Sunday, 19th May 2019

ದಿನಭವಿಷ್ಯ: 16-03-2019

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಶುಕ್ಲ ಪಕ್ಷ, ದಶಮಿ ತಿಥಿ,
ಶನಿವಾರ, ಪುನರ್ವಸು ನಕ್ಷತ್ರ

ರಾಹುಕಾಲ: ಬೆಳಗ್ಗೆ 9:30 ರಿಂದ 11:01
ಗುಳಿಕಕಾಲ: ಬೆಳಗ್ಗೆ 6:29 ರಿಂದ 7:59
ಯಮಗಂಡಕಾಲ: ಮಧ್ಯಾಹ್ನ 2:02 ರಿಂದ 3:33

ಮೇಷ: ಆರ್ಥಿಕ ಅನುಕೂಲ, ತಂದೆಯಿಂದ ಸಹಾಯ, ಪ್ರಯಾಣದಲ್ಲಿ ಅನುಕೂಲ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾನ-ಧರ್ಮದಲ್ಲಿ ಅಧಿಕ ಖರ್ಚು, ವ್ಯಾಪಾರೋದ್ಯಮದಲ್ಲಿ ಧನಾಗಮನ, ಹಣಕಾಸು ಸಂಪಾದನೆ, ಬಂಧುಗಳಿಂದ ಮಾನಹಾನಿ.

ವೃಷಭ: ಆಕಸ್ಮಿಕ ಸಾಲ ಮಾಡುವಿರಿ, ಸ್ತ್ರೀಯರಿಂದ ಅವಮಾನ, ಗೌರವಕ್ಕೆ ಧಕ್ಕೆ, ಆರೋಗ್ಯದಲ್ಲಿ ವ್ಯತ್ಯಾಸ, ಮಿತ್ರರು-ಸಹೋದರರಿಂದ ನಷ್ಟ, ಕೆಲಸಗಾರರು ದೊರೆಯುವರು, ಬಂಧುಗಳಿಂದ ಧನ ಸಹಾಯ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.

ಮಿಥುನ: ಶುಭ ಕಾರ್ಯಕ್ಕೆ ಆಲೋಚನೆ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ವ್ಯಾಪಾರ-ವ್ಯವಹಾರಕ್ಕೆ ಸುಸಮಯ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಕಾರ್ಯಗಳಲ್ಲಿ ಜಯ, ಉದ್ಯೋಗದಲ್ಲಿ ಪ್ರಗತಿ.

ಕಟಕ: ಗ್ಯಾಸ್ಟ್ರಿಕ್ ಸಮಸ್ಯೆ, ರೋಗ ಬಾಧೆ, ಸ್ಥಿರಾಸ್ತಿ-ವಾಹನದ ಮೇಲೆ ಸಾಲ ಮಾಡುವಿರಿ, ಮಾತೃವಿನಿಂದ ಅನುಕೂಲ, ಸ್ಥಿರಾಸ್ತಿ ಸಮಸ್ಯೆ ಬಗೆಹರಿಯುವುದು, ಹಿರಿಯರಿಂದ ಅನುಕೂಲ, ಮಧ್ಯಸ್ಥಿಕೆಯಿಂದ ತಗಾದೆ ನಿವಾರಣೆ.

ಸಿಂಹ: ಮಕ್ಕಳಲ್ಲಿ ಪ್ರಗತಿ, ನೆರೆಹೊರೆಯವರಿಂದ ಸಹಕಾರ, ಪ್ರಯಾಣದಲ್ಲಿ ಅಡೆತಡೆ, ಸ್ನೇಹಿತರಿಂದ ಧನ ಸಹಾಯ, ನಿದ್ರೆಯಲ್ಲಿ ಕೆಟ್ಟ ಕನಸ್ಸು, ಉದ್ಯೋಗ ಬದಲಾವಣೆಗೆ ಆಲೋಚನೆ.

ಕನ್ಯಾ: ನೀವಾಡುವ ಮಾತಿನಿಂದ ಕಲಹ, ಕುಟುಂಬದಲ್ಲಿ ಅಶಾಂತಿ, ಉದ್ಯೋಗದಲ್ಲಿ ಸಮಸ್ಯೆ, ಶುಭ ಕಾರ್ಯಕ್ಕೆ ಆಲೋಚನೆ, ವಾಹನ ಖರೀದಿ ಮುಂದುಡುವಿರಿ, ಸ್ವಯಂಕೃತ ಅಪರಾಧದಿಂದ ತೊಂದರೆ, ಮಹಿಳೆಯರಿಗೆ ನಿಂದನೆ.

