾಸ್ಕ್ ಮಾಡುವಾಗ ಚಂದನಾ, ಕಿಶನ್ ಅವರಿಗೆ ಗಾಯ ಮಾಡಿದ್ದರು. ಹೀಗಾಗಿ ಎಲ್ಲರ ಜೊತೆ ಮಾತನಾಡುತ್ತಿದ್ದ ಕಿಶನ್‌ಗೆ ದೂರದಿಂದ ನಿಂತುಕೊಂಡು ‘ಸಾರಿ’ ಕೇಳಿದ್ದಾರೆ. ಚಂದನಾ ಕ್ಷಮೆ ಕೇಳುತ್ತಿದ್ದಂತೆ ಅವರ ಬಳಿ ಬಂದಿದ್ದಾರೆ.

ಚಂದನಾರ ಬಳಿ ಬಂದ ಕಿಶನ್ ಅಪ್ಪಿಕೊಂಡು ಪರವಾಗಿಲ್ಲ ಬಿಡಿ ಎಂದು ಹೇಳಿದ್ದಾರೆ. ಇದೇ ವೇಳೆ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದನ್ನು ಹರೀಶ್ ರಾಜ್ ನೋಡಿ ನಕ್ಕಿದ್ದಾರೆ. ಕೊನೆಗೆ ಮನೆಯರು ಏನಾಯ್ತು ಎಂದು ಕೇಳಿದ್ದಾರೆ. ಆಗ ಹರೀಶ್ ರಾಜ್ ಪ್ರೀತಿಯಿಂದ ಕಿಶನ್, ಚಂದನಾ ಅವರಿಗೆ ಮುತ್ತು ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ನಾಲ್ಕನೇ ವಾರ ಮನೆಯಿಂದ ಹೊರ ಹೋಗಲು ಪ್ರಿಯಾಂಕಾ, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ರಾಜ ತಾಳಿಕೋಟೆ, ಚಂದನ್ ಆಚಾರ್, ಚೈತ್ರಾ ಕೊಟ್ಟೂರು ಮತ್ತು ದೀಪಿಕಾ ದಾಸ್ ನಾಮಿನೇಟ್ ಆಗಿದ್ದಾರೆ.

Leave a Reply

Your email address will not be published.

Back to top button