Connect with us

Dina Bhavishya

ದಿನ ಭವಿಷ್ಯ: 13-10-2019

Published

on

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಹುಣ್ಣಿಮೆ, ಭಾನುವಾರ.

ಮೇಷ: ಉದ್ಯೋಗದಲ್ಲಿ ಅಧಿಕವಾದ ಒತ್ತಡ, ವ್ಯಾಪಾರ-ವ್ಯವಹಾರದಲ್ಲಿ ಲಾಭ, ಕುಟುಂಬದಲ್ಲಿ ಬಾಂಧವ್ಯ ವೃದ್ಧಿ, ವಾದ-ವಿವಾದಗಳಿಂದ ದೂರವಿರಿ, ವಸ್ತ್ರಾಭರಣ ಖರೀದಿಸುವ ಆಲೋಚನೆ, ಸ್ನೇಹಿತರೊಂದಿಗೆ ದೂರ ಪ್ರಯಾಣ, ಮಾನಸಿಕ ನೆಮ್ಮದಿಗಾಗಿ ಪ್ರಯತ್ನಿಸುವಿರಿ.

ವೃಷಭ: ಹಣಕಾಸು ಸಮಸ್ಯೆ, ಆಕಸ್ಮಿಕ ಧನವ್ಯಯ, ಕೆಟ್ಟ ದೃಷ್ಠಿಯಿಂದ ತೊಂದರೆ, ದಂಡ ಕಟ್ಟುವ ಸಾಧ್ಯತೆ, ಮಾನಸಿಕ ವ್ಯಥೆ, ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸ ಕಾರ್ಯಗಳಲ್ಲಿ ವಿಳಂಬ, ವಿಪರೀತ ವ್ಯಸನ, ಅತಿಯಾದ ನಿದ್ರೆ.

ಮಿಥುನ: ಗುರು ಹಿರಿಯರಲ್ಲಿ ವಿಧೇಯತೆ, ಹಿರಿಯರ ಮಾರ್ಗದರ್ಶನದಿಂದ ಒಳಿತು, ಶತ್ರುಗಳ ನಾಶ, ದೂರ ಪ್ರಯಾಣ, ಮನಸ್ಸಿಗೆ ನೆಮ್ಮದಿ, ತೀರ್ಥಕ್ಷೇತ್ರ ದರ್ಶನ, ಯಾರನ್ನೂ ಹೆಚ್ಚು ನಂಬಬೇಡಿ, ಕಾಲಕ್ಕೆ ತಕ್ಕಂತೆ ಭೋಜನ ಇಲ್ಲದಿರುವಿಕೆ, ನಾನಾ ರೀತಿ ಸಂಪಾದನೆ.

ಕಟಕ: ಉದ್ಯೋಗದಲ್ಲಿ ಬಡ್ತಿ, ಅವಿವಾಹಿತರಿಗೆ ವಿವಾಹ ಯೋಗ, ವ್ಯವಹಾರದಲ್ಲಿ ಏರುಪೇರು, ಆತ್ಮೀಯರೊಂದಿಗೆ ವೈಮನಸ್ಸು, ಸ್ನೇಹಿತರನ್ನು ಭೇಟಿ ಮಾಡುವಿರಿ, ವ್ಯರ್ಥ ಧನಹಾನಿ, ವಸ್ತ್ರ ಖರೀದಿ, ಕುಟುಂಬದಲ್ಲಿ ಸಹಕಾರ ಲಭಿಸುವುದು, ಯತ್ನ ಕಾರ್ಯದಲ್ಲಿ ಸ್ವಲ್ಪ ವಿಳಂಬ.

ಸಿಂಹ: ಸ್ಥಿರಾಸ್ತಿ ವಿಚಾರದಲ್ಲಿ ಲಾಭ, ವಾಹನ ಖರೀದಿ ಯೋಗ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ, ದಾನ-ಧರ್ಮದಲ್ಲಿ ಆಸಕ್ತಿ, ದುರ್ಘಟನೆ ಸಂಭವಿಸುವ ಸಾಧ್ಯತೆ, ಹಿತ ಶತ್ರುಗಳಿಂದ ತೊಂದರೆ, ಕುಲದೇವರ ಅನುಗ್ರಹದಿಂದ ಶುಭ, ನೆಮ್ಮದಿಯಾಗಿರಲು ಆಲೋಚನೆ.

