Monday, 17th June 2019

ದಿನಭವಿಷ್ಯ: 12-01-2019

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ
ಶನಿವಾರ, ಪೂರ್ವಭಾದ್ರಪದ ನಕ್ಷತ್ರ
ಬೆಳಗ್ಗೆ 8:43 ರಿಂದ ಉತ್ತರಭಾದ್ರಪದ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:39 ರಿಂದ 11:05
ಗುಳಿಕಕಾಲ: ಬೆಳಗ್ಗೆ 6:48 ರಿಂದ 8:13
ಯಮಗಂಡಕಾಲ: ಮಧ್ಯಾಹ್ನ 1:57 ರಿಂದ 3:23

ಮೇಷ: ಶುಭ ಕಾರ್ಯಗಳಿಗೆ ಓಡಾಟ, ದೇವತಾ ಕಾರ್ಯಗಳಿಗೆ ಖರ್ಚು, ವಯೋವೃದ್ಧರಿಗೆ ಸಹಾಯ ಮಾಡುವಿರಿ, ಮಕ್ಕಳಲ್ಲಿ ಆಲಸ್ಯ, ಮನಸ್ಸಿಗೆ ಬೇಸರ, ತಾಯಿಯೊಂದಿಗೆ ಮನಃಸ್ತಾಪ, ಉದ್ಯೋಗದಲ್ಲಿ ಕಿರಿಕಿರಿ, ಪ್ರಯಾಣದಲ್ಲಿ ಅಡೆತಡೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ.

ವೃಷಭ: ಸಂಗಾತಿಯೊಂದಿಗೆ ವಾಗ್ವಾದ ಕಿರಿಕಿರಿ, ಉದ್ಯೋಗ ಸ್ಥಳದಲ್ಲಿ ಬೇಸರ, ಕೆಲವೊಂದು ವಿಚಾರಗಳಿಂದ ತೊಂದರೆ, ತಂದೆಯಿಂದ ನೋವು, ಉದ್ಯೋಗ ಬದಲಾವಣೆಗೆ ಆಲೋಚನೆ, ನೆರೆಹೊರೆ-ಬಂಧುಗಳಿಂದ ಅನುಕೂಲ.

ಮಿಥುನ: ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಕಾಲಿಗೆ ಪೆಟ್ಟಾಗುವ ಸಾಧ್ಯತೆ, ವಾಹನ ಚಾಲನೆಯಲ್ಲಿ ಎಚ್ಚರ, ಹಣಕಾಸು ವಿಚಾರದಲ್ಲಿ ಕೆಟ್ಟ ನಿರ್ಧಾರ, ಅನಗತ್ಯ ಮಾತಿಂದ ಸಮಸ್ಯೆಗೆ ಸಿಲುಕುವಿರಿ, ಉದ್ಯೋಗದಲ್ಲಿ ನಿರಾಸಕ್ತಿ, ಪಾಲುದಾರಿಕೆಯಲ್ಲಿ ಅಭಿವೃದ್ಧಿ.

ಕಟಕ: ಕೆಲಸ ಕಾರ್ಯಗಳಲ್ಲಿ ವಿಳಂಬ, ಉದ್ಯೋಗದಲ್ಲಿ ಪ್ರಗತಿ, ಕಾಲು ನೋವು, ಉಷ್ಣ ಬಾಧೆ, ಉಸಿರಾಟದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಶ, ಅಧಿಕವಾದ ಕೋಪ, ಮಿತ್ರರಿಂದ ಅನುಕೂಲ, ಮಕ್ಕಳಲ್ಲಿ ಬೇಜವಾಬ್ದಾರಿತನ, ದೂರ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ.

ಸಿಂಹ: ಶತ್ರುಗಳ ಕಾಟ, ಸಾಲಗಾರರಿಂದ ಕಿರಿಕಿರಿ, ಮಾನಸಿಕ ಒತ್ತಡ, ಸಂಗಾತಿಯಿಂದ ಉಡಾಫೆ ಉತ್ತರ, ವೈದ್ಯರಿಗೂ ಗೋಚರವಾಗದ ರೋಗ ಬಾಧೆ, ಮಾಟ-ಮಂತ್ರದ ಭೀತಿ, ವಯೋವೃದ್ಧರಿಗೆ ನಿಂದನೆ ಮಾಡುವಿರಿ, ಹಳೇ ವಸ್ತು-ವಾಹನದಿಂದ ಖರ್ಚು, ನಿದ್ರೆಯಲ್ಲಿ ಕೆಟ್ಟ ಕನಸು ಬೀಳುವುದು.

ಕನ್ಯಾ: ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ-ವಾಹನ ಲಾಭ, ಮಕ್ಕಳ ಪ್ರೀತಿ ವಿಚಾರದಲ್ಲಿ ಆತಂಕ, ದುಶ್ಚಟಗಳು ಅಧಿಕ ಮಾಡಿಕೊಳ್ಳುವಿರಿ, ದಾಯಾದಿಗಳಿಂದ ಕುಟುಂಬದಲ್ಲಿ ಕಲಹ, ಕಾಲಿಗೆ ಪೆಟ್ಟು ಮಾಡಿಕೊಳ್ಳುವ ಸಾಧ್ಯತೆ, ವಿದ್ಯಾಭ್ಯಾಸದಲ್ಲಿ ತೊಂದರೆ.