ತುಲಾ: ಆರೋಗ್ಯದಲ್ಲಿ ವ್ಯತ್ಯಾಸ, ಗರ್ಭದೋಷ ಸಮಸ್ಯೆ, ಶತ್ರುಗಳ ಕಾಟ, ಸ್ವಯಂಕೃತ ಅಪರಾಧಗಳಿಂದ ನಷ್ಟ, ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ, ತಂದೆಯಿಂದ ಅಪವಾದ, ಪ್ರಯಾಣದಲ್ಲಿ ನಷ್ಟ ಸಾಧ್ಯತೆ.

ವೃಶ್ಚಿಕ: ಧನ ನಷ್ಟ, ಜಿಪುಣತನ ತೋರುವಿರಿ, ಅದೃಷ್ಟ ಕೈ ತಪ್ಪುವುದು, ದೂರ ಪ್ರದೇಶದಿಂದ ಧನಾಗಮನ, ಮಕ್ಕಳಿಗಾಗಿ ಅಧಿಕ ಖರ್ಚು, ಸ್ಥಿರಾಸ್ತಿ-ವಾಹನಕ್ಕಾಗಿ ನಷ್ಟ, ಸೋಲು-ನಿರಾಸೆಗಳಿಂದ ಬೇಸರ, ದುಷ್ಟ ವ್ಯಕ್ತಿಗಳ ಸಹವಾಸ ಮಾಡುವಿರಿ.

ಧನಸ್ಸು: ಮಿತ್ರರಿಂದ ಆರ್ಥಿಕ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಸ್ನೇಹಿತರಿಂದ ಸಂಕಷ್ಟ ದೂರವಾಗುವುದು, ಉದ್ಯೋಗ ಬದಲಾವಣೆಯಿಂದ ತೊಂದರೆ, ಸಂಗಾತಿಯಿಂದ ನೆರವು, ಮನಸ್ಸಿನಲ್ಲಿ ಕೆಟ್ಟಾಲೋಚನೆ, ಗಂಟಲು ನೋವು, ರೋಗ ಬಾಧೆ.

ಮಕರ: ಸಂಗಾತಿ ಆಯ್ಕೆಯಲ್ಲಿ ತಪ್ಪು ಮಾಡುವಿರಿ, ಮನಸ್ಸಿನಲ್ಲಿ ದೈವ ಚಿಂತನೆ, ಸಂಗಾತಿಯಿಂದ ನಷ್ಟ, ಉದ್ಯೋಗ ಕಳೆದುಕೊಳ್ಳುವ ಭೀತಿ, ಸಹೋದ್ಯೋಗಿಗಳಿಂದ ಗೌರವಕ್ಕೆ ಚ್ಯುತಿ, ಹಣಕಾಸಿಗಾಗಿ ದೂರ ಪ್ರಯಾಣ.

ಕುಂಭ: ತಂದೆಯಿಂದ ಆರ್ಥಿಕ ಸಹಾಯ, ಉದ್ಯೋಗ-ಸ್ಥಳ ಬದಲಾವಣೆಯಿಂದ ಅನುಕೂಲ, ಮಿತ್ರರಿಂದ ಅವಕಾಶಗಳು ಪ್ರಾಪ್ತಿ, ಆರ್ಥಿಕ ಸಮಸ್ಯೆ ಬಗೆಹರಿಯುವುದು, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಆರೋಗ್ಯದಲ್ಲಿ ಏರುಪೇರು.

ಮೀನ: ಅನಿರೀಕ್ಷಿತ ಅವಕಾಶ ಕೈ ತಪ್ಪುವುದು, ಉದ್ಯೋಗದಲ್ಲಿ ಒತ್ತಡ, ಸಂಗಾತಿಯಿಂದ ಕಿರಿಕಿರಿ, ಮನಸ್ಸಿಗೆ ಬೇಸರ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ತಾಯಿಯೊಂದಿಗೆ ವಾಗ್ವಾದ, ವಿದ್ಯಾಭ್ಯಾಸದಲ್ಲಿ ಅನುಕೂಲ, ಆಕಸ್ಮಿಕ ಧನ ಸಂಪತ್ತು ಪ್ರಾಪ್ತಿ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *