Advertisements

ಲಾರಿ ಮುಷ್ಕರ ನಿಂತಿತು, ಅಕ್ಕಿ, ಬೆಳೆ, ಸಕ್ಕರೆ ದರ ದಿಢೀರ್ ಏರಿಕೆ ಆಯ್ತು!

ಬೆಂಗಳೂರು: ಲಾರಿ ಮುಷ್ಕರ ನಿಂತಿದ್ರೂ ಅದರ ಬಿಸಿಮಾತ್ರ ಆರಿಲ್ಲ. ಲಾರಿ ಮುಷ್ಕರದಿಂದ ಸ್ಥಗಿತಗೊಂಡಿದ್ದ ಎಪಿಎಂಸಿಗಳು ಇನ್ನು ಚೇತರಿಕೆ ಕಂಡಿಲ್ಲ. ಇದ್ರ ಎಫೆಕ್ಟ್, ದರ ಏರಿಕೆಯ ಬಿಸಿ. ಮಾರ್ಕೆಟ್‍ನಲ್ಲಿ ಅಕ್ಕಿ ಮತ್ತು ಬೇಳೆ ದಾಸ್ತಾನು ಕೊರತೆಯಿಂದ ದರ ಏಕಾಏಕಿ ದರ ಗಗನಕ್ಕೇರಿದೆ.

Advertisements

ಲಾರಿ ಮುಷ್ಕರ ಹತ್ತು ದಿನಗಳ ಕಾಲ ನಡೆದು ಮೊನ್ನೆ ಮುಷ್ಕರ ಅಂತ್ಯಗೊಂಡಿದೆ. ಆದ್ರೆ ಮುಷ್ಕರದ ಎಫೆಕ್ಟ್ ಗೆ ಎಪಿಎಂಸಿ ಮಕಾಡೆ ಮಲಗಿಕೊಂಡಿದೆ. ಅಕ್ಕಿ ಬೇಳೆ ಕಾಳುಗಳು ಬರೋಬ್ಬರಿ ಕೆಜಿಗೆ ಹತ್ತು ರೂಪಾಯಿ ಏರಿಕೆ ಕಂಡಿದೆ. ಇನ್ನು ಒಂದು ತಿಂಗಳ ಕಾಲ ಮಾರ್ಕೆಟ್‍ನಲ್ಲಿ ಈ ದರ ಏರಿಕೆಯ ಬಿಸಿ ಇರುತ್ತೆ ಅನ್ನೋದು ವ್ಯಾಪಾರಿಗಳ ಲೆಕ್ಕಾಚಾರ.

ಅಕ್ಕಿ ದರ ಎಷ್ಟಾಯ್ತು? ರಾ ರೈಸ್ ಕೋಲಂ ಕೆಜಿಗೆ 60 ರೂಪಾಯಿ ಇದ್ದ ದರ 70 ರೂ.ಗೆ ಏರಿಕೆ ಕಂಡಿದೆ. ಇನ್ನು ಸೋನಾಮಸೂರಿ 52 ರೂಪಾಯಿಯಿಂದ 58 ರೂ.ಗೆ, ಸ್ಟೀಮ್ ಕೋಲಂ 45 ರಿಂದ 54 ರೂಪಾಯಿಗೆ, ಸ್ಟೀಮ್ ಸೊನಾಂ 32 ರೂಪಾಯಿಂದ 43 ರೂ.ಗೆ, ಇಡ್ಲಿ ಅಕ್ಕಿ 36 ರೂಪಾಯಿಯಿಂದ 40 ರೂಪಾಯಿಗೆ ಹಾಗೂ ದೋಸೆ ರೈಸ್ 35 ರೂಪಾಯಿಯಿಂದ 40 ರೂಪಾಯಿಗೆ ಏರಿಕೆ ಕಂಡಿದೆ.

Advertisements

ಬೆಳೆ ದರ ಎಷ್ಟಾಯ್ತು? ತೊಗರಿ 70 ರೂಪಾಯಿಯಿಂದ 90 ರೂಗೆ, ಉದ್ದಿನಬೇಳೆ 110 ರೂಪಾಯಿಯಿಂದ 120 ರೂ.ಗೆ ಹೆಸರುಬೇಳೆ 80 ರೂಪಾಯಿಯಿಂದ 90 ರೂಪಾಯಿಗೆ ಜಂಪ್ ಆಗಿದೆ. ಹುರುಳಿಕಾಳು 60 ರೂಪಾಯಿಯಿಂದ 70, ಅಲಸಂದೆ 90 ರೂಪಾಯಿಯಿಂದ 100 ರೂ. ಹಾಗೂ ಗೋಧಿ 30 ರೂಪಾಯಿಯಿಂದ 35 ರೂ.ಗೆ ಏರಿಕೆಯಾಗಿದೆ. ಇನ್ನು ಸಕ್ಕರೆ ಕೂಡ ಗ್ರಾಹಕರ ಪಾಲಿಗೆ ಕಹಿಯಾಗಿದ್ದು ಮೂರು ರೂಪಾಯಿ ಏರಿಕೆಯಾಗಿದೆ.

ಒಟ್ಟಾರೆ ಬೇಸಗೆಯ ಬಿಸಿ ಜನ್ರಿಗೆ ತಟ್ಟಿ ತಟ್ಟಿ ಜನ ಹೈರಾಣಗಿದ್ದರೆ, ಈಗ ಅಕ್ಕಿ ಬೇಳೆ ಕಾಳು ದರ ಏರಿಕೆ ಕಂಡಿದ್ದು ಮತ್ತೆ ಕಷ್ಟವಾಗಿದೆ.

Advertisements

https://www.youtube.com/watch?v=qd1QRjmx5jI

Advertisements
Exit mobile version