Connect with us

Bengaluru City

ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ

Published

on

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್-7’ ಶುರುವಾಗಿ ಎರಡು ವಾರಗಳಾಗಿದೆ. ಈಗಾಗಲೇ ಮನೆಯಲ್ಲಿ ಜಗಳ ಶುರುವಾಗಿದ್ದು, ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ ಆಗಿದ್ದಾರೆ.

ಬಿಗ್ ಬಾಸ್ ಸ್ಪರ್ಧಿಗಳು ಮನೆಯ ಹೊರಗೆ ಕುಳಿತಿರುತ್ತಾರೆ. ಈ ವೇಳೆ ಕಿಶನ್, ಜೈ ಜಗದೀಶ್ ಅವರ ಬಳಿ ಹೋಗಿ ನೀವು ಎಲ್ಲರನ್ನು ಕೆಟ್ಟದಾಗಿ ನಿಂದಿಸುತ್ತೀರಿ. ತುಂಬಾ ಜನಕ್ಕೆ ಬೇಜಾರು ಮಾಡಿದ್ದೀರಿ. ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಜೈಜಗದೀಶ್ ವಿರುದ್ಧ ಗರಂ ಆಗಿದ್ದಾರೆ.

ಈ ವೇಳೆ ಜಗದೀಶ್ ನೀನು ಇಷ್ಟು ದಿನ ಇರಲಿಲ್ಲ. ನಾನು ಯಾರಿಗೂ ಬೇಜಾರು ಮಾಡಿಲ್ಲ. ನಾನು ನೇರವಾಗಿ ಎಲ್ಲರ ಜೊತೆ ಮಾತನಾಡುತ್ತೇನೆ. ನೀನು ಇಷ್ಟು ದಿನಗಳಿಂದ ಇಲ್ಲಿ ಇರಲಿಲ್ಲ. ಹಾಗಾಗಿ ನಿನಗೆ ಸಂಪೂರ್ಣ ವಿಷಯ ಗೊತ್ತಿಲ್ಲ. ನೀನು ನನಗೆ ಬುದ್ಧಿ ಹೇಳಲು ಬರಬೇಡ ಎಂದು ಜೈ ಜಗದೀಶ್ ಕೋಪದಲ್ಲಿಯೇ ಉತ್ತರಿಸಿದ್ದಾರೆ.

ಬಳಿಕ ಚೈತ್ರ ವಾಸುದೇವ್ ಅವರು ಕೂಡ ಕಣ್ಣೀರು ಹಾಕಿ, ನಾನು ಊಟಕ್ಕೆಂದು ಬಂದಿಲ್ಲ. ಬೇರೆಯವರ ಬಳಿ ನಾನು ಕಿತ್ತುಕೊಂಡು ತಿಂದಿಲ್ಲ. ನಾನು ತಿನ್ನುವುದಕ್ಕೆ ಬಂದಿರಲಿಲ್ಲ. ಕೆಲಸ ಹುಡುಕುತ್ತಿದ್ದೆ. ನಾನು ಕೇವಲ ಬಿಸ್ಕೇಟ್ ನೋಡುತ್ತಿದ್ದೆ. ಅದನ್ನು ತಿನ್ನಲು ಹೋಗಲಿಲ್ಲ ಎಂದು ಹೇಳಿದ್ದಾರೆ.

ಕಿಶನ್ ಹಾಗೂ ಜೈ ಜಗದೀಶ್ ನಡುವೆ ಜಗಳ ಜಾಸ್ತಿ ಆಗುತ್ತಿದ್ದಂತೆ ನಟ ಹರೀಶ್ ರಾಜ್, ಸುಜಾತ ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಕಿಶನ್ ಜಗಳವಾಡುತ್ತಿರುವುದನ್ನು ನೋಡಿ ಹರೀಶ್, ಇದು ಜೈ ಜಗದೀಶ್ ಅವರ ಆಡುಭಾಷೆ. ನಿನಗೆ ಹಾಗೆ ಅನಿಸಿರಬಹುದು ಎಂದು ಕಿಶನ್ ಹಾಗೂ ಜೈ ಜಗದೀಶ್ ಅವರನ್ನು ಸಮಾಧಾನಪಡಿಸಿದ್ದಾರೆ.

ಗಲಾಟೆಯ ಬಳಿಕ ಅಡುಗೆ ವಿಭಾಗದಲ್ಲಿದ್ದ ಜೈ ಜಗದೀಶ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದ ರಶ್ಮಿ ಅವರನ್ನು ಕರೆದಿದ್ದಾರೆ. ರಶ್ಮಿ ಅವರನ್ನು ಕರೆದು ನನಗೆ ಅಡುಗೆ ಡಿಪಾರ್ಟ್ ಮೆಂಟ್ ಬೇಡ. ನನಗೆ ಬೇರೆ ಡಿಪಾರ್ಟ್ ಮೆಂಟ್ ಬೇಕು ಎಂದು ಹೇಳಿದ್ದಾರೆ.