Wednesday, 26th June 2019

Recent News

ದಿನಭವಿಷ್ಯ: 17-08-2018

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ವರ್ಷ ಋತು, ಶ್ರಾವಣ ಮಾಸ,
ಶುಕ್ಲ ಪಕ್ಷ, ಸಪ್ತಮಿ ತಿಥಿ,
ಶುಕ್ರವಾರ, ಸ್ವಾತಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 10:53 ರಿಂದ 12:27
ಗುಳಿಕಕಾಲ: ಬೆಳಗ್ಗೆ 7:45 ರಿಂದ 9:19
ಯಮಗಂಡಕಾಲ: ಮಧ್ಯಾಹ್ನ 3:35 ರಿಂದ 5:09

ಮೇಷ: ಕೈಗಾರಿಕೋದ್ಯಮದಲ್ಲಿ ಲಾಭ, ಕಟ್ಟಡ ನಿರ್ಮಾಣ ಕ್ಷೇತ್ರದವರಿಗೆ ಅನುಕೂಲ, ಉದ್ಯೋಗದಲ್ಲಿ ಉತ್ತಮ, ಮಾತೃವಿನಿಂದ ಬೈಗುಳ, ಪಿತ್ರಾರ್ಜಿತ ಆಸ್ತಿ ತಗಾದೆ, ಬಂಧುಗಳಿಂದ ಮಾನಸಿಕ ವೇದನೆ, ಚರ್ಮ ತುರಿಕೆ, ವಾತವಾರಣ ವ್ಯತ್ಯಾಸದಿಂದ ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ವೃಷಭ: ವಿಪರೀತ ಧೈರ್ಯ, ಸಾಹಸಕ್ಕೆ ಕೈ ಹಾಕುವಿರಿ, ವಯೋವೃದ್ಧರಿಂದ ನಿಂದನೆ, ಪತ್ರ ವ್ಯವಹಾರಗಳಲ್ಲಿ ತೊಂದರೆ, ಬಂಧು ಬಾಂಧವರಿಂದ ಅನುಕೂಲ, ಮಕ್ಕಳಿಂದ ಹಣ ಸಹಾಯ, ಅಶುಭ ವಾರ್ತೆ ಕೇಳುವಿರಿ, ಉದ್ಯೋಗದಲ್ಲಿ ಒತ್ತಡ, ಕೆಲಸ ಕಳೆದುಕೊಳ್ಳುವ ಭೀತಿ.

ಮಿಥುನ: ಕೌಟುಂಬಿಕ ಕಲಹ, ಗ್ಯಾಸ್ಟ್ರಿಕ್-ಉದರ ಬಾಧೆ, ದೇಹಕ್ಕೆ ಆಯಾಸ, ಹಣಕಾಸ ಮೋಸ, ವ್ಯಾಪಾರ-ವ್ಯವಹಾರದಲ್ಲಿ ನಷ್ಟ, ಉದ್ಯಮದಲ್ಲಿ ಸಮಸ್ಯೆ, ಆತುರ ಸ್ವಭಾವ, ಅನಗತ್ಯ ಕೋಪ ಮಾಡಿಕೊಳ್ಳುವಿರಿ, ಸಂಗಾತಿಯಲ್ಲಿ ಬೇಜವಾಬ್ದಾರಿತನ.

ಕಟಕ: ಸೈಟ್-ವಾಹನ ಖರೀದಿಗೆ ಸಾಲ ಪ್ರಾಪ್ತಿ, ಅತಿಯಾದ ಒಳ್ಳೆಯತನಕ್ಕೆ ಮೋಸ, ಸಹೋದರಿಯಿಂದ ತೊಂದರೆ, ಸೋದರ ಮಾವನಿಂದ ನಷ್ಟ,ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಅನುಮಾನ, ಪಾಲುದಾರಿಕೆಯಲ್ಲಿ ಮನಃಸ್ತಾಪ, ಗ್ಯಾಸ್ಟ್ರಿಕ್ ಸಮಸ್ಯೆ, ಹಾರ್ಮೋನ್ ವ್ಯತ್ಯಾಸ.

ಸಿಂಹ: ನಿದ್ರೆಯಲ್ಲಿ ಕೆಟ್ಟ ಕನಸುಗಳು, ಶತ್ರುಗಳಿಂದ ಕಿರಿಕಿರಿ, ಸಾಲಗಾರರಿಂದ ತೊಂದರೆ, ಬಂಧುಗಳಿಂದ ಆರ್ಥಿಕ ಸಹಾಯ ಕೇಳುವಿರಿ, ರಕ್ತ ದೋಷ, ಉಸಿರಾಟದ ಸಮಸ್ಯೆ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ಮಕ್ಕಳಿಂದ ಮನಸ್ಸಿಗೆ ನೋವು.

ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅನಿರೀಕ್ಷಿತ ಅವಕಾಶ, ಸ್ನೇಹಿತರಿಂದ ಸಾಲದ ಸಹಾಯ, ಮಕ್ಕಳಿಂದ ಲಾಭ, ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ, ದೇಹದಲ್ಲಿ ಆಯಾಸ, ಕಾಲು ನೋವು, ಸ್ವಯಂಕೃತ ಅಪರಾಧದಿಂದ ನಷ್ಟ, ಮಹಿಳೆಯರಿಂದ ನಿಂದನೆ.

ತುಲಾ: ಅಜೀರ್ಣ ಸಮಸ್ಯೆ, ರೋಗ ಬಾಧೆ, ಉದ್ಯೋಗ ನಿಮಿತ್ತ ಪ್ರಯಾಣ, ಉದ್ಯೋಗ ಸ್ಥಳದಲ್ಲಿ ಗೊಂದಲ, ಹಠಮಾರಿ ಸ್ವಭಾವ, ಸ್ವಯಂಕೃತ ಅಪರಾಧದಿಂದ ನಷ್ಟ, ದುಷ್ಟ ಆಲೋಚನೆ, ದುಶ್ಚಟಗಳಿಗೆ ದಾಸರಾಗುವಿರಿ, ಬಂಧುಗಳ ಆಗಮನ, ಪ್ರೇಮ ವಿಚಾರದಲ್ಲಿ ತೊಡಕು, ಮಕ್ಕಳಲ್ಲಿ ಮೊಂಡುತನ, ದೃಶ್ಯ ಮಾಧ್ಯಮ ಕ್ಷೇತ್ರಕ್ಕೆ ಸೆಳೆತ.

ವೃಶ್ಚಿಕ: ನಿದ್ರೆಯಲ್ಲಿ ಕೆಟ್ಟ ಸ್ವಪ್ನಗಳು, ಮಕ್ಕಳಿಂದ ಆರ್ಥಿಕ ನಷ್ಟ, ಭವಿಷ್ಯದ ಬಗ್ಗೆ ಗೊಂದಲ, ದೇಹದಲ್ಲಿ ಆಲಸ್ಯ, ಜೀವನದಲ್ಲಿ ಜಿಗುಪ್ಸೆ ಬೇಸರ,ಪ್ರಯಾಣದಲ್ಲಿ ತೊಂದರೆ, ದುಶ್ಚಟಗಳು ಅಧಿಕವಾಗುವುದು, ಅನಗತ್ಯ ತಿರುಗಾಟ, ದುಷ್ಟ ಸ್ನೇಹಿತರ ಸಹವಾಸ.

ಧನಸ್ಸು: ಆಕಸ್ಮಿಕ ಧನ ಯೋಗ, ಅಕ್ರಮ ಸಂಪಾದನೆಗೆ ಆಲೋಚನೆ, ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ದುಷ್ಟ ಆಲೋಚನೆ, ವಾಹನ-ಸ್ಥಿರಾಸ್ತಿಯಿಂದ ಲಾಭ, ವಿದ್ಯಾಭ್ಯಾಸದಲ್ಲಿ ಮುನ್ನಡೆ, ಉತ್ತಮ ಅವಕಾಶಗಳು ಪ್ರಾಪ್ತಿ.

ಮಕರ: ಗಂಟಲು ನೋವು, ಉಸಿರಾಟದ ಸಮಸ್ಯೆ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ವಿಪರೀತ ಕೋಪ, ದೇವತಾ ಕಾರ್ಯಗಳಿಗೆ ಖರ್ಚು, ವ್ಯಾಪಾರ-ವ್ಯವಹಾರದಲ್ಲಿ ತಪ್ಪು ನಿರ್ಧಾರ, ತಲೆ-ಕುತ್ತಿಗೆ ನೋವು, ಬೆನ್ನು ಸೆಳೆತ-ಚರ್ಮ ವ್ಯಾದಿ.

ಕುಂಭ: ತಂದೆಯಿಂದ ಆರ್ಥಿಕ ಲಾಭ, ಶತ್ರುಗಳು ದಮನ, ಕೆಲಸಗಾರರಿಂದ ಸಮಸ್ಯೆ, ಬಂಧುಗಳಿಂದ ಕಿರಿಕಿರಿ-ಅವಮಾನ, ದುಶ್ಚಟಗಳಿಗೆ ಬಲಿ, ಮಕ್ಕಳಲ್ಲಿ ಮೊಂಡುತನ, ಪ್ರೇಮ ವಿಚಾರದಲ್ಲಿ ಸಂಶಯ.

ಮೀನ: ಅನಿರೀಕ್ಷಿತ ಉದ್ಯೋಗಾವಕಾಶ, ಮಕ್ಕಳ ಭವಿಷ್ಯಕ್ಕೆ ತೊಂದರೆ, ವಾಹನ ಖರೀದಿಗೆ ಆಲೋಚನೆ, ಪಿತ್ರಾರ್ಜಿತ ಆಸ್ತಿ ಬಗ್ಗೆ ಚಿಂತನೆ, ಆರೋಗ್ಯದಲ್ಲಿ ಸಮಸ್ಯೆ, ಆಯುಷ್ಯಕ್ಕೆ ಕಂಟಕವಾಗುವ ಆತಂಕ, ಅನ್ಯರ ತಪ್ಪಿಗೆ ಶಿಕ್ಷೆಗೆ ಗುರಿಯಾಗುವಿರಿ, ಸಂಗಾತಿಯಿಂದ ಬೇಸರ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published. Required fields are marked *