ಕನ್ಯಾ: ಹಣಕಾಸು ವಿಚಾರದಲ್ಲಿ ಹಿನ್ನಡೆ, ಆದಾಯಕ್ಕಿಂತ ಖರ್ಚು ಹೆಚ್ಚು, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಕುಟುಂಬದಲ್ಲಿ ಶಾಂತಿ ವಾತಾವರಣ, ವಾಹನ ಚಾಲಕರಿಗೆ ತೊಂದರೆ, ಕೆಲಸ ಕಾರ್ಯದಲ್ಲಿ ವಿಳಂಬ, ಚಂಚಲ ಮನಸ್ಸು, ಶತ್ರುಗಳಿಂದ ತೊಂದರೆ.

ತುಲಾ: ಪ್ರವಾಸ ಹೋಗುವ ಮನಸ್ಸು, ಪತ್ರ ವ್ಯವಹಾರಗಳಲ್ಲಿ ಲಾಭ, ಚರಾಸ್ತಿ ವ್ಯವಹಾರಗಳಲ್ಲಿ ಎಚ್ಚರ, ಇಷ್ಟವಾದ ವಸ್ತುಗಳ ಖರೀದಿ, ಉದ್ಯೋಗದಲ್ಲಿ ಒತ್ತಡ, ಮನೆ ಬದಲಾಯಿಸುವ ಮನಸ್ಸು, ಇಲ್ಲ ಸಲ್ಲದ ಅಪವಾದ, ಮಾನಸಿಕ ವ್ಯಥೆಯಾಗುವುದು.

ವೃಶ್ಚಿಕ: ಮನಸ್ಸಿನಲ್ಲಿ ಆತಂಕ, ಅತಿಯಾದ ಭಯ, ಆರೋಗ್ಯದಲ್ಲಿ ಏರುಪೇರು, ಸ್ನೇಹಿತರಿಂದ ಸಹಾಯ, ದಾಂಪತ್ಯದಲ್ಲಿ ಕಲಹ, ಶತ್ರುಗಳಿಂದ ತೊಂದರೆ, ಅಲ್ಪ ಲಾಭ ಅಧಿಕ ಖರ್ಚು, ಇಲ್ಲ ಸಲ್ಲದ ಅಪವಾದ.

ಧನಸ್ಸು; ದೂರ ಪ್ರಯಾಣ ಸಾಧ್ಯತೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮನಸ್ಸಿನಲ್ಲಿ ಭಯ ನಿವಾರಣೆ, ಧನ ಲಾಭ, ಶತ್ರು ನಾಶ, ವಾಹನ ಖರೀದಿ ಯೋಗ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಸುಖ ಭೋಜನ ಪ್ರಾಪ್ತಿ.

ಮಕರ: ಆತ್ಮೀಯರಲ್ಲಿ ಶತ್ರುತ್ವ, ಶೀತ ಸಂಬಂಧಿತ ರೋಗ, ಚಿನ್ನಾಭರಣ ಪ್ರಾಪ್ತಿ, ತಾಳ್ಮೆಯಿಂದ ಕಾರ್ಯ ಸಿದ್ಧಿ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಕೆಲಸಗಳಲ್ಲಿ ಪ್ರಗತಿ, ಮಾನಸಿಕ ನೆಮ್ಮದಿ ಪ್ರಾಪ್ತಿ.

ಕುಂಭ: ಬಂಧುಗಳ ಭೇಟಿ, ವ್ಯವಹಾರಗಳಲ್ಲಿ ಏರುಪೇರು, ಆರೋಗ್ಯದಲ್ಲಿ ಚೇತರಿಕೆ, ಅನ್ಯರಿಗೆ ಉಪಕಾರ ಮಾಡುವ ಮನಸ್ಸು, ಋಣ ವಿಮೋಚನೆ, ಸ್ತ್ರೀಯಿಂದ ಲಾಭ, ದ್ರವ್ಯ ಲಾಭ, ವಾಹನ ಚಾಲನೆಯಲ್ಲಿ ಎಚ್ಚರ, ಅತಿಯಾದ ನಿದ್ರಾಭಾವ.

ಮೀನ: ಅಲಂಕಾರಿಕ ವಸ್ತುಗಳಿಂದ ಲಾಭ, ಮನಸ್ಸಿನಲ್ಲಿ ಭಯ, ಆಲಸ್ಯ ಮನೋಭಾವ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ವ್ಯವಹಾರಗಳಲ್ಲಿ ಎಚ್ಚರ, ಅವಿವಾಹಿತರಿಗೆ ವಿವಾಹ ಯೋಗ, ಉತ್ತಮ ಬುದ್ಧಿಶಕ್ತಿ.