ತುಲಾ: ಅನಗತ್ಯ ತಿರುಗಾಟ, ಶಕ್ತಿ ದೇವತೆಗಳ ಕ್ಷೇತ್ರಕ್ಕೆ ಭೇಟಿ, ಮಕ್ಕಳು-ಬಂಧುಗಳಿಂದ ಅವಮಾನ, ಉದ್ಯೋಗ-ಸ್ಥಳ ಬದಲಾವಣೆಯಿಂದ ತೊಂದರೆ, ಸ್ಥಿರಾಸ್ತಿಯಲ್ಲಿ ಮೋಸ, ಉದ್ಯೋಗ ಕಳೆದುಕೊಳ್ಳುವ ಭೀತಿ, ಹಿತ ಶತ್ರುಗಳ ಕಾಟ.

ವೃಶ್ಚಿಕ: ಹೆಣ್ಣು ಮಕ್ಕಳಿಂದ ಅನುಕೂಲ, ಆರ್ಥಿಕ ಸಹಾಯ ಪ್ರಾಪ್ತಿ, ನೆರೆಹೊರೆಯವರೊಂದಿಗೆ ವಾಗ್ವಾದ, ದುಶ್ಚಟಗಳಿಗೆ ದಾಸರಾಗುವಿರಿ, ಪ್ರಯಾಣದಲ್ಲಿ ತೊಂದರೆ, ಮನಸ್ಸಿನಲ್ಲಿ ಆತಂಕ, ಕುಟುಂಬಕ್ಕೆ ಮಾಟ-ಮಂತ್ರದ ಭೀತಿ.

ಧನಸ್ಸು: ಗ್ಯಾಸ್ಟ್ರಿಕ್ ಸಮಸ್ಯೆ, ಆರೋಗ್ಯದಲ್ಲಿ ಎಚ್ಚರಿಕೆ, ಹಳೇ ವಸ್ತುಗಳಿಂದ ಪೆಟ್ಟು, ಮಾನಸಿಕ ವೇದನೆ, ಆಕಸ್ಮಿಕ ದೇವ ಮಾನವರ ದರ್ಶನ, ವಿಕೃತ ಮನಃಸ್ಥಿತಿ ಹೆಚ್ಚಾಗುವುದು, ಸ್ಥಿರಾಸ್ತಿಯಿಂದ ನೋವು-ತೊಂದರೆ, ಆರ್ಥಿಕ ಮುಗ್ಗಟ್ಟು, ಬೇಡದ ವಿಚಾರಗಳಲ್ಲಿ ಚರ್ಚೆ ಮಾಡುವಿರಿ.

ಮಕರ: ಕಂಕಣ ಭಾಗ್ಯದ ಶುಭ ವಾರ್ತೆ ಕೇಳುವಿರಿ, ಅಕ್ರಮ ಸಂಪಾದನೆಗೆ ಮನಸ್ಸು, ಮಕ್ಕಳು ದಾರಿ ತಪ್ಪುವ ಸಾಧ್ಯತೆ, ಯಂತ್ರೋಪಕರಣಗಳಿಂದ ತೊಂದರೆ, ಕೆಲಸಗಾರರಿಂದ ಸಮಸ್ಯೆ ಉದ್ಭವ, ಬಂಧುಗಳಿಂದ ನೋವು, ಪರಿಚಯಸ್ಥ ವ್ಯಕ್ತಿಗಳಿಂದ ನಷ್ಟ, ವ್ಯಾಪಾರ-ವ್ಯವಹಾರದಲ್ಲಿ ತೊಂದರೆ.

ಕುಂಭ: ಕೆಲಸ ಕಾರ್ಯದಲ್ಲಿ ಜಯ, ಕಠಿಣ ವೃತ್ತಿಪರರಿಗೆ ಅನುಕೂಲ, ಸೇವಕರಿಂದ ಅಪವಾದ, ಮಾಟ-ಮಂತ್ರ, ತಂತ್ರದ ಭೀತಿ, ಹಣಕಾಸು ವಿಚಾರದಲ್ಲಿ ನಿಧಾನ, ಶೀತ ಬಾಧೆ, ಆರೋಗ್ಯದಲ್ಲಿ ಎಚ್ಚರಿಕೆ.

ಮೀನ: ಉದ್ಯೋಗದಲ್ಲಿ ಪ್ರಗತಿ, ಮಕ್ಕಳಿಂದ ನೋವು, ಪ್ರೀತಿ ಪ್ರೇಮ ವಿಚಾರದಲ್ಲಿ ಅನುಮಾನ, ಭಾವನೆಗಳಿಗೆ ಪೆಟ್ಟು, ದುರಾಸೆಗಳಿಗೆ ಬಲಿಯಾಗುವಿರಿ, ಬಾಲಗ್ರಹ ದೋಷ ಕಾಡುವುದು, ಆಧ್ಯಾತ್ಮದ ಕಡೆಗೆ ಒಲವು, ವೃದ್ಧರಿಗಾಗಿ ಖರ್ಚು ಮಾಡುವಿರಿ, ಹಳೇ ವಸ್ತು-ಯಂತ್ರೋಪಕರಣಗಳಿಗಾಗಿ ಖರ್ಚು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *