Saturday, 17th August 2019

ದಿನಭವಿಷ್ಯ: 20-10-2018

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಏಕಾದಶಿ ತಿಥಿ,
ಶನಿವಾರ, ಶತಭಿಷ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:10 ರಿಂದ 10:39
ಗುಳಿಕಕಾಲ: ಬೆಳಗ್ಗೆ 6:13 ರಿಂದ 7:41
ಯಮಗಂಡಕಾಲ: ಮಧ್ಯಾಹ್ನ 1:37 ರಿಂದ 3:06

ಮೇಷ: ಮನಸ್ಸಿನಲ್ಲಿ ಆತಂಕ-ಸಂಕಟ, ಮನೋರೋಗ ಬಾಧೆ, ಶತ್ರುಗಳ ನಾಶ, ಕೋರ್ಟ್ ಕೇಸ್‍ಗಳ ಭೀತಿ, ಆಕಸ್ಮಿಕ ಸಂಕಷ್ಟ ಎದುರಾಗುವುದು.

ವೃಷಭ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಸಹೋದ್ಯೋಗಿಗಳಿಂದ ಮಾನಹಾನಿ, ಇಲ್ಲ ಸಲ್ಲದ ಅಪವಾದ-ನಿಂದನೆ, ದಾಂಪತ್ಯದಲ್ಲಿ ಕಲಹ, ಸ್ನೇಹಿತರಿಂದ ನಿರಾಸೆ.

ಮಿಥುನ: ಆರ್ಥಿಕವಾಗಿ ಅನುಕೂಲ, ಸ್ಥಿರಾಸ್ತಿ ವಿಚಾರದಲ್ಲಿ ಮೋಸ, ಕೋರ್ಟ್ ಕೇಸ್‍ಗಳಲ್ಲಿ ಜಯ, ಮಕ್ಕಳಿಗೆ ಅನುಕೂಲ.

ಕಟಕ: ವಿಪರೀತ ಗೊಂದಲ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಮೊಂಡುತನ ಪ್ರದರ್ಶಿಸುವಿರಿ, ಗೌರವ-ಪ್ರತಿಭೆಗೆ ಹಿನ್ನಡೆ, ಆತ್ಮೀಯರಿಂದಲೇ ಅವಕಾಶ ಕೈತಪ್ಪುವುದು.

ಸಿಂಹ: ಸ್ನೇಹಿತರಿಂದ ಹಣಕಾಸು ಮೋಸ, ಕೆಟ್ಟ ಮಾತುಗಳನ್ನಾಡುವಿರಿ, ಸ್ಥಿರಾಸ್ತಿಗಾಗಿ ಮಾಡಿದ ಸಾಲ ಬಾಧೆ, ನೆಮ್ಮದಿ ಇಲ್ಲದ ಜೀವನ.

ಕನ್ಯಾ: ದೋಷಗಳು ಬಾಧಿಸುವುದು, ಗ್ಯಾಸ್ಟ್ರಿಕ್-ಅಲರ್ಜಿ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಹಿತ ಶತ್ರುಗಳಿಂದ ಮೋಸ, ಲಾಭ ಪ್ರಮಾಣ ಕುಂಠಿತ, ನೆರೆಹೊರೆ-ಬಂಧುಗಳಿಂದ ಸಾಲ.

ತುಲಾ: ಮನಸ್ಸಿನಲ್ಲಿ ಆತಂಕ ಶುರು, ನಿದ್ರೆಯಲ್ಲಿ ಕೆಟ್ಟ ಕನಸುಗಳು ಬೀಳುವುದು, ಕೆಟ್ಟ ಆಲೋಚನೆ ಬರುವುದು, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿಗಾಗಿ ಹಣ ಹೂಡಿಕೆ, ಮೋಸ ಹೋಗುವ ಸಾಧ್ಯತೆ.

ವೃಶ್ಚಿಕ: ಬಂಧುಗಳಿಂದ ಮಾನಸಿಕ ನೋವು, ಲಾಭ ಪ್ರಮಾಣ ಅಧಿಕವಾಗುವುದು, ಉದ್ಯೋಗ ಸ್ಥಳದಲ್ಲಿ ಅಧಿಕಾರಿಗಳಿಂದ ಕಿರಿಕಿರಿ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಮನಸ್ಸಿನಲ್ಲಿ ಆತಂಕ.

ಧನಸ್ಸು: ಸ್ವಯಂಕೃತ ಅಪರಾಧಗಳಿಂದ ಉದ್ಯೋಗ ನಷ್ಟ, ಹಿತ ಶತ್ರುಗಳು ಕಾಟ ಅಧಿಕ, ಆಕಸ್ಮಿಕ ಪ್ರಯಾಣ ಮಾಡುವಿರಿ.

ಮಕರ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣದಿಂದ ತೊಂದರೆ, ದಾಂಪತ್ಯದಲ್ಲಿ ಅನುಮಾನ, ಉದ್ಯೋಗ ಸ್ಥಳದಲ್ಲಿ ನಿರಾಸಕ್ತಿ,

ಕುಂಭ: ಚರ್ಮ ಸಮಸ್ಯೆ, ನೀರು-ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಆಯುಷ್ಯಕ್ಕೆ ಕಂಟಕಯಾಗುವ ಸಾಧ್ಯತೆ, ಸ್ನೇಹಿತರಿಂದ ಉದ್ಯೋಗ ನಷ್ಟ.

ಮೀನ: ಜೂಜು-ರೇಸ್, ಲಾಟರಿಗಳಿಂದ ನಷ್ಟ, ಕೆಟ್ಟ ಸ್ನೇಹಿತರಿಗೆ ಸಹಾಯ ಮಾಡುವಿರಿ, ಆಕಸ್ಮಿಕ ನಷ್ಟ ಎದುರಾಗುವುದು, ದಾಂಪತ್ಯದಲ್ಲಿ ಸಂಶಯ, ದೀರ್ಘಕಾಲದ ಅನಾರೋಗ್ಯ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *